“ಈ ಬಾರಿ ಸುಮ್ಮನಿರಲ್ಲ, ನಮ್ಮ ಹೋರಾಟ ನಿಂತಿಲ್ಲ ನಿಲ್ಲೋದೂ ಇಲ್ಲ” ಮೋದಿ ಸರ್ಕಾರದ ವಿರುದ್ಧ ಈ ವಿಚಾರಕ್ಕಾಗಿ ಮತ್ತೆ ಅಖಾಡಕ್ಕಿಳಿದ ಅಣ್ಣಾ ಹಜಾರೆ
ದೆಹಲಿ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅವರು ದೇಶದ ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವ ತನ್ನ ಆಂದೋಲನಗಳು ನಿಂತಿಲ್ಲ ಮತ್ತು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. “ಯಾರೋ ಹೇಳಿದ್ದಾರೆಂದು ನಾನು ಚಳವಳಿ ಮಾಡಿಲ್ಲ, ಈ ದೇಶದ ಜನರ ಹಿತಾಸಕ್ತಿಗಾಗಿ ನಾನು ಯಾವಾಗಲೂ ಆಂದೋಲನಗಳನ್ನು ನಡೆಸುತ್ತಿದ್ದೆ ಮತ್ತು ಅದನ್ನು ಮುಂದುವರಿಸುತ್ತೇನೆ” ಎಂದು ಅಣ್ಣಾ ಹಜಾರೆ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮೋದಿ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಗ…