300 ವರ್ಷಗಳಿಂದ ಭೂಮಿಯಲ್ಲಿ ಹುದುಗಿಹೋಗಿದ್ದ 11ನೆಯ ಶತಮಾನದ ಹಿಂದೂ ಮಂದಿರ: ಉತ್ಖನನದ ವೇಳೆ ಅಚಾನಕ್ಕಾಗಿ ಮಂದಿರದ ಜೊತೆ ವಿಜ್ಞಾನಿಗಳಿಗೆ ಸಿಕ್ಕದ್ದೇನು ನೋಡಿ, ಶಾಕ್ ಆದ ತಜ್ಞರು
ಮಧ್ಯಪ್ರದೇಶದ ಸೀಹೋರ್‌ನಲ್ಲಿ ಧ್ವಂಸಗೊಂಡ ದೇವಾಲಯಗಳ ಅವಶೇಷಗಳನ್ನು ಸೇರಿಸಿ ಪುನಃ ಸ್ಥಾಪಿಸಲಾಗುತ್ತಿದೆ. ಈ ದೇವಾಲಯಗಳು 11 ನೇ ಶತಮಾನದಲ್ಲಿ ಪರ್ಮಾರ್ ಕ್ಷತ್ರಿಯರ ಆಳ್ವಿಕೆಗೆ ಸೇರಿವೆ ಮತ್ತು ಕಳೆದ 300 ವರ್ಷಗಳಿಂದ ಭೂಮಿಯಲ್ಲಿ ಹುದುಗಿ ಹೋಗಿದ್ದವು. ಇವುಗಳಲ್ಲಿ ಸುಮಾರು 51 ಅಡಿ ಎತ್ತರದ ಶಿವನ ದೇವಾಲಯವನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ 41 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈ ದೇವಾಲಯವನ್ನು ಸೀಹೋರ್ ಜಿಲ್ಲೆಯ ಬಿಲ್ಪಾನ್ ಗ್ರಾಮದ ಬಳಿ ದೇವಬದ್ಲಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಈ ಪ್ರದೇಶವು ಜಿಲ್ಲಾ ಕೇಂದ್ರದಿಂದ 75 ಕಿ.ಮೀ ದೂರದಲ್ಲಿದೆ…