ಇತ್ತೀಚಿನ ವರದಿಗಳ ಪ್ರಕಾರ, ಮುಂದಿನ ಎರಡು ತಿಂಗಳ ಕಾಲ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮುಂಬೈನಿಂದ ಚೆನ್ನೈಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೀರ್ ಖಾನ್ ಇತ್ತೀಚೆಗೆ ಬಾಲಿವುಡ್‌ನಲ್ಲಿನ ತಮ್ಮ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಹಾಗಂತ ಅಮೀರ್ ಖಾನ್ ಇನ್ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡಲ್ಲ ಅಂತಲ್ಲ. ಲಾಲ್ ಸಿಂಗ್ ಚಡ್ಡಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಆದ ನಂತರ, ಅಮೀರ್ ಖಾನ್ ತಮ್ಮ ಪ್ರೀತಿಪಾತ್ರರ ಜೊತೆ ಸಮಯವನ್ನು ಕಳೆಯಲು ಬಯಸುತ್ತೇನೆ ಎಂದು ತಮ್ಮ ಬ್ರೇಕ್‌ನ ಬಗ್ಗೆ ಘೋಷಿಸಿದ್ದರು. ಇಂಡಿಯಾ ಟುಡೇ ಇತ್ತೀಚಿನ ವರದಿಯ ಪ್ರಕಾರ ಅಮೀರ್ ಖಾನ್ ತಮ್ಮ ನೆಲೆಯನ್ನು ಮುಂಬೈನಿಂದ ಚೆನ್ನೈಗೆ ಶಿಫ್ಟ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ವರದಿಗಳ ಪ್ರಕಾರ, ಅಮೀರ್ ಖಾನ್ ತಮ್ಮ ವೈಯಕ್ತಿಕ ಕಾರಣಗಳಿಂದ ಮುಂಬೈ ಬಿಟ್ಟು ಚೆನ್ನೈಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಚೆನ್ನೈಗೆ ಶಿಫ್ಟ್ ಆಗಲಿರುವ ಅಮೀರ್ ಖಾನ್?
ವರದಿಗಳ ಪ್ರಕಾರ, ಅಮೀರ್ ಖಾನ್ ತಮ್ಮ ತಾಯಿ ಜೀನತ್ ಹುಸೇನ್ ಅವರ ಚಿಕಿತ್ಸೆಗಾಗಿ ಮುಂಬರುವ ಎರಡು ತಿಂಗಳ ಕಾಲ ಮುಂಬೈನಿಂದ ಚೆನ್ನೈಗೆ ಶಿಫ್ಟ್ ಆಗೋಕೆ ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ತಾಯಿ ಆರೋಗ್ಯ ಸರಿಯಿಲ್ಲ ಎಂದು ಹೇಳಲಾಗುತ್ತಿದೆ.
ಈ ಸಮಯದಲ್ಲಿ ಅವರು ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. 3 ಈಡಿಯಟ್ಸ್ ನಟ ಇದೀಗ ತನ್ನ ತಾಯಿಯ ಜೊತೆಗೇ ಇರಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೀರ್ ಖಾನ್ ಅವರು ತಮ್ಮ ತಾಯಿಯ ಚಿಕಿತ್ಸೆ ನಡೆಯುವ ಆಸ್ಪತ್ರೆಯ ಸಮೀಪವಿರುವ ಹೋಟೆಲ್‌ನಲ್ಲಿ ತಂಗಲಿದ್ದಾರೆ ಇದರಿಂದಾದಿ ಅವರು ಯಾವಾಗ ಬೇಕಾದರೂ ತಮ್ಮ ತಾಯಿಯನ್ನು ಭೇಟಿ ಮಾಡೋಕೆ ಸಾಧ್ಯವಾಗಬಹುದು ಹೀಗಾಗಿ ಅಮೀರ್ ಖಾನ್ ಚೆನ್ನೈಗೆ ಶಿಫ್ಟ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲೇ ಹೇಳಿದಂತೆ, ಅಮೀರ್ ಖಾನ್ ಪ್ರಸ್ತುತ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಇತ್ತೀಚೆಗಷ್ಟೇ ತಮ್ಮ ಮುಂದಿನ ಪ್ರಾಜೆಕ್ಟ್ ‘ಸಿತಾರೆ ಜಮೀನ್ ಪರ್’ ಅನ್ನು ಘೋಷಿಸಿದ್ದರು. ಖಾಸಗಿ ಚಾನೆಲ್ ಒಂದಕ್ಕೆ ಈ ಪ್ರಾಜೆಕ್ಟ್‌ನ ಬಗ್ಗೆ ಬಹಿರಂಗಪಡಿಸಿದ್ದ ಅಮೀರ್ ಖಾನ್, “ನಾನು ಈ ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ ಮತ್ತು ನಿರ್ಮಿಸುತ್ತಿದ್ದೇನೆ. ತಾರೆ ಜಮೀನ್ ಪರ್ ಎಂಬ ವಿಷಯದೊಂದಿಗೆ ನಾವು ಹತ್ತು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಆ ಚಿತ್ರವು ನಿಮ್ಮನ್ನು ಭಾವುಕರನ್ನಾಗಿ ಮಾಡಿತ್ತು, ಆದರೆ ಸಿತಾರೆ ಜಮೀನ್ ಪರ್ ಚಿತ್ರ ನಿಮ್ಮನ್ನು ನಗಿಸುತ್ತದೆ. ತಾರೆ ಜಮೀನ್ ಪರ್ ಚಿತ್ರದಲ್ಲಿ ನನ್ನ ಪಾತ್ರ ದರ್ಶೀಲ್ ಪಾತ್ರಕ್ಕೆ ಸಹಾಯ ಮಾಡಿದ್ದಾಗಿತ್ತು, ಆದರೆ ಈ ಚಿತ್ರದಲ್ಲಿ ತಮ್ಮದೇ ಆದ ಸಮಸ್ಯೆಗಳೊಂದಿಗೆ ಬಳಲುತ್ತಿರೋ 9 ಜನರು ನನಗೆ ಹೇಗೆ ಸಹಾಯ ಮಾಡುತ್ತಾರೆ ಅನ್ನೋದು ಈ ಚಿತ್ರದ ಮೇನ್ ಥೀಮ್ ಆಗಿರಲಿದೆ” ಎಂದಿದ್ದರು.
ಅಷ್ಟೇ ಅಲ್ಲದೆ, ಮಿಸ್ಟರ್ ಪರ್ಫೆಕ್ಷನಿಸ್ಟ್ ಸನ್ನಿ ಡಿಯೋಲ್ ಅಭಿನಯದ ‘ಲಾಹೋರ್ 1947’ ಚಿತ್ರದ ನಿರ್ಮಾಪಕರಾಗಿಯೂ ಕೆಲಸ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಇಬ್ಬರೂ ನಟರ ನಡುವಿನ ಮೊದಲ ವೃತ್ತಿಪರ ಸಹಯೋಗವನ್ನು ತೋರಿಸುತ್ತದೆ. ಇಷ್ಟು ದಿನ ಇಂಡಸ್ಟ್ರೀಯ ಭಾಗವಾಗಿದ್ದರೂ ಈ ಇಬ್ಬರು ದಿಗ್ಗಜರು ಎಂದಿಗೂ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಅಮೀರ್ ಖಾನ್ ಅವರ ತಾಯಿ ಆದಷ್ಟು ಬೇಗ ಗುಣಮುಖವಾಗಿ ಕ್ಷೇಮವಾಗಿ ಬರಲಿ ಎಂದು ಆಶಿಸೋಣ.