“ನಿರುದ್ಯೋಗದ ಹತಾಶತೆಯಿಂದ ರೇಪ್ ಆಗುತ್ವೆ… ರೇಪ್ ಆದ್ರೂ ಮಹಿಳೆ/ಯುವತಿಯರು ಕಂಪ್ಲೇಂಟ್ ಕೊಡೋದಾಗಲಿ, ಕೋರ್ಟ್‌ನಲ್ಲಿ ಸಾಕ್ಷಿ ಹೇಳೋದನ್ನ ಮಾಡಬಾರದು, ಅದರ ಬದಲಿಗೆ ಯುವತಿಯರು….”: ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

in Uncategorized 411 views

ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌ-ರ್ಜ-ನ್ಯ ಪ್ರಕರಣಗಳು ಗರಿಷ್ಠ ಮಟ್ಟ ತಲುಪಿವೆ. ರೇ-ಪ್ ಮತ್ತು ಕೊ-ಲೆ-ಯ ಘಟನೆಗಳು ರಾಜಸ್ಥಾನದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಆದರೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದಕ್ಕೂ ಒಂದು ನೆಪ ಕಂಡುಕೊಂಡಿದೆ.

2012 ರಲ್ಲಿ ದೆಹಲಿಯಲ್ಲಿ ನಡೆದ ಕ್ರೂ-ರ ನಿರ್ಭಯಾ ರೇ-ಪ್ ಘಟನೆಯ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಸಿಗಲಾರಂಭಿಸಿದೆ, ಅದೇ ಕಾರಣಕ್ಕೆ ರೇಪಿಸ್ಟ್ ಗಳು ಮಹಿಳೆಯರನ್ನು ಅ-ತ್ಯಾ-ಚಾರ ಮಾಡಿದ ನಂತರ ಕೊ-ಲ್ಲು-ತ್ತಿದ್ದಾರೆ. ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಸಿಎಂ ಗೆಹ್ಲೋಟ್ ಈ ಹೇಳಿಕೆಯ ಪ್ರಕಾರ, ರೇಪಿಸ್ಟ್ ಗಳನ್ನ ಗ-ಲ್ಲಿ-ಗೇರಿಸದಿದ್ದರೆ, ಅಪರಾಧಿಗಳು ಅ-ತ್ಯಾ-ಚಾರದ ನಂತರ ಕೊ-ಲೆ ಮಾಡುವುದಿಲ್ಲ. ಅಂದರೆ ಗಲ್ಲುಗೇರಿಸುವ ಶಿಕ್ಷೆ ನೀಡದಿದ್ದರೆ ಈ ಘಟನೆಯು ಕೇವಲ ಅ-ತ್ಯಾ-ಚಾರಕ್ಕೆ ಮಾತ್ರ ಸೀಮಿತವಾಗಿ ಸಂತ್ರಸ್ತ ಮಹಿಳೆಯ ಜೀವಗಳು ಉಳಿಯುತ್ತವೆ ಎಂಬುದು ಗೆಹ್ಲೋಟ್ ವಾದವಾಗಿದೆ.

Advertisement

ಅಶೋಕ್ ಗೆಹ್ಲೋಟ್ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನ ನೀಡುತ್ತಿರೋದು ಇದೇ ಮೊದಲೇನಲ್ಲ. ಮೇ 2022 ರಲ್ಲಿ, ಅವರು ರಾಜ್ಯದಲ್ಲಿ ಅ-ತ್ಯಾ-ಚಾರ ಮತ್ತು ಇತರ ಅಪರಾಧಗಳ ಹೆಚ್ಚಳಕ್ಕೆ “ಉದ್ಯೋಗದ ಕೊರತೆ” ಯಿಂದ ಜನರಲ್ಲಿ ಹತಾಶೆಯ ಕಾರಣ ಎಂದು ಹೇಳಿದ್ದರು. ಬಹುತೇಕ ಅ-ತ್ಯಾ-ಚಾರ ಘಟನೆಗಳನ್ನು ಅವರು ನಕಲಿ ಎಂದು ಕೂಡ ಅವರು ಈ ಹಿಂದೆ ಹೇಳಿದ್ದರು.

ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನಿಜಕ್ಕೂ ಒಪ್ಪತಕ್ಕಂಥದಲ್ಲ, ಯಾಕಂದ್ರೆ ಸಿಎಂ ಕೈಯಲ್ಲಿ ರಾಜ್ಯದ ಲಾ ಆ್ಯಂಡ್ ಆರ್ಡರ್ ಮತ್ತು ಅಲ್ಲಿನ ಭದ್ರತಾ ವ್ಯವಸ್ಥೆಯ ಕಾರ್ಯವಿಧಾನವಿರುತ್ತದೆ. ಅ-ತ್ಯಾ-ಚಾರ ಮತ್ತು ಕೊ-ಲೆ ಘಟನೆಗಳನ್ನು ತಡೆಯಲು ಪೊಲೀಸ್-ಆಡಳಿತವನ್ನು ಬಲಪಡಿಸುವುದು ಅಥವಾ ತಂತ್ರಜ್ಞಾನವನ್ನು ಆಶ್ರಯಿಸುವುದು ಅಥವಾ ಪ್ರಕರಣದ ತ್ವರಿತ ವಿಚಾರಣೆಯಂತಹ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಸಿಎಂ ಗೆಹ್ಲೋಟ್ ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ನೀಡುವ ಮೂಲಕ ಅಪರಾಧಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.

ಹೌದು, ಸಿಎಂ ಗೆಹ್ಲೋಟ್ ಅವರ ಈ ಹೇಳಿಕೆ ಅಪರಾಧಿಗಳ ನೈತಿಕ ಸ್ಥೈರ್ಯ ಹೆಚ್ಚಿಸುವ ರೀತಿಯಲ್ಲಿದೆ. ಈ ಹೇಳಿಕೆಯೂ ಥೇಟ್ ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಅ-ತ್ಯಾ-ಚಾರದ ಘಟನೆಗಳು ಮಿತಿ ಮೀರಿದ್ದಾಗ, ಪ್ರಸ್ತುತ ಎಸ್‌ಪಿ ಪೋಷಕ ಮುಲಾಯಂ ಸಿಂಗ್ ಯಾದವ್ ಅವರು ಮಾತನಾಡುತ್ತ, “ಮಕ್ಕಳು ತಪ್ಪು ಮಾಡುತ್ತಾರೆ” ಎಂದು ಹೇಳಿದಂತೆಯೇ ಇದೆ.

ವಾಗ್ದಾಳಿ ನಡೆಸಿದ ಬಿಜೆಪಿ

ಸಿಎಂ ಗೆಹ್ಲೋಟ್ ಅವರ ಈ ಹೇಳಿಕೆಯ ನಂತರ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಜೈಹಿಂದ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಆದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೌನವಾಗಿದ್ದಾರೆ ಎಂದು ಹೇಳಿದರು.

ಶೆಹಜಾದ್ ಮಾತನಾಡುತ್ತ, “ಅ-ತ್ಯಾ-ಚಾರಿಗಳ ಬದಲಿಗೆ ಕಠಿಣ ಅ-ತ್ಯಾ-ಚಾರ ಕಾನೂನುಗಳನ್ನೇ ಗೆಹ್ಲೋಟ್ ದೂರುತ್ತಿದ್ದಾರೆ! ನಿರ್ಭಯಾ ಘಟನೆಯ ನಂತರ ಕಾನೂನು ಬಿಗಿಗೊಳಿಸಿದ್ದರಿಂದ ಅ-ತ್ಯಾ-ಚಾರ ಸಂಬಂಧಿ ಕೊ-ಲೆ-ಗಳು ಹೆಚ್ಚಾದವು ಎಂದು ಹೇಳುತ್ತಿದ್ದಾರೆ! ಇಂತಹ ಹೇಳಿಕೆ ಇದೇ ಮೊದಲೇನಲ್ಲ! ಬಹುತೇಕ ಅ-ತ್ಯಾ-ಚಾರ ಪ್ರಕರಣಗಳು ನಕಲಿ ಎಂದೂ ಅವರು ಹೇಳಿದ್ದರು! ಅವರ ಮಂತ್ರಿಯೂ ‘ಇದು (ರಾಜಸ್ಥಾನ) ಗಂಡಸರ ಪ್ರದೇಶ, ಆದ್ದರಿಂದಲೇ ಅ-ತ್ಯಾ-ಚಾರಗಳು ನಡೆಯುತ್ತವೆ’ ಎಂದು ಹೇಳಿದ್ದರು, ಆದರೆ ಪ್ರಿಯಾಂಕಾಜೀ ಮೌನವಾಗಿದ್ದಾರೆ?” ಎಂದಿದ್ದಾರೆ.

ಇದು (ರಾಜಸ್ಥಾನ) ಗಂಡಸರ ಪ್ರದೇಶ, ಆದ್ದರಿಂದಲೇ ಅ-ತ್ಯಾ-ಚಾರಗಳು ನಡೆಯುತ್ತವೆ – ಕಾಂಗ್ರೆಸ್ ಸರ್ಕಾರದ ಮಂತ್ರಿ

ಮಾರ್ಚ್ 2022 ರಲ್ಲಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಸಚಿವ ಶಾಂತಿ ಧರಿವಾಲ್ “ಇದು (ರಾಜಸ್ಥಾನ) ಗಂಡಸರ ಪ್ರದೇಶ, ಆದ್ದರಿಂದಲೇ ಅ-ತ್ಯಾ-ಚಾರಗಳು ನಡೆಯುತ್ತವೆ ಹಾಗಾಗಿಯೇ ರಾಜ್ಯವು ರೇ-ಪ್ ಪ್ರಕರಣದಲ್ಲಿ ಮೊದಲ ಸ್ಥಾನದಲ್ಲಿದೆ” ಎಂದು ನಗುತ್ತ ಹೇಳಿದ್ದರು.

ಉತ್ತರಪ್ರದೇಶದಲ್ಲಿ ’ಲಡಕಿ ಹೂಂ ಲಡ್ ಸಕ್ತಿ ಹೂ’ ಮಾರ್ಚ್ ನಡಸಿದ್ದ ರಾಹುಲ್-ಪ್ರಿಯಾಂಕಾ ರಾಜಸ್ಥಾನದ ಬಗ್ಗೆ ಮೌನ

ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ಬಗ್ಗೆ ದೇಶವ್ಯಾಪಿ ಸುದ್ದಿ ಮಾಡಿ ರಾಜಕೀಯವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಜಸ್ಥಾನದ ಘಟನೆಗಳ ಬಗ್ಗೆ ಮೌನವಾಗಿದ್ದಾರೆ. ಮಾರ್ಚ್ ಮಾಡೋದಾದರೂ ದೂರದ ಮಾತು, ಈ ಘಟನೆಗಳ ಬಗ್ಗೆ ಅವರ ಬಾಯಿಂದ ಒಂದು ಪದವೂ ಬಂದಿಲ್ಲ.

ರಾಜಸ್ಥನದ ಕಾಂಗ್ರೆಸ್ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ಜೋಶಿ ಮೇಲೆ ಅ-ತ್ಯಾ-ಚಾರ ಆರೋಪ ಕೇಳಿ ಬಂದಿದೆ. ಶಾಸಕಿ ಮೀನಾ ಮೇಲೆ ಅ-ತ್ಯಾ-ಚಾರ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಜೋಶಿ ಪುತ್ರನ ಮೇಲೆ ಆರೋಪ ಮಾಡಿದ್ದ ಯುವತಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಕೂಡ ಹಾಕಿದ್ದಾರೆ.

ರಾಜ್ಯದಲ್ಲಿ ಪುಟ್ಟ ಪುಟ್ಟ ಹೆಣ್ಣು ಮಕ್ಕಳಿಂದ ಹಿಡಿದು 82 ವರ್ಷದವರೆಗಿನ ವೃದ್ಧ ಮಹಿಳೆಯರ ಮೇಲೂ ಅ-ತ್ಯಾ-ಚಾರ ನಡೆಯುತ್ತಿದ್ದು, ಈ ಘಟನೆಗಳ ಬಗ್ಗೆ ಪ್ರಿಯಾಂಕಾ, ರಾಹುಲ್ ಇಬ್ಬರೂ ಮೌನವಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ದೇಶವು ಕಾಂಗ್ರೆಸ್‌ನ ಈ ಇಬ್ಬಗೆ ನೀತಿಯನ್ನ ಮತ್ತು ಅದರ ಪಕ್ಷದ ನಾಯಕರ ನಡವಳಿಕೆಯನ್ನ ಹತ್ತಿರದಿಂದ ನೋಡಿದೆ.

ರೇ-ಪ್ ಪ್ರಕರಣಗಳಲ್ಲಿ ರಾಜಸ್ಥಾನ ದೇಶಕ್ಕೇ ನಂಬರ್ 1

ನಾವು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (NCRB) ದತ್ತಾಂಶವನ್ನು ನೋಡಿದರೆ, ರಾಜಸ್ಥಾನವು ದೇಶದಲ್ಲಿ ಅ-ತ್ಯಾ-ಚಾರ ಪ್ರಕರಣಗಳಲ್ಲಿ ನಂಬರ್ 1 ಸ್ಥಾನದಲ್ಲಿದೆ. 2020ರಲ್ಲಿ ರಾಜಸ್ಥಾನದಲ್ಲಿ ಒಟ್ಟು 5,310 ಅ-ತ್ಯಾ-ಚಾರ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ, ಅ-ತ್ಯಾ-ಚಾರದ 5,997 ಪ್ರಕರಣಗಳು ದಾಖಲಾಗಿವೆ.

ಗೃಹ ಸಚಿವಾಲಯ ಬಿಡುಗಡೆ ಮಾಡಿದ ರಿಪೋರ್ಟ್ ನಲ್ಲಿ, 2020 ರಲ್ಲಿ ಈ ಅಪರಾಧಗಳಲ್ಲಿ ಕೇವಲ 45.4 ಪ್ರತಿಶತದಷ್ಟು ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಅದೇ ವರ್ಷ ದಾಖಲಾದ ಶೇಕಡ 54.6 ಪ್ರಕರಣಗಳಲ್ಲಿ, ಸಂತ್ರಸ್ತೆಗೆ ನ್ಯಾಯವೂ ಸಿಕ್ಕಿಲ್ಲ. ಅಂದರೆ, 2020 ರಲ್ಲಿ, ದಾಖಲಾದ ಒಟ್ಟು ಅ-ತ್ಯಾ-ಚಾರ ಪ್ರಕರಣಗಳಲ್ಲಿ ಅರ್ಧಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ.

ಹೀಗಿರುವಾಗ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರದ ವೈಫಲ್ಯ ಹಾಗೂ ಪೊಲೀಸ್-ಆಡಳಿತದ ನಿರ್ಲಕ್ಷ್ಯದ ಆರೋಪವನ್ನು ಕಠಿಣ ಕಾನೂನಿನ ಮೇಲೆ ಹೊರಿಸಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಘಟನೆಗಳು ಸಾಬೀತುಪಡಿಸುತ್ತಿವೆ.

Advertisement
Share this on...