ತಮ್ಮ ಇಚ್ಛಾಶಕ್ತಿಯಿಂದ ಕಾಲಕಾಲಕ್ಕೆ ಜಗತ್ತನ್ನು ಅಚ್ಚರಿಗೊಳಿಸಿರುವ ಅನೇಕ ಮಹಾನ್ ವ್ಯಕ್ತಿಗಳು ಜಗತ್ತಿನಲ್ಲಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಜನ ಸಾಮಾನ್ಯರು ಯೋಚಿಸಲೂ ಸಾಧ್ಯವಿಲ್ಲ. ಅಂತಹ ಜನರು ಅನೇಕ ಪವಾಡಗಳನ್ನ ಮಾಡಿದ್ದಾರೆ, ಅದನ್ನ ನೋಡಿದ ಬಳಿಕ ಯಾವುದೇ ಮಾನವ (Super Humans of the World) ನಿಜವಾಗಿಯೂ ಇದನ್ನು ಮಾಡಬಹುದೇ ಎಂದು ಸಾಮಾನ್ಯ ಜನರು ಸುಲಭವಾಗಿ ನಂಬುವುದಿಲ್ಲ. ಒಬ್ಬ ವ್ಯಕ್ತಿ ತಮ್ಮ ಸಾಮರ್ಥ್ಯಗಳನ್ನು ಮೀರಿ ಇಂತಹ ಸಾಧನೆಗಳನ್ನ ಹೇಗೆ ಮಾಡಬಹುದು? ಅಂತಹ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ಇವರು ಒಂದಲ್ಲ ಎರಡಲ್ಲ ಅಥವಾ ಕೆಲ ವರ್ಷಗಳಿಂದಲೂ ಅಲ್ಲ ಬದಲಾಗಿ ಬರೋಬ್ಬರಿ 48 ವರ್ಷಗಳಿಂದ ಗಾಳಿಯಲ್ಲೇ ಒಂದು ಕೈಯನ್ನು ಎತ್ತಿ ಹಿಡಿದಿದ್ದಾರೆ (Man Kept Hand Raised for Past 48 Years). ಇಷ್ಟು ವರ್ಷಗಳಲ್ಲಿ ಈ ಕೈ ಒಂದು ಕ್ಷಣವೂ ಕೆಳಗಿಳಿದಿಲ್ಲ.
ಹಾಗೆ ನೋಡಿದರೆ, ಹಿಂದೂ ಸಂತ ಅಮರ್ ಭಾರತಿ ಯವರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆದರೆ ಅವರು ನಂಬಿಕೆ ಮತ್ತು ಶಾಂತಿಗಾಗಿ ಬಹಳ ಮುಖ್ಯವಾದ ಕೆಲಸವನ್ನು ಮಾಡಿದ್ದಾರೆ. ಅದರ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ಅಮರ್ ಭಾರತಿ ಒಬ್ಬ ಹಿಂದೂ ಸನ್ಯಾಸಿ ಮತ್ತು ಅವರು ಕಳೆದ 48 ವರ್ಷಗಳಿಂದ ಗಾಳಿಯಲ್ಲೇ ತಮ್ಮ ಒಂದು ಕೈಯನ್ನ ಎತ್ತಿಹಿಡಿದಿದ್ದಾರೆ.
ಇಷ್ಟು ವರ್ಷಗಳಲ್ಲಿ ಅವರು ಒಂದು ಕ್ಷಣವೂ ಕೈ ಕೆಳಗೆ ಇಳಿಸಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಈ ಸಾಧನೆಯನ್ನು ಅವರ ಪವಾಡ ಎಂದು ಕರೆಯುತ್ತಾರೆ. ಅದೇ ಸಮಯದಲ್ಲಿ, ಅನೇಕ ಜನರು ಇದು ಅವರ ಮೂರ್ಖತನ ಎಂದೂ ಸಹ ಹೇಳುತ್ತಾರೆ. ಆದರೆ ಸಾಧು ಅಮರ್ ಭಾರತಿಯವರ ಈ ವಿಸ್ಮಯಕಾರಿ ಕೆಲಸವು ಪವಾಡಕ್ಕಿಂತ ಕಡಿಮೆಯೇನಲ್ಲ.
ವೆಬ್‌ಸೈಟ್ ಒಂದರ ಮಾಹಿತಿಯ ಪ್ರಕಾರ, ಅಮರ್ ಭಾರತಿಗೆ ಸನ್ಯಾಸಿಯಾಗಲು ಇಷ್ಟವಿರಲಿಲ್ಲ. ಮೊದಲು ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರು. ಅಮರ್ ಭಾರತಿಯವರಿಗೆ ಹೆಂಡತಿ, ಮಕ್ಕಳು, ಮನೆ, ಉದ್ಯೋಗವೂ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಆಧ್ಯಾತ್ಮದತ್ತ ಅವರ ಮನಸ್ಸು ಹೊರಳಿತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನೂ ತ್ಯಜಿಸಿ ಧರ್ಮದ ಹಾದಿ ಹಿಡಿದರು. ಅವರು ತಮ್ಮ ಜೀವನದ ಉಳಿದ ಸಮಯವನ್ನು ಭೋಲೆನಾಥ್ ಭಗವಾನ್ ಶಿವನಿಗೆ ಅರ್ಪಿಸಿದರು.
ಈ ಕಾರಣದಿಂದ ತಮ್ಮ ಒಂದು ಕೈಯನ್ನ ಎತ್ತಿದ್ದಾರೆ
ನೀವು ಎಂದಾದರೂ ನಿಮ್ಮ ಕೈಯನ್ನು ಗಾಳಿಯಲ್ಲಿ ಎತ್ತಿಹಿಡಿದತೆ ನೀವು ಖಂಡಿತವಾಗಿಯೂ ಅದನ್ನು 2 ಅಥವಾ 3 ನಿಮಿಷಗಳಿಗಿಂತ ಹೆಚ್ಚು ಕಾಲ ಗಾಳಿಯಲ್ಲಿ ಇಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದಕ್ಕಿಂತ ಹೆಚ್ಚು ಹೊತ್ತು ನೀವು ಕೈಯನ್ನ ಎತ್ತಿ ಹಿಡಿಯೋಕೆ ಸಾಧ್ಯವೇ ಆಗಲ್ಲ. ಆದರೆ ಅವರು ಶಿವಭಕ್ತಿ ಮತ್ತು ಲೋಕಶಾಂತಿಗಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ.
ತಮ್ಮ ಸಂದರ್ಶನವೊಂದರಲ್ಲಿ, ಅಮರ್ ಭಾರತಿ ಅವರು ಈ ಕೆಲಸವನ್ನು ಮಾಡಲು ಶಿವನಿಂದ ಶಕ್ತಿಯನ್ನು ಪಡೆದಿದ್ದೇನೆ ಎಂದು ಹೇಳಿದ್ದರು. ಇದಲ್ಲದೇ ಈ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರು. ಆರಂಭದಲ್ಲಿ, ಅವರು ಈ ಕೆಲಸ ಮಾಡಲು ತುಂಬಾ ನೋವಿನಿಂದ ಬಳಲುತ್ತಿದ್ದರು. ಆದರೆ ನಂಬಿಕೆಯ ಬಲದ ಮೇಲೆ, ಅಮರ್ ಭಾರತಿ 1973 ರಿಂದ ಗಾಳಿಯಲ್ಲಿ ಒಂದು ಕೈ ಎತ್ತಿಹಿಡಿದಿದ್ದಾರೆ.