ದೆಹಲಿಯ ಅಮೀರ್ ಖಾನ್ ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸುವ ಮೂಲಕ ಅಭಯ ತ್ಯಾಗಿಯಾಗಿದ್ದಾರೆ. ತಮ್ಮ ಘರ್‌ವಾಪಸಿ ಹಿಂದಿನ ಕುತೂಹಲಕಾರಿ ಕಾರಣವನ್ನೂ ಅವರು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕುಂಡಿಯಾ ಮಹಾಯಜ್ಞವನ್ನು ಭಾನುವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿ ನೆಲೆಗೊಂಡಿರುವ ರಾಮ್ಲೀಲಾ ಮೈದಾನ 51 ನಲ್ಲಿ ಆಯೋಜಿಸಲಾಗಿತ್ತು.
ಮಹಾಯಜ್ಞ ನಡೆಯುತ್ತಿದ್ದ ಸಮಯದಲ್ಲೇ, ಆ ವೇಳೆ ಇದ್ದಕ್ಕಿದ್ದಂತೆ ದೆಹಲಿಯ ಕರ್ದಂಪರಿ ನಿವಾಸಿ ಅಮೀರ್ ಎಂಬ ಯುವಕ ಮಹಾಯಜ್ಞಕ್ಕೆ ಆಗಮಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಆರಂಭಿಸಿದ. ಈ ವೇಳೆ ಅಲ್ಲಿ ನೆರೆದಿದ್ದವರಿಗೆ ತಾನು ದೆಹಲಿ ನಿವಾಸಿ ಎಂದು ಹೇಳಿದ್ದಾನೆ. ತನ್ನ ಹೆಸರು ಅಮೀರ್ ಖಾನ್ ಮತ್ತು ತಾನು ವೆಲ್ಡಿಂಗ್ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾನೆ.
ತನ್ನ ಪೂರ್ವಜರು ಈ ಹಿಂದೆ ಸನಾತನ ಧರ್ಮದವರಾಗಿದ್ದರು ಮತ್ತು ತನ್ನ ನಂಬಿಕೆಯೂ ಸನಾತನ ಧರ್ಮದಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಜನರಿಗೆ ತಿಳಿಸಿದನು. ಭಗವಾನ್ ಶಿವನು ನಮ್ಮ ದೇವರು, ಕಳೆದ ಹಲವು ವರ್ಷಗಳಿಂದ ನಾವು ಶಿವನನ್ನ ಪೂಜಿಸುತ್ತಿದ್ದೇವೆ ಎಂದಿದ್ದಾನೆ. ಅಮೀರ್ ಹುಟ್ಟಿದ ಸಮಯದಲ್ಲಿ ತನ್ನ ನಿಜವಾದ ಧರ್ಮ ಯಾವುದು ಎಂದು ತಿಳಿದಿರಲಿಲ್ಲ, ಆದರೆ ಈಗ ನನಗೆ ನಮ್ಮ ಧರ್ಮ ಯಾವುದು ಎಂದು ತಿಳಿದುಕೊಂಡಿದ್ದೇನೆ. ಹಾಗಾಗಿ ಯಾವುದೇ ಒತ್ತಡವಿಲ್ಲದೆ ಘರ್‌ವಾಪಸಿ ಮಾಡಲು ಬಯಸುತ್ತೇನೆ ಎಂದಿದ್ದಾನೆ. ಅಮೀರ್ ತನ್ನ ಹೆಸರನ್ನು ಅಮೀರ್ ಖಾನ್ ಬದಲಿಗೆ ಅಭಯ್ ತ್ಯಾಗಿ ಎಂದು ಬದಲಾಯಿಸಿಕೊಂಡಿದ್ದಾನೆ.
ಅಲ್ಲಿದ್ದ ಸಾಧು ಸಂತರು ಮತ್ತು ಇತರರು ಅವನ ಮಾತಿನಿಂದ ಮೊದಲು ಆಶ್ಚರ್ಯಪಟ್ಟರು, ಆದರೆ ನಂತರ ಆತನ ಮಾತುಗಳಿಂದ ಅವರಿಗೆ ಮನವರಿಕೆಯಾಯಿತು. ಯುವಕನ ಆಸೆಯನ್ನು ಗೌರವಿಸಿ ಶ್ರೀಗಂಧವನ್ನು ಹಚ್ಚಿ ಪೇಟ ತೊಡಿಸಿ ಹಿಂದೂ ಧರ್ಮಕ್ಕೆ ಸ್ವಾಗತಿಸಿದರು.
ತ್ಯಾಗಿ ಮಹಾಸಭಾದ ಅಧ್ಯಕ್ಷ ಧರ್ಮೇಂದ್ರ ತ್ಯಾಗಿ ಅವರು ತಮ್ಮ ಗೋತ್ರವನ್ನು ನೀಡುವಾಗ ಅಮೀರ್ ಖಾನ್ ಅವರನ್ನು ಅಭಯ ತ್ಯಾಗಿ ಎಂದು ಹೆಸರಿಸಿದ್ದಾರೆ ಎಂದು ಹೇಳಿದರು. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಯುವಕನಿಂದ ಅಗತ್ಯ ದಾಖಲೆಗಳನ್ನು ಕೇಳಲಾಗಿದೆ. ದಾಖಲೆಗಳನ್ನು ಪೂರೈಸಿದ ನಂತರ, ಕಾನೂನು ಮತ್ತು ಸುವ್ಯವಸ್ಥೆಯಿಂದ, ದೇವಸ್ಥಾನದಲ್ಲಿ ಪವಿತ್ರ ಜನೇವು ಆಚರಣೆಯನ್ನು ಮಾಡುವ ಮೂಲಕ ಯುವಕನನ್ನು ಸನಾತನ ಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:
ನಾನು ಹಿಂದೂ ಧರ್ಮ ಸ್ವೀಕರಿಸಲೇಬೇಕು ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಮುಸ್ಲಿಂ ಯುವಕ
ಇದುವರೆಗೂ ನೀವು ಹಿಂದೂ ಧರ್ಮದಿಂದ ಅನ್ಯ ಮತಗಳಿಗೆ ಮ ತಾಂ ತ ರ ವಾಗುವ ಸುದ್ದಿಗಳನ್ನ ಕೇಳಿರುತ್ತೀರ. ಆದರೆ ಮು-ಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಘರ್ ವಾಪಸಿ ಆಗಲು ನ್ಯಾಯಾಲಯದಲ್ಲಿ ಅರ್ಜಿ ಹಾಕಿರುವ ಅಥವ ಅಫಿಡವಿಟ್ ಸಲ್ಲಿಸಿರುವ ಸುದ್ದಿಗಳನ್ನ ಕೇಳಿರುವುದಿಲ್ಲ. ಹೌದು ನಾವಿಂದು ನಿಮಗೆ ಅಂತಹ ಒಂದು ಸುದ್ದಿಯ ಬಗ್ಗೆ ತಿಳಿಸಲಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ಬಿಹಾರದ ಗಯಾ ಜಿಲ್ಲೆಯ ನಿವಾಸಿಯಾದ ಯುವಕನೊಬ್ಬ ಹೀಗೆ ಮಾಡಿದ್ದಾನೆ. ಹಿಂದೂ ಧರ್ಮ ಬಿಟ್ಟು ಅನ್ಯಮತಗಳಿಗೆ ಮ ತಾಂ ತ ರ ವಾಗುವ ಆ ದಿನಗಳು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಈಗ ನವಭಾರತವಾಗಿದ್ದು ದೇಶವೀಗ ಬುದ್ಧಿಮತ್ತೆಯಿಂದ ಹಿಡಿದು ಸಶಕ್ತವಾಗುವ ಮಟ್ಟಿಗೆ ಬೆಳೆಯುತ್ತಿದೆ. ಈಗ ಜನ ಸನಾತನ ಸಂಸ್ಕೃತಿಯನ್ನ ಪ್ರೀತಿಸಲು ಹಾಗು ಗೌರವಯುತವಾಗಿ ಕಾಣುತ್ತಿರೋದಷ್ಟೇ ಅಲ್ಲದೆ ಸನಾತನ ಧರ್ಮಕ್ಕೆ ಬರುತ್ತಿದ್ದಾರೆ. ಏನಿದು ಪ್ರಕರಣ ಬನ್ನಿ ನಿಮಗೆ ತಿಳಿಸುತ್ತೇವೆ.
ಬಾಲ್ಯದಿಂದಲೂ ಹಿಂದೂ ಧರ್ಮ ಅಪ್ಪಿಕೊಳ್ಳುವ ಆಸೆ
ಬಿಹಾರದ ಗಯಾ ಜಿಲ್ಲೆಯ ವ್ಯಕ್ತಿಯೊಬ್ಬ ಹಿಂದೂ ಧರ್ಮವನ್ನ ಅಪ್ಪಿಕೊಳ್ಳಲು ಒಂದು ಅಫಿಡವಿಟ್ ರೆಡಿ ಮಾಡಿದ್ದಾನೆ. ಆ ಅಫಿಡವಿಟ್ ಪ್ರಕಾರ ಆತ ತನ್ನಿಷ್ಟದಂತೆ ಹಿಂದೂ ಧರ್ಮಕ್ಕೆ ಬರಲು ಇಚ್ಛಿಸಿದ್ದಾನೆ. ಈ ಬಗ್ಗೆ ಮಾತನಾಡಿದ ಯುವಕ, “ಬಾಲ್ಯದಿಂದಲೂ ನನಗೆ ಹಿಂದೂ ಧರ್ಮವೆಂದರೆ ಪಂಚಪ್ರಾಣ ಹಾಗು ಬಾಲ್ಯದಿಂದಲೂ ನಾನು ಸನಾತನ ಧರ್ಮಕ್ಕೆ ಬರಲು ಬಯಸಿದ್ದೆ. ನಾನು ಚಿಕ್ಕವನಿದ್ದಾಗ ಹೋಳಿ, ದೀಪಾವಳಿಯಂತಹ ಹಬ್ಬದ ಸಂದರ್ಭಗಳಲ್ಲಿ ಎಲ್ಲರೂ ಜತೆಗೂಡಿ ಹಬ್ಬ ಆಚರಿಸುತ್ತಿದ್ದರು. ಅದನ್ನೆಲ್ಲಾ ನೋಡಿ ನಾನ್ಯಾಕೆ ಹಿಂದೂ ಆಗಿ ಹುಟ್ಟಲಿಲ್ಲ ಅಂತ ಅಂದುಕೊಳ್ಳುತ್ತಿದ್ದೆ” ಎಂದಿದ್ದಾನೆ.
ಬಾಲ್ಯದಿಂದಲೂ ಪೂಜೆ ಪುನಸ್ಕಾರ ಮಾಡುವ ಆಸೆಯಿತ್ತು
ಯುವಕನು ಮುಂದೆ ಮಾತನಾಡುತ್ತ, “ತಾನು ಹಿಂದೂ ಧರ್ಮಕ್ಕೆ ಮತಾಂತರವಾಗಲು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೇನೆ” ಎಂದಿದ್ದಾನೆ. ಈ ಯುವಕನ ಹೆಸರು ಮಿಸಾಬ್ ಎಂಬುದಾಗಿದ್ದು ಈತ ಜನಿಸಿದ್ದು ಸನ್ 2000 ಇಸವಿಯಲ್ಲಿ. ಹಾಗಾಗಿ ಈಗ ಈತ 21 ವರ್ಷದವನಾಗಿದ್ದಾನೆ. ಈ ಬಗ್ಗೆ ಮಾತನಾಡಿದ ಮಿಸಾಬ್, “ಬಾಲ್ಯದಿಂದಲೂ ನನಗೆ ಹಿಂದೂ ಧರ್ಮದ ರೀತಿ ರಿವಾಜುಗಳು, ಆಚರಣೆಗಳು, ಸಂಸ್ಕೃತಿ, ಪೂಜೆ ಪುನಸ್ಕಾರ ಇಷ್ಟವಿತ್ತು. ಇದೇ ಕಾರಣಕ್ಕಾಗಿ ನನ್ನನ್ಮ ಜನ ಪ್ರಿನ್ಸ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಯಾರೇ ನನ್ನ ಹೆಸರನ್ನ ಕೇಳಿದರೂ ನಾನು ಮಿಸಾಬ್ ಅಂತ ಹೇಳದೆ ಪ್ರಿನ್ಸ್ ಎಂದೇ ಹೇಳುತ್ತಿದ್ದೆ” ಎನ್ನುತ್ತಾನೆ ಮಿಸಾಬ್ ಅಲಿಯಾಸ್ ಪ್ರಿನ್ಸ್
ತನ್ನ ಪ್ರೀತಿಗಾಗಿಯೂ ಹಿಂದೂ ಆಗಲು ಬಯಸಿದ ಮಿಸಾಬ್
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಮಿಸಾಬ್‌ನ ಮೇಲೆ ಹಿಂದೂ ಯುವತಿಯೊಬ್ಬಳನ್ನ ಮನೆಯಂದ ಓಡಿಸಿಕೊಂಡು ಹೋದ ಪ್ರಕರಣವಿದೆ. ಮಾಹಿತಿಯ ಪ್ರಕಾರ ಆತನ ಮೇ ಲೆ ಪೋ ಕ್ಸೋ ಪ್ರಕರಣ ದಾಖಲಾಗಿದೆ. ಈ ಪ್ರಕರಣ 3 ತಿಂಗಳ ಹಿಂದೆ ರಾಮಪುರ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಬಳಿಕ ನ್ಯಾಯಾಲಯದಲ್ಲಿ ಯುವತಿಯು ತಾನು ಮಿಸಾಬ್‌ನನ್ನ ಪ್ರೀತಿಸುತ್ತೇನೆ ಅಂತ ಹೇಳಿ ಆತನನ್ನ ಬಚಾವ್ ಮಾಡಿದ್ದಳು. ಮಿಸಾಬ್ ಆ ಹಿಂದೂ ಯುವತಿಯನ್ನ ಪ್ರೀತಿಸುತ್ತಿದ್ದಾನೆ, ಆಕೆಯ ಪ್ರೀತಿ ಹಾಗು ಆಕೆಯ ಕುಟುಂಬಸ್ಥರ ಒಪ್ಪಿಗೆ ಪಡೆಯಲು ಆತ ಹಿಂದೂ ಧರ್ಮಕ್ಕೆ ಬರಲು ಇಚ್ಛಿಸಿದ್ದಾನೆ ಎಂದು ತಿಳಿದುಬಂದಿದೆ.