ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರು ಭಾಗವಹಿಸಿದ್ದರು. ಇದಾದ ಬಳಿಕ ಮುಸ್ಲಿಂ ಸಂಘಟನೆಯಿಂದ ಟೀಕೆ ಎದುರಿಸಿದ್ದಾರೆ .
ಈ ಕುರಿತಾಗಿ ಮಾತನಾಡಿರುವ ಅವರು, ಪ್ರೀತಿ ಹಾಗೂ ಸಾಮರಸ್ಯದ ಸಂದೇಶವನ್ನು ಹರಡುವುದಷ್ಟೇ ನಮ್ಮ ಕೆಲಸ. ನಾವು ಹಿಂದಾಗಿದ್ದನ್ನು ಮರೆತು ಮುಂದಕ್ಕೆ ಸಾಗಬೇಕಿದೆ ಎಂದು ಹೇಳಿದ್ದಾರೆ.
ನಮಗೆ ಹಳೆಯ ವೈಷಮ್ಯಗಳು ಹಾಗೂ ವೈರತ್ವಗಳನ್ನು ಇಲ್ಲಿಗೆ ಮುಗಿಸಿ ಮುಂದಕ್ಕೆ ಸಾಗುವುದರ ಬಗ್ಗೆ ಯೋಚನೆ ಮಾಡಬೇಕು . ನಮ್ಮ ಮುಂದಿನ ಪೀಳಿಗೆಗಳು ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುವುದರತ್ತ ನಾವು ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ.
ರಾಮಮಂದಿರ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ತಮ್ಮ ಮನಸ್ಸಿಗೆ ಬಂದ ಏಕೈಕ ಆಯೋಚನೆ ಏನೆಂದರೆ, ‘ದೇಶ, ಅಭಿವೃದ್ಧಿ ಮತ್ತು ಪ್ರೀತಿ’ ಎಂದು ಇಲ್ಯಾಸಿ ಹೇಳಿದ್ದಾರೆ.
ನಾನು ಪೈಘಮ್-ಎ-ಮೊಹಬ್ಬತ್ (ಪ್ರೀತಿಯ ಸಂದೇಶ) ಜೊತೆಯಲ್ಲಿ ಇಟ್ಟುಕೊಂಡು ಅಲ್ಲಿಗೆ ಹೋಗಿದ್ದ” ಎಂದು ಹೇಳಿದ್ದಾರೆ.
ಎರಡು ಕಡೆಯ ನಡುವಿನ ಹಗೆತನ ಮತ್ತು ಕಲಹ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಇದು ಕೊನೆಗೊಳ್ಳಬೇಕು. ಇದು ಮುಂದೆ ಸಾಗುವ ಸಮಯ. ನಮ್ಮ ನಂಬಿಕೆ ಮತ್ತು ಧರ್ಮ ಖಂಡಿತವಾಗಿಯೂ ವಿಭಿನ್ನವಾಗಿರಬಹುದು. ನಮ್ಮ ಮುಖ್ಯ ಧರ್ಮ ಇನ್ಸಾನ್ ಮತ್ತು ಇನ್ಸಾನಿಯತ್. ನಾವು ಭಾರತದಲ್ಲಿ ವಾಸಿಸುತ್ತೇವೆ ಮತ್ತು ಭಾರತೀಯರು. ನಾವೆಲ್ಲರೂ ಭಾರತವನ್ನು ಬಲಿಷ್ಠಗೊಳಿಸಬೇಕಾಗಿದೆ. ರಾಷ್ಟ್ರ ಸರ್ವಪ್ರಿಯ (ರಾಷ್ಟ್ರವೇ ಸರ್ವಶ್ರೇಷ್ಠ) ಎಂದಿದ್ದಾರೆ.
ಇದು ಪ್ರಜಾಪ್ರಭುತ್ವ ನನ್ನ ವಿರೋಧಿಗಳು ನನ್ನ ಬಗ್ಗೆ ಏನು ಬೇಕಾದರೂ ಹೇಳಬಹುದು. ಆದರೆ, ನಾನು ಕಾರ್ಯಕ್ರಮಕ್ಕೆ ಹೋಗಿದ್ದಕ್ಕಾಗಿಯೇ ನನ್ನ ಮೇಲೆ ಟೀಕೆ ಹಾಗೂ ವಿರೋಧ ಮಾಡುವುದು ಸರಿಯಲ್ಲ . ನನ್ನನ್ನು ಇಡೀ ದೇಶದಲ್ಲಿ ತುಂಬಾ ಮಂದಿ ವಿರೋಧಿಸುತ್ತಾರೆ ಎನ್ನುವುದನ್ನು ನನ್ನ ವಿರೋಧಿಗಳಿಗೆ ಹೇಳಲು ಬಯಸುತ್ತೇನೆ. ನಾನು ಅವರಿಗೆ ಹೇಳೋದಿಷ್ಟೇ, ನಿಮ್ಮ ಯೋಚನೆಗಳನ್ನು ಬದಲಿಸಿಕೊಳ್ಳಿ, ಆಗ ನೀವು ನೋಡುವ ಎಲ್ಲವೂ ಬದಲಾಗಿದ್ದಂತೆ ಕಾಣುತ್ತದೆ ಎಂದಿದ್ದಾರೆ.
5.5 ಲಕ್ಷ ಮಸೀದಿಗಳಿಗೆ ಜವಾಬ್ದಾರರಾಗಿರುವ ಮುಖ್ಯ ಧರ್ಮಗುರುಗಳಾಗಿದ್ದು, ಪ್ರೀತಿ ಮತ್ತು ಸಾಮರಸ್ಯದ ಸಂದೇಶವನ್ನು ಹರಡುವುದು ಅವರ ಕೆಲಸವಾಗಿತ್ತು ಎಂದು ಇಲ್ಯಾಸಿ ತಿಳಿಸಿದ್ದಾರೆ.
ವಿರೋಧ ಪಕ್ಷದವರ ಕೆಲಸ ವಿರೋಧಿಸುವುದು. ನಾನು ಮುಖ್ಯ ಇಮಾಮ್ ಮತ್ತು ನಾವು ನೀಡಲು ಬಯಸುವ ಸಂದೇಶವೆಂದರೆ ನಾವು ಪರಸ್ಪರ ಶಾಂತಿಯುತವಾಗಿ ಬದುಕಬೇಕು ಎನ್ನುವುದಾಗಿದೆ ಎಂದಿದ್ದಾರೆ. ಭಾರತೀಯರು ಹಿಂದಿನದನ್ನು ಮರೆತು ಮುನ್ನಡೆಯಬೇಕಾಗಿದೆ ., ಸಂವಾದವೊಂದೇ ನಮ್ಮ ಮುಂದಿರುವ ದಾರಿ ಎಂದರು.’ನಾವು ಸಹಬಾಳ್ವೆ ಮಾಡಬೇಕು ಮತ್ತು ದ್ವೇಷದ ವಿರುದ್ಧ ಹೋರಾಡಬೇಕು’ ಎಂದಿದ್ದಾರೆ.
ಅಯೋಧ್ಯೆಯ ಹೊಸ ಮಸೀದಿಯ ಕಾಮಗಾರಿಯನ್ನು ಈವರೆಗೂ ಏಕೆ ಪ್ರಾರಂಭಿಸಿಲ್ಲ ಮತ್ತು ಮುಸ್ಲಿಂ ಸಮುದಾಯವು ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಮಾಣವಾಗಲಿರುವ ಮಸೀದಿಗೆ ಸಮಿತಿಯನ್ನು ರಚಿಸಲಾಗಿದೆ, ಆದರೆ ಇದೀಗ ಇದು ವಿರೋಧಿಸುವ ಸಮಯವಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಮೋದಿ ಅವರು ಕಾರ್ಯಕ್ರಮದಲ್ಲಿ ಹೇಳಿದ್ದ ಮಾತನ್ನೇ ಪುನರಾವರ್ತನೆ ಮಾಡಿ ಮೆಚ್ಚುಗೆ ಸೂಚಿಸಿದ ಅವರು, ರಾಮ್ ಎನ್ನುವುದು ಸಮಾಧಾನ, ವಿವಾದವಲ್ಲ ಎಂದಿದ್ದಾರೆ.
ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವರ ನಿರ್ಧಾರದ ಬಗ್ಗೆ ಇಲ್ಯಾಸಿ ಹಲವಾರು ವಲಯಗಳಿಂದ ಟೀಕೆಗಳನ್ನು ಸ್ವೀಕರಿಸಿದ್ದಾರೆ.