ಕಸದ ತೊಟ್ಟಿಗೆ ಎಸೆದಿದ್ದ, ಹಳೆಯ ವಸ್ತುಗಳನ್ನ ಬಳಸಿ ‘ಕಿಕ್ ಸ್ಟಾರ್ಟ್’ ಜೀಪ್ ರೆಡಿ ಮಾಡಿದ ವ್ಯಕ್ತಿ: “ಪ್ಲೀಸ್ ಅದನ್ನ ನನಗೆ ಕೊಟ್ಟು ನನ್ನ ಈ ಕಾರ್ ತಗೊಂಡ್ಹೋಗಿ” ಎಂದ ಆನಂದ್ ಮಹೀಂದ್ರಾ

in Uncategorized 386 views

ಜುಗಾಡ್ (ಏನೇನೊ ಕಿತಾಪತಿ ಮಾಡಿ ಚಿತ್ರ ವಿಚಿತ್ರ ಕೆಲಸಗಳನ್ನ ಮಾಡೋದು) ವಿಷಯದಲ್ಲಿ ನಮ್ಮ ದೇಶ ನಂಬರ್ 1 ಆಗಿದೆ. ಇಲ್ಲಿನ ಜನರು ಕಡಿಮೆ ಸಂಪನ್ಮೂಲಗಳೊಂದಿಗೆ ಹೆಚ್ಚಿನದ್ದನ್ನ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈಗ ಹಳೇ ವಸ್ತು ಮತ್ತು ಹಳೆಯ ಬೈಕ್ ಇಂಜಿನ್‌ನಿಂದ ಜೀಪ್ ಮಾಡಿದ ಈ ವ್ಯಕ್ತಿಯನ್ನೇ ತೆಗೆದುಕೊಳ್ಳಿ. ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಮಾಡಿಫೈಡ್ ಜೀಪ್ (Modified Jeep) ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ವೈರಲ್ ಆಗುತ್ತಿದೆ.

Advertisement

ಈ ವಿಶಿಷ್ಟ ಜೀಪ್‌ಗೆ ಬೈಕ್‌ನಂತೆ ಕಿಕ್-ಸ್ಟಾರ್ಟ್ ನೀಡಲಾಗಿದೆ. ವ್ಯಕ್ತಿ ಅತ್ಯಂತ ಜುಗಾಡ್ ಮಾಡಿ ಉತ್ಸಾಹದಿಂದ ಈ ಜೀಪನ್ನು ತಯಾರಿಸಿದ್ದಾರೆ. ಅದನ್ನು ರಸ್ತೆಗಳಲ್ಲಿಯೂ ಬಹಳ ಹೆಮ್ಮೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಜುಗಾಡ್ ನಿಂದ ಕಿಕ್ ಸ್ಟಾರ್ಟ್ ಜೀಪ್ ತಯಾರು ಮಾಡಿದ ವ್ಯಕ್ತಿ

ನೋಡು ನೋಡಿತ್ತಿದ್ದಂತೆ ಈ ಅತರಂಗೀ ಜೀಪಿನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಜುಗಾಡ್ ಮತ್ತು ಪ್ರತಿಭೆಯನ್ನು ಜನರು ಹೊಗಳಲು ಪ್ರಾರಂಭಿಸಿದರು. ಈ ಸಂಚಿಕೆಯಲ್ಲಿ, ಮಹೀಂದ್ರಾ ಗ್ರೂಪ್‌ನ ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರ ಕೂಡ ಸೇರಿಕೊಂಡರು. ಆನಂದ್ ಮಹಿಂದ್ರಾ ರವರಿಗೂ ಈ ವ್ಯಕ್ತಿಯನ್ನ ಹೊಗಳದೇ ಇರಲು ಸಾಧ್ಯವಾಗಲಿಲ್ಲ.

ಗಮನಿಸುವ ಅಂಶವೆಂದರೆ, ಆನಂದ್ ಮಹೀಂದ್ರಾ ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಸಾಮಾನ್ಯವಾಗಿ ಜನರ ವಿಶಿಷ್ಟ ಕೌಶಲ್ಯಗಳನ್ನು ಇಷ್ಟಪಡುತ್ತಾರೆ. ಈ ಬಾರಿಯೂ ಈ ವಿಶಿಷ್ಟ ಜೀಪನ್ನು ತಯಾರಿಸಿದ ವ್ಯಕ್ತಿಯನ್ನೂ ಅವರು ಶ್ಲಾಘಿಸಿದ್ದಾರೆ.

ಖುಷ್ ಆದ ಆನಂದ್ ಮಹೀಂದ್ರಾ

ವ್ಯಕ್ತಿಯ ಈ ವಿಶಿಷ್ಟ ಜೀಪ್ ನೋಡಿ ಆನಂದ್ ಮಹೀಂದ್ರಾ ತುಂಬಾ ಸಂತೋಷಪಟ್ಟರು. ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಜಂಕ್‌ನಿಂದ ಮಾಡಿದ ಈ ಜೀಪ್‌ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಅವರು, “ಈ ವಾಹನವು ಯಾವುದೇ ನಿಯಮಗಳಿಗೆ ಹೊಂದಿಕೆಯಾಗುವುದಿಲ್ಲ, ಆದರೂ ನಾನು ನಮ್ಮ ಜನರ ಜಾಣ್ಮೆ ಮತ್ತು ‘ಕಡಿಮೆ’ ಸಾಮರ್ಥ್ಯಗಳನ್ನು ಮೆಚ್ಚುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ” ಎಂದಿದ್ದಾರೆ.

ಜಂಕ್ ನಿಂದ ತಯಾರಾದ ಜೀಪ್‌ನ ಬದಲಿಗೆ Bolero ನೀಡುವ ಆಫರ್

ಕುತೂಹಲಕಾರಿ ಸಂಗತಿಯೆಂದರೆ, ಆನಂದ್ ಮಹೀಂದ್ರಾ ಅವರು ಜಂಕ್‌ನಿಂದ ತಯಾರಿಸಿದ ಈ ವಿಶಿಷ್ಟ ಜೀಪ್‌ಗೆ ಬದಲಾಗಿ ಹೊಸ ಹೊಳೆಯುವ ಬೊಲೆರೊವನ್ನು ವ್ಯಕ್ತಿಗೆ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ. ಅವರು ಮತ್ತೊಂದು ಟ್ವೀಟ್‌ನಲ್ಲಿ, “ಸ್ಥಳೀಯ ಅಧಿಕಾರಿಗಳು ಶೀಘ್ರದಲ್ಲೇ ಈ ವ್ಯಕ್ತಿಯನ್ನು ಚಾಲನೆ ಮಾಡುವುದನ್ನು ತಡೆಯುತ್ತಾರೆ. ಈ ವಾಹನವು ನಿಯಮಗಳನ್ನು ಉಲ್ಲಂಘಿಸುತ್ತದೆ.

ನಾನು ಈ ವ್ಯಕ್ತಿಗೆ ಜೀಪ್ ಬದಲಿಗೆ ಹೊಸ ಬೊಲೆರೊ (Bolero) ವನ್ನು ವೈಯಕ್ತಿಕವಾಗಿ ನೀಡುತ್ತೇನೆ. ನಮಗೆ ಸ್ಫೂರ್ತಿ ನೀಡಲು ಇದನ್ನು MahindraResearchValley ನಲ್ಲಿ ಪ್ರದರ್ಶಿಸಬಹುದು. ಸಂಪನ್ಮೂಲಗಳು ಎಂದರೆ ಅತೀ ಕಡಿಮೆ ಸಂಪನ್ಮೂಲಗಳೊಂದಿಗೆ ವಿಶಿಷ್ಟವಾಗಿ ಮಾಡಿ ತೋರಿಸುವುದು” ಎಂದಿದ್ದಾರೆ.

ಈ ಜೀಪ್ ತಯಾರಿಸಲು ವ್ಯಕ್ತಿಗೆ ತಗುಲಿದ್ದು 60 ಸಾವಿರ ರೂಪಾಯಿ

ಈ ವಿಶಿಷ್ಟ ಜೀಪ್‌ನ ವೀಡಿಯೊವನ್ನು Historicano ಎಂಬ ಯೂಟ್ಯೂಬ್ ಚಾನೆಲ್ ಕೂಡ ಅಪ್‌ಲೋಡ್ ಮಾಡಿದೆ. ಈ ಚಾನೆಲ್ ಪ್ರಕಾರ, ಈ ಜೀಪ್ ಅನ್ನು ಮಹಾರಾಷ್ಟ್ರದ ನಿವಾಸಿ ದತ್ತಾತ್ರೇಯ ಲೋಹರ್ ತಯಾರಿಸಿದ್ದಾರೆ. ಇದನ್ನು ತಯಾರಿಸಲು ಅವರಿಗೆ 60 ಸಾವಿರ ರೂ. ತಗುಲಿದೆ. ಮಗನ ಆಸೆಯನ್ನು ಪೂರೈಸಲು ವ್ಯಕ್ತಿ ಇದನ್ನು ತಯಾರು ಮಾಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ವೈರಲ್ ಆಗುತ್ತಿದೆ. ಜನರು ಕೂಡ ಈ ಜುಗಾಡ್ ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ.

Advertisement
Share this on...