ನವದೆಹಲಿ: ಪನಾಮ ಪೇಪರ್ಸ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಹೆಸರು ಇದೆ. ಇದೇ ಕಾರಣಕ್ಕೆ ಇಡಿ ಅವರಿಗೆ ಸಮನ್ಸ್ ನೀಡಿತ್ತು. ಕಳೆದ ಮೂರು ಬಾರಿ ಸಮನ್ಸ್ ಪಡೆದ ನಂತರವೂ ಐಶ್ವರ್ಯಾ ರೈ ಬಚ್ಚನ್ ಇಡಿ ಮುಂದೆ ಹಾಜರಾಗಿರಲಿಲ್ಲ. ಐಶ್ವರ್ಯಾ ರೈ ಬಚ್ಚನ್ ಹೆಸರು ಬಂದಾಗಿನಿಂದ ಅವರ ಪತಿ ಅಭಿಷೇಕ್ ಬಚ್ಚನ್ ಮಾಧ್ಯಮಗಳಿಗೆ ಬಂದು ತಮ್ಮ ಪತ್ನಿ ಐಶ್ವರ್ಯಾ ರೈ ಬಚ್ಚನ್ ಏನೂ ಮಾಡಿಲ್ಲ ಎಂದು ಸಾಕಷ್ಟು ಬಾರಿ ಹೇಳಿಕೆಗಳನ್ನು ನೀಡಿದ್ದರು. ಆದರೆ, ಹಣದ ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ.
ED summons Aishwarya Rai Bachchan in Panama Papers leak case
Read @ANI Story | https://t.co/3jfuyNVXY8#AishwaryaRaiBachchan #PanamaPapers pic.twitter.com/1hEUR3qA4a
— ANI Digital (@ani_digital) December 20, 2021
Why? Has @SrBachchan refused to be part some propaganda campaign for the @BJP4India government? https://t.co/vNfAvoQxAu
— Karti P Chidambaram (@KartiPC) December 20, 2021
Advertisement
ಒಂದೆಡೆ, ಆಪಾದಿತ ಫೆಮಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪನಾಮ ಪೇಪರ್ಸ್ ಲೀಕ್ (Panama Papers Leak) ಪ್ರಕರಣದ ತನಿಖೆಗೆಂದು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಸೋಮವಾರ ಜಾರಿ ನಿರ್ದೇಶನಾಲಯದ (Enforcement Directorate) ದೆಹಲಿ ಕಚೇರಿಗೆ ಬಂದರು. ಇಡಿ ಅಧಿಕಾರಿಯೊಬ್ಬರು ಐಶ್ವರ್ಯ ರೈ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ತನಿಖೆಗೆ ಸೇರಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ಮತ್ತೊಂದೆಡೆ, ಇಡಿ ಐಶ್ವರ್ಯಾ ರೈ ಅವರನ್ನು ವಿಚಾರಣೆಗೆ ಕರೆಯುತ್ತಿದ್ದಂತೆ ರಾಜಕೀಯ ತೀವ್ರಗೊಂಡಿದೆ. ಶಿವಸೇನೆ ಸಂಸದ ಸಂಜಯ್ ರಾವುತ್ ಐಶ್ವರ್ಯಾ ರೈ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜಯಾ ಬಚ್ಚನ್ ಅವರ ಕುಟುಂಬದ ಸದಸ್ಯರ ಮೇಲೆ ಸರ್ಕಾರ ತನ್ನ ಕೋಪವನ್ನು ಹೊರಹಾಕಬಾರದು ಎಂದು ಸಂಜಯ್ ರಾವತ್ ಹೇಳಿದ್ದಾರೆ. ಏತನ್ಮಧ್ಯೆ, ಇಡಿ ಐಶ್ವರ್ಯಾ ರೈ ಅವರನ್ನು ವಿಚಾರಣೆ ನಡೆಸಿತು, ಆದರೆ ಸಂಸತ್ತು ಮಾತ್ರ ಈ ವಿಷಯದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರ ಕೋಪವನ್ನು ಕಂಡಿತು.
ಜಯಾ ಬಚ್ಚನ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಯಾ ಬಚ್ಚನ್ ಮಾತನಾಡುತ್ತ, “ನನ್ನ ಮೇಲೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗಿದೆ. ನಿಮಗೆ ಕೆಟ್ಟ ದಿನಗಳು ಬರುತ್ತವೆ ಎಂದು ನಾನು ನಿಮ್ಮನ್ನು ಶಪಿಸುತ್ತೇನೆ. ನೀವು ನಮ್ಮ ಕತ್ತನ್ನೂ ಹಿಸುಕಿ, ನಿಮ್ಮ ದರ್ಪ ನಡೆಸಿ. ನೀವು ಏನು ಹೇಳುತ್ತಿದ್ದೀರಿ?” ಎಂದರು. ಅಷ್ಟೇ ಅಲ್ಲ, ಮಾತನಾಡುವಾಗ ಸಮಾಜವಾದಿ ಸಂಸದೆಯ ಉಸಿರು ತೆಗೆದುಕೊಳ್ಳೋಕೂ ಕಷ್ಟವಾಯಿತು. ಅಷ್ಟು ಭಾವುಕ ಹಾಗು ಕೋಪದಿಂದ ಅವರು ಮಾತನಾಡುತ್ತಿದ್ದರು. ಇನ್ನು ವಿರೋಧ ಪಕ್ಷಗಳ ನಾಯಕರಿಗೆ ಜಯಾ ಬಚ್ಚನ್, “ನೀವು ಯಾರ ಮುಂದೆ ಕಿನ್ನರಿ ಬಾರಿಸುತ್ತಿದ್ದೀರ?” ಎಂದರು. ಈ ವೇಳೆ ಉಪ ಸಭಾಪತಿ ಸುಮ್ಮನಾಗಲು ಪದೇ ಪದೇ ಕೇಳಿಕೊಂಡರೂ ಜಯಾ ಬಚ್ಚನ್ ಸುಮ್ಮನಾಗಲಿಲ್ಲ.
राज्यसभा में भड़कीं जया बच्चन, बोलीं- आप लोग गला घोंट दीजिए.. pic.twitter.com/lMrcbZRvGO
— Newsroom Post (@NewsroomPostCom) December 20, 2021
ಜನರ ರಿಯಾಕ್ಷನ್ ಹೇಗಿತ್ತು ನೋಡಿ
Such arrogance , such filth we have filled in our assemblies, hope India sees to that!#JayaBachchan pic.twitter.com/7MwhxnXfxg
— Puja Singh🇮🇳 (@pusing27) December 20, 2021
Meanwhile ED to Jaya Bachchan pic.twitter.com/X83QlUNpSh
— Uma Shankar Mahato (@88umashankar) December 20, 2021
According to eyewitnesses in the Rajya Sabha MP from BJP from Uttar Pradesh said to #JayaBachchan “फ़िल्म नहीं चल रही यहाँ, नाटक क्यूँ कर रही हो?”
— Payal Mehta/પાયલ મેહતા/ पायल मेहता/ পাযেল মেহতা (@payalmehta100) December 20, 2021
This anger and frustration of Jaya Bachchan was because Aishwarya Rai Bachchan was summoned by ED and nothing else.
— Saurav Pandey (@SAURAVP98713731) December 20, 2021
Aishwarya Rai Bachchan is now in ED office . Now Real KBC will begin ,
By the way PHONE- A- FRIEND option is not given to her— Gurpreet Garry Walia (@_garrywalia) December 20, 2021