2024 ರಲ್ಲಿ ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸುವತ್ತ ಪ್ರಧಾನಿ ಮೋದಿ: I.N.D.I ಮೈತ್ರಿಗೆ ಎಷ್ಟು ಸೀಟ್? ಬಯಲಾಯ್ತು ಅಚ್ಚರಿಯ ಸಮೀಕ್ಷೆ

in Uncategorized 116 views

ನವದೆಹಲಿ: ಲೋಕಸಭಾ ಚುನಾವಣೆ (Lok Sabha election 2024) ಹತ್ತಿರ ಬರುತ್ತಿದೆ. ಈಗಾಗಲೇ ಭರದ ಸಿದ್ಧತೆ ನಡೆಸಿರುವ ರಾಜಕೀಯ ಪಕ್ಷಗಳು, ಈ ಬಾರಿ ಗೆದ್ದು ಗದ್ದುಗೆ ಏರುವ ಉತ್ಸಾಹದಲ್ಲಿವೆ. ಬಿಜೆಪಿ (BJP) ಮತ್ತೊಮ್ಮೆ ಅಧಿಕಾರ ಮರಳಿ ಪಡೆಯಲು ಸಜ್ಜಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆ (assembly election) ಗೆದ್ದು ಬೀಗಿರುವ ಬಿಜೆಪಿ, ಲೋಕಸಭೆಯಲ್ಲೂ ಮತ್ತೊಮ್ಮೆ ಗೆಲುವು ಪಡೆಯುವ ವಿಶ್ವಾಸದಲ್ಲಿದೆ. ಅತ್ತ ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು I.N.D.I.A. ನಾಯಕರು ತಂತ್ರ ಹೂಡುತ್ತಿದ್ದಾರೆ. ಇವೆಲ್ಲದರ ನಡುವೆ ಅಮೆರಿಕಾ (America) ಮೂಲದ ಪ್ರತಿಷ್ಠಿತ ಫಿಚ್‌ (FITCH) ವರದಿ ಬಂದಿದೆ. ಈ ಬಾರಿಯೂ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಅಂತ ಫಿಚ್ ವರದಿ ತಿಳಿಸಿವೆ ಅಂತ ಪಿಟಿಐ ವರದಿ ಮಾಡಿದೆ.

Advertisement

ಅಧಿಕಾರ ಉಳಿಸಿಕೊಳ್ಳಲಿದೆಯಾ ಬಿಜೆಪಿ?

2024ರ ಭಾರತದ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲಿದೆ ಅಂತ ಫಿಚ್ ವರದಿ ಹೇಳಿದೆ. ಮುಂಬರುವ ಏಪ್ರಿಲ್ – ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವ ಸಾಧ್ಯತೆ ಇದೆ ಎಂದು ಫಿಚ್ ವರದಿ ತಿಳಿಸಿದೆ.

ಮೂರನೇ ಬಾರಿಗೆ ಬಿಜೆಪಿಗೆ ಸಿಗುತ್ತಾ ಅಧಿಕಾರ?

ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿಯೂ ಸಹ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಈ ಬಾರಿ ಮತ್ತೊಮ್ಮೆ ಅಧಿಕಾರ ಉಳಿಸಿಕೊಂಡು, ಮೂರನೇ ಅವಧಿಗೆ ಬಿಜೆಪಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ ಅಂತ ಫಿಚ್ ವರದಿ ತಿಳಿಸಿದೆ.

ಅತ್ಯಧಿಕ ಸ್ಥಾನ ಪಡೆಯುತ್ತಾ ಬಿಜೆಪಿ?

ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ ಅಂತ ಫಿಚ್ ರೇಟಿಂಗ್ಸ್ ಹೇಳಿದೆ. ಆದಾಗ್ಯೂ ಮುಂದಿನ ಸಂಸತ್ತಿನಲ್ಲಿ ಬಹುಮತದ ಸಂಖ್ಯೆಯು ಆಡಳಿತ ಸುಧಾರಣಾ ಕಾರ್ಯಸೂಚಿಯ ಮಹತ್ವಾಕಾಂಕ್ಷೆಯ ಮೇಲೆ ಪ್ರಭಾವ ಬೀರಬಹುದು ಎಂದೂ ವರದಿ ಹೇಳಿದೆ.

ಬಾಂಗ್ಲಾದಲ್ಲೂ ಶೇಖ್ ಹಸೀನಾಗೆ ಮತ್ತೊಮ್ಮೆ ಅಧಿಕಾರ

ಇನ್ನು ಮುಂದಿನ ಜನವರಿಯಲ್ಲಿ ಬಾಂಗ್ಲಾದೇಶದಲ್ಲೂ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಅಧ್ಯಕ್ಷೆ ಹಾಗೂ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಅಂತ ಫಿಚ್ ವರದಿ ತಿಳಿಸಿದೆ.

2024ರಲ್ಲಿ ಅಧ್ಯಕ್ಷೀಯ ಚುನಾವಣೆಗಳು

ಜಾಗತಿಕ ರೇಟಿಂಗ್ ಏಜೆನ್ಸಿ ಏಷ್ಯನ್ ಪ್ರದೇಶದಲ್ಲಿ ಅದರ ಅರ್ಧದಷ್ಟು ರೇಟ್ ಮಾಡಿದ ಪೋರ್ಟ್‌ಫೋಲಿಯೊಗಳು 2024 ರಲ್ಲಿ ಶಾಸಕಾಂಗ ಅಥವಾ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸಲಿವೆ ಎಂದು ಹೇಳಿದೆ. 2024ರ ಏಷ್ಯನ್ ಚುನಾವಣೆಗಳಲ್ಲಿ ಸುಸ್ಥಿರತೆಯು ಪ್ರಮುಖ ವಿಷಯವಾಗಿರುವುದನ್ನು ನಿರೀಕ್ಷಿಸುತ್ತದೆ ಎಂದು ಫಿಚ್ ವರದಿ ಹೇಳಿದೆ.

Advertisement
Share this on...