ಭಾರತದಲ್ಲಿ ಎರಡನೆ ಅಲೆಯೇ ಇನ್ನೂ ಮುಗಿದಿಲ್ಲ ಆಗಲೇ ಮತ್ತೊಂದು ಹೊಸ ಡೇಂಜರಸ್ ಕೊರೋನಾ ಪತ್ತೆ
ಭಾರತದಲ್ಲಿ ಕೊರನಾವೈರಸ್‌ನ ಎರಡನೇ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೊಸ ಮಾದರಿಯ B.1.1.28.2 ಕೊರೊನಾವೈರಸ್‌ಅನ್ನು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಲಾಗಿದೆ. ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ…