“ಆರ್ಮಿಗೆ ಸೇರದ್ರೆ ನಮ್ಮ ಕೋಮಿನವರ (ಮುಸ್ಲಿಂ) ಜೊತೆಗೇ ಹೋರಾಡಬೇಕಾಗತ್ತೆ, ಇದು ಇಸ್ಲಾಂನಲ್ಲಿ ನಿಷಿದ್ಧ ಅಂತ ತಂದೆ ತಾಯಿ ಹೇಳಿಕೊಟ್ರು”: ಇಸ್ಲಾಂನಿಂದ ಬೇಸತ್ತು ಇಸ್ಲಾಂ ತ್ಯಜಿಸಿದ 24 ವರ್ಷದ ಅಸ್ಗರ್ ಮೇಲೆ ಹಲ್ಲೆ

in Uncategorized 4,866 views

ಕೊಲ್ಲಂ, ಕೇರಳ: ತನ್ನ ಧರ್ಮವನ್ನು (ಇಸ್ಲಾಂ) ತ್ಯಜಿಸಿದ್ದಕ್ಕಾಗಿ 24 ವರ್ಷದ ಅಸ್ಗರ್ ಅಲಿ ಎಂಬ ಯುವಕನನ್ನ ಆತನ ಸಮುದಾಯದ್ದೇ ಹತ್ತು ಜನ ಸದಸ್ಯರ ಗ್ಯಾಂಗ್ ಅಪಹರಿಸಿ ಹಲ್ಲೆ ನಡೆಸಿದೆ. ಕಳೆದ ಭಾನುವಾರ ಕೊಲ್ಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವಕ ಭಾಗವಹಿಸಬೇಕಿತ್ತು, ಅಲ್ಲಿ ಅವರು ಇಸ್ಲಾಂ ಧರ್ಮವನ್ನು ತೊರೆಯಲು ಕಾರಣಗಳನ್ನು ಬಹಿರಂಗಪಡಿಸಬೇಕಿತ್ತು.

ಅಸ್ಗರ್ ಅಲಿಯನ್ನು ಹಾಡು ಹಗಲೇ ಬೀಚ್‌ಗೆ ಕರೆದೊಯ್ದು ಕಾರಿನೊಳಗೆ ತಳ್ಳಲಾಯಿತು. ನಂತರ ಅವರ ಕೆಲವು ಸಂಬಂಧಿಕರನ್ನು ಒಳಗೊಂಡ ತಂಡವು ಆತನನ್ನು ಥಳಿಸಿತು. ಮೇ 1 ರಂದು ಕೊಲ್ಲಂನಲ್ಲಿ ‘ಧರ್ಮವನ್ನ ಬಳಸಿಕೊಳ್ಳುವವರು’ ಎಂಬ ವಿಷಯದ ಕುರಿತು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಸ್ಗರ್ ಅಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

Advertisement

ಮಲಪ್ಪುರಂ ನಿವಾಸಿ ಅಸ್ಗರ್ ಅಲಿ ನೀಡಿದ ದೂರಿನ ಮೇರೆಗೆ ಕೊಲ್ಲಂ ಪೊಲೀಸರು ಆತನ ಸಂಬಂಧಿಕರು ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲಿ ದೂರಿನ ಪ್ರಕಾರ, ಮೇ 1 ರಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಬಾರದು ಎಂದು ಒತ್ತಡ, ಧಮಕಿ ಹಾಕಿ ಮಲಪ್ಪುರಂನ ಜನರ ಗುಂಪೊಂದು ನನ್ನನ್ನ ಅಪಹರಿಸಲು ಪ್ರಯತ್ನಿಸಿತು. ಅವರು ನನ್ನ ಮೊಬೈಲ್ ಫೋನ್ ಒಡೆದು ನನ್ನ ಬಟ್ಟೆಗಳನ್ನು ಹರಿದು ಹಾಕಿದರು. ಅವರು ನನ್ನನ್ನು ಬಲವಂತವಾಗಿ ಕಾರ್ ನೊಳಗೆ ಕರೆದೊಯ್ದು ಒಳಗೆ ಲಾಕ್ ಮಾಡಲು ಪ್ರಯತ್ನಿಸಿದರು. ಸ್ಥಳೀಯರು ಘಟನೆಯ ಬಗ್ಗೆ ಮಾಹಿತಿ ನೀಡಿದಾಗ ಪೊಲೀಸರು ನನ್ನನ್ನು ರಕ್ಷಿಸಿದರು ಎಂದು ಅಸ್ಗರ್ ಅಲಿ ತಿಳಿಸಿದ್ದಾನೆ.

ಈ ಘಟನೆಯಲ್ಲಿ ಅಸ್ಗರ್ ಸಂಬಂಧಿಕರೂ ಭಾಗಿಯಾಗಿದ್ದಾರೆ ಎಂದು ಅಸ್ಗರ್ ಆರೋಪಿಸಿದ್ದಾನೆ. ನನ್ನ ಕೆಲವು ಸಂಬಂಧಿಕರು ಮತ್ತು ಕೆಲವು ಸ್ಥಳೀಯ ಜನರು ನನ್ನನ್ನು ಕೊಲ್ಲಂಗೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಮೊದಲಿಗೆ, ಅವರು ನಮ್ಮ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಲಪ್ಪುರಂನಲ್ಲಿ ನಾನಿ ಕಾಣೆಯಾಗಿದ್ದೇನೆ ಎಂಬ ದೂರನ್ನು ದಾಖಲಿಸಿದರು. ಠಾಣೆಗೆ ಹಾಜರಾಗುವಂತೆ ಪೊಲೀಸರು ನನ್ನನ್ನು ಕರೆದರು. ಆದರೆ ಪೊಲೀಸರು ನನ್ನನ್ನು ಸಂಪರ್ಕಿಸಿದಾಗ ನಾನು ಕಾರ್ಯಕ್ರಮ ಮುಗಿದ ನಂತರ ಬರುತ್ತೇನೆ ಎಂದು ಹೇಳಿದ್ದೆ ಎಂದು ಅಸ್ಗರ್ ಹೇಳಿದ್ದಾನೆ.

ನನ್ನನ್ನು ಅಪಹರಿಸಿ ಥಳಿಸುವವರಲ್ಲಿ ನನ್ನ ಸಂಬಂಧಿಕರೂ ಇದ್ದರು:

ಅಸ್ಗರ್ ಮುಂದೆ ಮಾತನಾಡುತ್ತ, ನಾನು ಹೋಟೆಲ್‌ನಲ್ಲಿ ತಂಗಿದ್ದೆ, ನನ್ನ ಇಬ್ಬರು ಸಂಬಂಧಿಕರು ಅವರು ಕೆಲವು ಕೌಟುಂಬಿಕ ವಿಷಯಗಳನ್ನು ಚರ್ಚಿಸಬೇಕಾಗಿದೆ ಎಂದು ನನ್ನ ಬಳಿಗೆ ಬಂದರು. ಅವರು ರೈಲಿನಲ್ಲಿ ಕೊಲ್ಲಂಗೆ ಬಂದಿರುವುದಾಗಿ ತಿಳಿಸಿದರು. ನಾವು ಆಟೋ ರಿಕ್ಷಾದಲ್ಲಿ ಬೀಚ್‌ಗೆ ಹೋದೆವು, ಅಲ್ಲಿ 10-12 ಜನರು ಇನ್ನೋವಾದಲ್ಲಿ ನನಗಾಗಿ ಕಾಯುತ್ತಿದ್ದರು. ನನ್ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಥಳಿಸಲು ಯತ್ನಿಸಿದರು. ನಾನು ಜೋರಾಗಿ ಕೂಗಿದೆ, ನಂತರ ಜನರು ಜಮಾಯಿಸಿದರು ಮತ್ತು ಪೊಲೀಸರೂ ಬಂದರು, ಆದ್ದರಿಂದ ನಾನು ಬದುಕುಳಿದೆ ಎಂದು ಅಸ್ಗರ್ ಅಲಿ ನಡೆದ ಘಟನೆಯ ಬಗ್ಗೆ ತಿಳಿಸಿದನು.

ಇಸ್ಲಾಂ ಯಾಕೆ ತೊರೆದೆ? ಸಂಪೂರ್ಣ ಘಟನೆ ವಿವರಿಸಿದ ಅಸ್ಗರ್

ಇಸ್ಲಾಂ ಧರ್ಮವನ್ನು ತ್ಯಜಿಸಲು ಕಾರಣಗಳನ್ನು ಉಲ್ಲೇಖಿಸಿದ ಅಸ್ಗರ್, ಇತರ ಸಮುದಾಯಗಳನ್ನು ದ್ವೇಷಿಸಲು ನಮಗೆ (ಮುಸ್ಲಿಮರಿಗೆ) ಕಲಿಸಲಾಗಿದೆ ಮತ್ತು ನಮ್ಮ ಧಾರ್ಮಿಕ ತತ್ವಗಳಿಗೆ ವಿರುದ್ಧವಾದ ನಮ್ಮದೇ ಸಮುದಾಯದ ಸದಸ್ಯರನ್ನು ಕೊಲ್ಲಬೇಕು ಎಂದು ಭಾರತೀಯ ಸೇನೆ ಕಲಿಸುತ್ತೆ ಹಾಗಾಗಿ ಭಾರತೀಯ ಸೇನೆಯನ್ನ ಸೇರಬಾರದು ಎಂದು ನಮ್ಮಲ್ಲಿ ಕಲಿಸಲಾಗುತ್ತದೆ. ಭಾರತಕ್ಕೆ ನುಸುಳಲು ಪ್ರಯತ್ನಿಸುವ ಭಯೋತ್ಪಾದಕರನ್ನು ನಾವು ಕೊಲ್ಲುತ್ತೇವೆ ಎಂಬ ಕಾರಣಕ್ಕಾಗಿ ನಮಗೆ ಭಾರತೀಯ ಸೇನೆಗೆ ಸೇರಬಾರದು ಎಂದು ಕಲಿಸುತ್ತಾರೆ. ಯಾಕಂದ್ರೆ ಭಯೋತ್ಪಾದಕರು ಮುಸ್ಲಿಮರಲ್ಲವೇ? ಇತರ ಮುಸ್ಲಿಮರನ್ನು ಕೊಲ್ಲಬಾರದು ಎಂದು ನಮ್ಮ ಧರ್ಮ ನಮಗೆ ಕಲಿಸುತ್ತದೆ. ಇದು ನಿಜಕ್ಕೂ ಅಪಾಯಕಾರಿ ಶಿಕ್ಷಣ ಎಂದು ಅಸ್ಗರ್ ಹೇಳಿದ್ದಾನೆ.

ಅಸ್ಗರ್ ಅಲಿ ಮುಂದೆ ಮಾತನಾಡುತ್ತ, ಸಮುದಾಯದ ಇತರ ಸದಸ್ಯರಿಗೂ ಇದೇ ಸಿದ್ಧಾಂತವನ್ನು ಹರಡಲು ಅವರು ನಮಗೆ ಕಲಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ. ಯಾವುದೇ ಸಂಘಟನೆಯನ್ನು ನಿಷೇಧಿಸುವುದರಿಂದಲೂ ಈ ಅಪಾಯವನ್ನ ನಿಲ್ಲಿಸಲು ಸಾಧ್ಯವಾಗಲ್ಲ. ಇಸ್ಲಾಮೇ ನಿಜವಾದ ಫ್ಯಾಸಿಸಂ ಎಂದನು. ಏಪ್ರಿಲ್ 30 ರಂದು ಅಸ್ಗರ್ ಅಲಿ ಅವರ ಕುಟುಂಬವು ಮಲಪ್ಪುರಂನಲ್ಲಿ ತಮ್ಮ ಮಗ ಅಸ್ಗರ್ ಅಲಿ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿತ್ತು. ಸೋಮವಾರ ರಾತ್ರಿ, ಮಲಪ್ಪುರಂ ಪೊಲೀಸರು ಅಸ್ಗರ್ ಅಲಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಅಸ್ಗರ್ ಹೇಗೆ ಬಯಸುತ್ತಾನೋ ಹಾಗೆ ಬದುಕಲು ಅವಕಾಶ ನೀಡಿತು.

Advertisement
Share this on...