ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಗೆ ಹೂಮಳೆ ಸುರಿದ ಬಾಬ್ರಿ ಮಸ್ಜಿದ್ ಪರ ಕೇಸ್ ಹಾಕಿ ಹೋರಾಡಿದ್ದ ಇಕ್ಬಾಲ್ ಅನ್ಸಾರಿ

in Uncategorized 76 views

ಅಯೋಧ್ಯೆ: ಬಾಬರಿ ಮಸೀದಿ-ರಾಮ ಜನ್ಮಭೂಮಿ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ವಾಹನದ ಮೇಲೆ ಹೂವಿನ ಮಳೆಗರೆದರು. ಇಕ್ಬಾಲ್ ಅನ್ಸಾರಿ ಮತ್ತು ಇತರ ಸಾವಿರಾರು ಮಂದಿ ರಸ್ತೆಬದಿಯಲ್ಲಿ ನಿಂತು ಮೋದಿಯನ್ನು ಸ್ವಾಗತಿಸಿದರು.

“ಅಯೋಧ್ಯೆಯ ಭೂಮಿ ಅಪ್ರತಿಮವಾಗಿದೆ. ಇಂದು ಪ್ರಧಾನಿ ಮೋದಿ ನಮ್ಮ ಸ್ಥಳಕ್ಕೆ ಬಂದಿದ್ದಾರೆ, ಅತಿಥಿಗಳನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ” ಎಂದು ಅನ್ಸಾರಿ ಹೇಳಿದ್ದಾರೆ.

Advertisement

ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರವಾದ ಪ್ರಮುಖ ದಾವೆದಾರರಾಗಿದ್ದರು.


ಶನಿವಾರ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ದೊರೆಯಿತು. ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು ಮತ್ತು ಹೂವುಗಳನ್ನು ಸುರಿಸಿದರು.

ಅಯೋಧ್ಯೆಗೆ ಬಂದಿಳಿದ ನಂತರ, ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮ್ಮುಖದಲ್ಲಿ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿದರು.

Advertisement
Share this on...