ರಾಮಮಂದಿರ ಆಯ್ತು, ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಮೊದಲ ‘ૐ’ ಆಕಾರದ ದೇವಾಲಯ

in Uncategorized 3,764 views

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ವಿಶ್ವದ ಮೊದಲ ‘ಓಂ’ ಆಕಾರದ ದೇವಾಲಯ ಇದೀಗಾ ಭಾರೀ ಸುದ್ದಿಯಲ್ಲಿದೆ. ದೇವಾಲಯದ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವರ್ಷ 2024 ಮುಗಿಯುವುದರೊಳಗೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

Advertisement

ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ‘ಓಂ’ ಆಕಾರದ ದೇವಾಲಯ(Om shaped Temple) ವು ಇದೀಗಾ ವಿಶ್ವದೆಲ್ಲಡೆ ಭಾರೀ ಸುದ್ದಿಯಲ್ಲಿದೆ. ಪ್ರಪಂಚದಲ್ಲೇ ಓಂ ಆಕಾರದಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಇದಾಗಿದೆ. 1995ರಲ್ಲಿ ಈ ಮಹಾ ದೇವಾಲಯದ ಶಂಕುಸ್ಥಾಪನೆ ನಡೆದಿದ್ದು, ಈ ದೇವಾಲಯದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವರ್ಷ 2024 ಮುಗಿಯುವುದರೊಳಗೆ ದೇವಾಲಯದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಫೆಬ್ರವರಿ 10-19 ರ ನಡುವೆ ನಡೆಯಲಿದೆ ಎಂದು ವರದಿಯಾಗಿದೆ. ಈ ಶಿವ ದೇವಾಲಯದಲ್ಲಿ 1008 ವಿವಿಧ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು,ಈ ಓಂ ಆಕಾರದ ದೇವಾಲಯದ ಆವರಣದಲ್ಲಿ 108 ಕೊಠಡಿಗಳಿವೆ. ಇದರ ಗೋಪುರವು 135 ಅಡಿ ಎತ್ತರವಾಗಿದೆ ಮತ್ತು ದೇವಾಲಯದ ಮಧ್ಯಭಾಗದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿ ಇದೆ. ಮೇಲ್ಭಾಗದಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ.

ಈ ದೇವಾಲಯದ ಶಂಕುಸ್ಥಾಪನೆ 1995 ರಲ್ಲಿ ನಡೆದಿದ್ದು, ಕಳೆದ 25 ವರ್ಷಗಳಿಂದ ಈ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಓಂ ಆಶ್ರಮವನ್ನು ಉತ್ತರ ಭಾರತದ ವಾಸ್ತುಶಿಲ್ಪದ ಆಧಾರದ ಮೇಲೆ ಜದನ್ ಪಾಲಿ ನಾಗರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಓಂ ಆಕಾರವು ಸುಮಾರು ಅರ್ಧ ಕಿಲೋಮೀಟರ್ ತ್ರಿಜ್ಯದಲ್ಲಿ ಹರಡಿದೆ.

Advertisement
Share this on...