ಒಂದೊಂದೇ ಅಂಗಾಗ ತೆಗೆಯುವಾಗಲೂ ಹೊಡೆದುಕೊಳ್ಳುತ್ತಿತ್ತು ಹೃದಯ: ಸಂಚಾರಿ ವಿಜಯ್ ಬಗ್ಗೆ ವೈದ್ಯರು ಹೇಳಿದ್ದೇನು ನೋಡಿ

in Kannada News/News 203 views

ಅಂಗಾಂಗ ದಾನಕ್ಕಾಗಿ ಕಾಯುತ್ತಿರುವ ಹಲವಾರು ರೋಗಿಗಳಿಗೆ ಹೊಸ ಜೀವನವನ್ನು ನೀಡುವ ಹಾದಿಯಲ್ಲಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕನ್ನಡ ನಟ ‘ಸಂಚಾರಿ’ ವಿಜಯ್ ಅವರ ಕುಟುಂಬವು ಸೋಮವಾರ ಬ್ರೇನ್ ಡೆಡ್ ಆಗಿದೆ ಎಂದು ಘೋಷಿಸಿದ ನಂತರ ಅವರ ಕಣ್ಣು, ಹೃದಯ, ಮೂತ್ರಪಿಂಡ ಮತ್ತು ಇತರ ಅಂಗಗಳನ್ನು ದಾನ ಮಾಡಿತು. ಶ್ರೀ ವಿಜಯ್ (38) ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರಿ ಮಾಡುತ್ತಿದ್ದಾಗ ಸವಾರನು ಬೈಕ್‌ನ ನಿಯಂತ್ರಣವನ್ನು ಕಳೆದುಕೊಂಡನು.

Advertisement

ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಶ್ರೀ ವಿಜಯ್ ಅವರ ಮೆ ದು ಳಿ ನಲ್ಲಿ ಹೆ ಪ್ಪು ಗ ಟ್ಟು ವಿಕೆಯನ್ನು ತೆಗೆದುಹಾಕಲು ಮತ್ತು ಸ್ರಾ ವ ನ್ನು ತಡೆಯಲು ವೈದ್ಯರು ಶ ಸ್ತ್ರ ಚಿಕಿತ್ಸೆ ನಡೆಸಿದರು. ಅವರನ್ನು ಫುಲ್ ಲೈಫ್ ಸಪೋರ್ಟ್ ಸಿಸ್ಟಮ್ ನಲ್ಲಿ ಕ್ರಿಟಿಕಲ್ ಅಬ್ಸರ್ವೇಶನ್ ನಲ್ಲಿ ಇಡಲಾಯಿತು. ಆದರೆ ಸೋಮವಾರ ಮುಂಜಾನೆ, ಅವರು ಚಿಕಿತ್ಸೆಗೆ ಸ್ಪಂದಿಸುವುದನ್ನ ನಿಲ್ಲಿಸಿದರು ಮತ್ತು ಬ್ರೇನ್ ಡೆಡ್ ಆಗಿದೆ ಎಂದು ಘೋಷಿಸಲಾಯಿತು.

ಕುಟುಂಬದ ಕೋರಿಕೆಯ ಮೇರೆಗೆ, ಆಸ್ಪತ್ರೆಯು ಜೀವನ ಸಾರ್ಥಕಥೆ ಎಂಬ ಸಂಘಟನೆಯ ಮೂಲಕ ಅಂ ಗಾಂ ಗ ದಾನ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿತು. ನಂತರ ಈ ವಿಚಾರವನ್ನು ಸರ್ಕಾರಕ್ಕೆ ತಿಳಿಸಲಾಯಿತು. ಜೀವ ಸಾರ್ಥಕತೆ ತಂಡ ಆಗಮಿಸಿ ವಿಜಯ್ ಅವರಿಗೆ ಆಪ್ನಿಯಾ ಪರೀಕ್ಷೆ ಮಾಡಿದರು. ಮರುದಿನ ಮಧ್ಯಾಹ್ನ ಹಾಗೂ ಅದೇ ದಿನ ರಾತ್ರಿ ಎರಡು ಬಾರಿ ಆಪ್ನಿಯಾ ಪರೀಕ್ಷೆ ಮಾಡಿದರು.

ಕಣ್ಣಿನ ಮೇಲೆ ಹತ್ತಿ ಇಟ್ಟು ಸವರುವುದು.. ಕಿವಿಯಲ್ಲಿ ತಣ್ಣೀರು ಬಿಡುವುದು ಹೀಗೆ ಹತ್ತು ರೀತಿಯಲ್ಲಿ ಪರೀಕ್ಷೆ ನಡೆಯುತ್ತದೆ. ಆದರೆ ಯಾವುದಾದರೂ ಒಂದು ಸಮಯದಲ್ಲಿಯಾದರೂ ಬ್ರೇನ್ ಸ್ಪಂದಿಸಿದರೆ ರೋಗಿಯು ಮುಂದೆ ಉಳಿಯುವ ಚಾನ್ಸಸ್ ಇರುತ್ತದೆ. ಆದರೆ ವಿಜಯ್ ಅವರ ಬ್ರೇನ್ ಯಾವ ಪರೀಕ್ಷೆಯಲ್ಲಿಯೂ ಸ್ಪಂದನೆ ನೀಡಲಿಲ್ಲ. ಇದೇ ಕಾರಣಕ್ಕೆ ಬ್ರೈನ್ ಡೆಡ್ಡಾಗಿದೆ ಎಂದು ಅಧಿಕೃತವಾಗಿ ತಿಳಿಸಿದ ಬಳಿಕ ಕುಟುಂಬದವರ ಸಹಿ ಪಡೆದು ರಾತ್ರಿ ಅಂ ಗಾಂ ಗ ಗಳ ದಾನದ ಪ್ರಕ್ರಿಯೆಯನ್ನು ಶುರು ಮಾಡಿದರು.

ಸಂಚಾರಿ ವಿಜಯ್ ತನ್ನ ಭೂಲೋಕದ ಸಂಚಾರವನ್ನು ಮುಗಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದರೂ ಸಹ ತನ್ನ ಇಲ್ಲಿನ ಸಂಚಾರವನ್ನು ತನ್ನ ಅಂ ಗಾಂ ಗ ಗಳ ಮೂಲಕ ಮುಂದುವರೆಸುತ್ತಲೇ ಇದ್ದಾರೆ.. ಆದರೆ ವಿಜಯ್ ಅವರ ಅಂ ಗಾಂ ಗ ಗಳನ್ನು ದಾನ ಮಾಡುವ ಸಲುವಾಗಿ ಅವರ ದೇ ಹ ದ ಅಂ ಗ ಗಳನ್ನು ಒಂದೊಂದಾಗಿ ತೆಗೆಯುವ ವೇಳೆಯೂ ಸಹ ಇನ್ನೂ ವಿಜಯ್ ಅವರ ಹೃದಯ ಬಡಿದುಕೊಳ್ಳುತ್ತಲೇ ಇತ್ತು.

ಹೌದು ಸಂಚಾರಿ ವಿಜಯ್ ಅವರಿಗೆ ಶನಿವಾರ ರಾತ್ರಿ ನಡೆದ ಘಟನೆಯಿಂದಾಗಿ ಬ್ರೈನ್ ಡೆಡ್ಡಾಗಿ ಇದೀಗ ಇಹಲೋಕವೇನೋ ತ್ಯಜಿಸಿದರು. ಆದರೆ ಕೊನೆ ಘಳಿಗೆವರೆಗೂ ಅವರ ಹೃೃದಯ ನಿಂತಿರಲಿಲ್ಲ ಎಂಬುದು ಮನಕಲಕುವಂತಿದೆ. ಹೌದು, ವಿಜಯ್ ಅವರನ್ನು ಆಸ್ಪತ್ರೆಗೆ ಕರೆತಂದ ಸಮಯದಲ್ಲಿ ಅವರು ಪ್ರ ಜ್ಞೆ ತಪ್ಪಿದ್ದರು. ಆದರೆ ಉಸಿರಾಡುತ್ತಿದ್ದರು ಮತ್ತು ಹೃದಯದ ಬಡಿತ ಚೆನ್ನಾಗಿಯೇ ಆಗುತ್ತಿತ್ತು. ಎಲ್ಲಾ ಅಂಗಾಂಗಗಳು ಸಹ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ್ದವು.

ಮೆ ದು ಳಿ ನ ಊ ತ ಮಾತ್ರ ಕಡಿಮೆಯಾಗಿರಲಿಲ್ಲ. ಅದಕ್ಕಾಗಿ ರಾತ್ರಿಯಿಂದ ಬೆಳಿಗ್ಗೆಯವರೆಗೂ ಚಿಕಿತ್ಸೆ ಮಾಡಿಕೊಂಡು ಬಂದಿದ್ದರು ಆದರೆ ಬೆಳಿಗ್ಗೆ ಸಂಚಾರಿ ವಿಜಯ್ ಅವರ ಬ್ರೈನ್ ಫೇಲ್ಯೂರ್ ಆಗಿ ಹೋಗಿತ್ತು. ಆದರೆ ಮಿಕ್ಕ ಎಲ್ಲಾ ಅಂ ಗಾಂ‌ ಗ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.  ಒಮ್ಮೆ ಬ್ರೈನ್ ಫೇಲ್ಯೂರ್ ಆಗಿಹೋದ ವ್ಯಕ್ತಿ ಮತ್ತೆ ಬ ದು ಕು ವುದು ಸಾಧ್ಯವೇ ಇಲ್ಲ ಎಂದು ವೈದ್ಯರು ತಿಳಿಸಲಾಗಿ ಕುಟುಂಬದವರು ಅಂ ಗಾಂ ಗ ದಾನ ಮಾಡಿ ವಿಜಯ್ ರ ಅಗಲಿಕೆಗೆ ಸಾರ್ಥಕತೆ ತಂದರು. ಈ ಮಾದರಿಯೇ ಬೇರೆಯವರಿಗಾಗಲಿ ಅಲ್ಲವೇ.

Advertisement
Share this on...