ಮೂಳೆಗಳೂ ಫ್ರೀಜ್ ಆಗುವಂತಹ ಮೈನಸ್ ಡಿಗ್ರಿ ಕೊರೆಯುವ ಚಳಿಯಲ್ಲಿಯೂ ಬರೋಬ್ಬರಿ 14 ವರ್ಷಗಳಿಂದ ಕೇದಾರನಾಥದಲ್ಲಿ ತಪಸ್ಸು ಮಾಡುತ್ತಿರುವ ಸಂತ: ಕಾರಣವೇನು ಗೊತ್ತಾ?
ಕೇದಾರನಾಥ ಉತ್ತರಾಖಂಡದ ಪ್ರಸಿದ್ಧ ಜ್ಯೋತಿರ್ಲಿಂಗ ಕ್ಷೇತ್ರವಾಗಿದೆ. ಚಳಿಗಾಲದಲ್ಲಿ ಕೇದಾರನಾಥದ ಸುತ್ತಮುತ್ತಲಿನ ಪ್ರದೇಶಗಳು ಹಿಮದಿಂದ ಆವೃತವಾಗಿದ್ದು, ತಂಪಾದ ಗಾಳಿ ಬೀಸುತ್ತದೆ. ಚಾರ್ಧಾಮ್ ದೇವಾಲಯಗಳನ್ನು ಪ್ರತಿ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಿನಿಂದ ಏಪ್ರಿಲ್-ಮೇವರೆಗೆ ಮುಚ್ಚಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ಕೇದಾರಧಾಮ ಖಾಲಿಯಾಗುತ್ತದೆ. ಆದರೆ ಬಾಬಾ ಕೇದಾರನ ಮಹಾ ಭಕ್ತ ಲಲಿತ್ ಮಹಾರಾಜ್ ಹಲವು ವರ್ಷಗಳಿಂದ ಇಲ್ಲಿ ತಪಸ್ಸು ಮಾಡುತ್ತಿದ್ದಾರೆ. ಪ್ರತಿಯೊಬ್ಬ ಹಿಂದೂ ತನ್ನ ಜೀವನದಲ್ಲಿ ಒಮ್ಮೆಯಾದರೂ ಕೇದಾರನಾಥಕ್ಕೆ ಭೇಟಿ ನೀಡಲು ಬಯಸುತ್ತಾನೆ. ಹಿಮಾಲಯದ ಹೃದಯಭಾಗದಲ್ಲಿರುವ ಪವಿತ್ರ ದೇವಾಲಯಕ್ಕೆ ಹೋಗುವುದು ಸುಲಭವಲ್ಲ. ಆದರೆ…