“ಮೋದಿಯನ್ನ ದ್ವೇಷಿಸೋದು ಒಳ್ಳೇದಲ್ಲ, ರಾಮನನ್ನ ವಿರೋಧಿಸೋರು ನಾಸ್ತಿಕರು, ನಾಲಾಯಕರು”: ಕಾಂಗ್ರೆಸ್ಸಿಗ ಆಚಾರ್ಯ ಪ್ರಮೋದ್ ಕೃಷ್ಣನ್

in Uncategorized 41 views

ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ ಎಂದು ತಮ್ಮದೇ ಕಾಂಗ್ರೆಸ್‌ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ನವದೆಹಲಿ: ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಬಹುದು ಮತ್ತು ಅವರ ನಿರ್ಧಾರಗಳನ್ನು ಟೀಕಿಸಬಹುದು. ಆದರೆ ಮೋದಿಯನ್ನು ದ್ವೇಷಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ.

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು ‘ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ’ ಎಂದು ತಮ್ಮದೇ ಕಾಂಗ್ರೆಸ್‌ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ‘ರಾಮನನ್ನು ವಿರೋಧಿಸುವವರು ನಾಸ್ತಿಕರು. ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣವನ್ನು ಪಡೆದವರು ಅದೃಷ್ಟವಂತರು ಮತ್ತು ಹೋಗದಿದ್ದರೆ ಅದು ಅವರ ದೌರ್ಭಾಗ್ಯ’ ಎಂದು ಮಂದಿರ ಉದ್ಘಾಟನೆಗೆ ಹೋಗದಿರಲು ನಿರ್ಧರಿಸಿರುವ ಟಿಎಂಸಿ ಹಾಗೂ ಎಡಪಕ್ಷಗಳನ್ನು ಟೀಕಿಸಿದ್ದಾರೆ.

ಪಾಕಿಸ್ತಾನಿಗಳು ಕೂಡ ರಾಮನನ್ನು ದ್ವೇಷಿಸಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಭಾರತದಲ್ಲಿ ದ್ವೇಷ ಸರಿಯೇ ಎಂದೂ ತಮ್ಮದೇ ನಾಯಕರಿಗೆ ಕುಟುಕಿದ್ದಾರೆ.

ಇತ್ತ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ರಾಮ ಮಂದಿರ ಆಯಿತು, ರಾಮರಾಜ್ಯ ಯಾವಾಗ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಚಿಲ್ಲರೆ ಗಳಿಗೆಯಲ್ಲಾ ಉತ್ತರ ಕೊಡುವುದಿಲ್ಲ ಎಂದು ಹೇಳಿದರು.

ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ರವಿವಾರ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯಂತಹವರ ಮಾತಿಗೆಲ್ಲ ನಾನು ಉತ್ತರ ಕೊಡೊಲ್ಲ ಎಂದರು.

ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಚಾರ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕ ಆಯ್ತು, ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದ್ಧಾರೆ.

ಬಿಜೆಪಿಯವರು ರಾಮ ಮಂದಿರ ಕಟ್ಟುವುದಿಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು. ಆದರೆ ಈಗ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.

ಪ್ರಪಂಚದಲ್ಲಿ ಭಾರತದ ಸಂಸ್ಕೃತಿ ಬೆಳೆಯಬೇಕು. ಇದು ರಾಮ ಮಂದಿರ ಅಲ್ಲ ರಾಷ್ಟ್ರ ಮಂದಿರ ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಈ ಹಿಂದೆ ಅಹಿಂದ ಅಂತ ಹೋಗುತ್ತಿದ್ದರು. ಈಗ ಹಿಂದುಳಿದವರು, ದಲಿತರು, ಕ್ರೈಸ್ತರನ್ನ ಬಿಟ್ಟಿದ್ದಾರೆ. ಇನ್ನು ಅಲ್ಪಸಂಖ್ಯಾತರು ಮಾತ್ರ ಉಳಿದಿದ್ದಾರೆ. ಅವರ ಮೇಲೆ ರಾಜಕೀಯ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಲೆಕ್ಕ ಎಂದು ಟೀಕಿಸಿದರು.

ರಾಮಮಂದಿರ ಆಗಬಾರದು ಎಂದು ಕೋರ್ಟಿಗೆ ಹೋದವರು ಕೂಡಾ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುಷ್ಪ ವೃಷ್ಟಿ ಮಾಡಿದ್ದಾರೆ. ರಾಮಮಂದಿರ ಕಟ್ಟಿದ್ದು ಒಳ್ಳೆಯದು ಎಂದು ಹೇಳಿದ್ದಾರೆ. ಆದರೆ, ಹಿಂದೂ- ಮುಸ್ಲಿಂ ಒಟ್ಟಾಗಬಾರದು ಎನ್ನುವುದು ಕಾಂಗ್ರೇಸ್ ಮತ್ತು ಸಿದ್ದರಾಮಯ್ಯ ಅವರ ಉದ್ದೇಶ ಎಂದರು.

ಮೋದಿ ಅವರು ಜಾರಿಗೆ ತಂದ ತ್ರಿವಳಿ ತಲಾಕ್ ರದ್ದತಿಯನ್ನು ಮುಸ್ಲಿಮರೇ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್‌ನವರು ಒಪ್ತಿಲ್ಲ ಈಶ್ವರಪ್ಪ ವ್ಯಂಗ್ಯವಾಡಿದರು.

ನನ್ನ ಪುತ್ರ ಕಾಂತೇಶ್ ಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದೇನೆ. ಟಿಕೇಟ್ ಕೊಟ್ಟರೆ ಹಾವೇರಿಯಿಂದ ಸ್ಪರ್ಧೆ ಮಾಡುತ್ತಾನೆ ಎಂದರು

ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೆದರುತ್ತಿಲ್ಲ. ಬಿಜೆಪಿ ಯಾರಿಗಾದರೂ ಹೆದರಿದ್ದರೆ ಪಂಚಾಯಿತಿಯಿಂದ ಹಿಡಿದು ಪ್ರಧಾನಿ ಹುದ್ದೆಯವರೆಗೆ ಗೆಲ್ಲುತ್ತಿರಲಿಲ್ಲ. ಬಿಜೆಪಿ ಹೆದರಿದ್ದರೆ 17 ರಾಜ್ಯದಲ್ಲಿ ಗೆಲ್ಲಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.

Advertisement
Share this on...