ಸೋಶಿಯಲ್ ಮೀಡಿಯಾ ಬಳಸಿದ್ದಕ್ಕೆ ಮೌಲಾನಾಗೆ ಸಾವಿನ ಶಿಕ್ಷೆ ಕೊಟ್ಟ ಸೌದಿ ಅರೇಬಿಯಾ ಸರ್ಕಾರ: ಕಾರಣವೇನು ನೋಡಿ

in Uncategorized 171 views

ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ್ದಕ್ಕಾಗಿ ಸೌದಿ ಅರೇಬಿಯಾದಲ್ಲಿ 65 ವರ್ಷದ ಪ್ರೊಫೆಸರ್ ಅವದ್ ಅಲ್-ಖರ್ನಿ (Awad Al-Qarni) ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಸುದ್ದಿ ಹರಿದಾಡುತ್ತಿದ್ದಾರೆ ಎಂಬ ಆರೋಪ ಈತನ ಮೇಲಿದೆ.

Advertisement

ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾದ ಆಡಳಿತವನ್ನು ವಹಿಸಿಕೊಂಡ ನಂತರ, ಸುಧಾರಣಾ ಪರ ಕಾನೂನಿನನ್ವಯ ಈ ಮೌಲ್ವಿಯನ್ನ ಸೆಪ್ಟೆಂಬರ್ 9, 2017 ರಂದು ಬಂಧಿಸಲಾಯಿತು. ವರದಿಯ ಪ್ರಕಾರ, ಅವದ್ ಅಲ್-ಖರ್ನಿ ಯನ್ನ ದೇಶದ ಮಾಧ್ಯಮಗಳು ‘ಅಪಾಯಕಾರಿ ಬೋಧಕ’ ಎಂದು ತಪ್ಪಾಗಿ ಚಿತ್ರಿಸಲಾಗಿತ್ತು.

ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ಪ್ರಕಾರ, ಮೌಲ್ವಿಯನ್ನ ಬಂಧಿಸುವ ಮೊದಲು ಟ್ವಿಟರ್‌ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದ‌. ಆತನ ಬಂಧನವನ್ನು ನಿರಂಕುಶ ಸೌದಿ ಅರೇಬಿಯಾ ಸರ್ಕಾರವು ಭಿನ್ನಮತೀಯರ ವಿರುದ್ಧದ ಶಿಸ್ತುಕ್ರಮವೆಂದು ಪರಿಗಣಿಸಲಾಗಿದೆ.

ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತದಿಂದ ಸೌದಿ ಅರೇಬಿಯಾದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡುವುದನ್ನ ಅಪರಾಧ ಎಂದು ಮಾಡಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕಿಂಗ್ಸ್ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಭಾರಿ ಹೂಡಿಕೆಯನ್ನು ಹೊಂದಿರುವಾಗಲೇ ಇಂತಹ ಪರಿಸ್ಥಿತಿಯಿದೆ.

ಅವದ್ ಅಲ್-ಖರ್ನಿ ತನ್ನ ಟ್ವಿಟ್ಟರ್ ಖಾತೆಯನ್ನು (@awadalqarni) ಪ್ರತಿ ಅವಕಾಶದಲ್ಲೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಳಸಿದ್ದಾನೆ ಎಂದು ಒಪ್ಪಿಕೊಂಡ ನಂತರ ಮರಣದಂಡನೆ ವಿಧಿಸಲಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ತಮ್ಮ ವಿರುದ್ಧದ ಆರೋಪಗಳ ಕುರಿತು ಅವರ ಪುತ್ರ ನಾಸರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ನಾಸರ್ ಕಳೆದ ವರ್ಷ ಸೌದಿ ಅರೇಬಿಯಾದಿಂದ ಪಲಾಯನ ಮಾಡಿದ್ದು, ಅಂದಿನಿಂದ ಬ್ರಿಟನ್ ನಲ್ಲಿ ವಾಸಿಸುತ್ತಿದ್ದಾನೆ‌.

ಅವದ್ ಅಲ್-ಖರ್ನಿ ಮೇಲೆ ವೀಡಿಯೋಗಳು ಮತ್ತು ವಾಟ್ಸಾಪ್ ಚಾಟ್‌ಗಳಲ್ಲಿ ಮೂಲಭೂತ ಇಸ್ಲಾಮಿಕ್ ಸಂಘಟನೆ ಮುಸ್ಲಿಂ ಬ್ರದರ್‌ಹುಡ್ ಅನ್ನು ಹೊಗಳಿದ್ದಾನೆ ಎಂಬ ಆರೋಪವಿದೆ. “ಅಲ್-ಖರ್ನಿ ಟೆಲಿಗ್ರಾಂನಲ್ಲಿ ಮೂಲಭೂತವಾದಿಗಳ ಜೊತೆ ಸಂಪರ್ಕ ಹೊಂದಿದ್ದ ಎಂಬ ಆರೋಪಗಳೂ ಇವೆ” ಎಂದು ವರದಿ ಹೇಳಿದೆ.

ಸೋಶಿಯಲ್ ಮೀಡಿಯಾ ಬಳಸಿದ್ದಕ್ಕಾಗಿ ಸೌದಿ ರಾಜಪ್ರಭುತ್ವವು ಯಾರನ್ನಾದರೂ ಶಿಕ್ಷಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಆಗಸ್ಟ್‌ನಲ್ಲಿ, ಸಲ್ಮಾ ಅಲ್-ಶಹಾಬ್ ಎಂಬ ಮಹಿಳೆಗೆ ಟ್ವಿಟರ್ ಖಾತೆಯನ್ನು ಹೊಂದಿದ್ದಕ್ಕಾಗಿ ಮತ್ತು ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತವನ್ನು ಟೀಕಿಸುವ ಟ್ವೀಟ್‌ಗಳನ್ನು ಶೇರ್ ಮಾಡಿದ್ದಕ್ಕಾಗಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಮಾನವ ಹಕ್ಕುಗಳ ಗುಂಪು ರಿಪ್ರೈವ್‌ಗಾಗಿ ಕೆಲಸ ಮಾಡುವ ಜೆಡ್ ಬಸೌನಿ ಮಾತನಾಡುತ್ತ, ಅವದ್ ಅಲ್-ಖರ್ನಿಗೆ ನೀಡಲಾದ ಮರಣದಂಡನೆಯು ವಿಮರ್ಶಕರನ್ನು ಮೌನಗೊಳಿಸುವ ಮಾದರಿಯನ್ನು ಅನುಸರಿಸುತ್ತದೆ ಎಂದು ಹೇಳಿದರು. ಅವರು ಮುಂದೆ ಮಾತನಾಡುತ್ತ, “… ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮಾರ್ಗದರ್ಶನದ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜನರು ತಮ್ಮ ಅಭಿಪ್ರಾಯಗಳಿಗಾಗಿ, ಟ್ವೀಟ್‌ಗಳಿಗಾಗಿ ಮತ್ತು ಸಂಭಾಷಣೆಗಳಿಗಾಗಿ ಕೊಲ್ಲಬೇಕೆಂದು ಕೇಳಿಕೊಂಡಿದ್ದಾರೆ. ಅವರು (ಆ್ಯಕ್ಟಿವಿಸ್ಟ್ ಗಳು) ಅಪಾಯಕಾರಿ ಅಲ್ಲ. ಅವರು ಆಡಳಿತವನ್ನು ಕಿತ್ತೊಗೆಯುವಂತೆ ಕರೆ ನೀಡುತ್ತಿಲ್ಲ” ಎಂದಿದ್ದಾರೆ

ಮೊಹಮ್ಮದ್ ಬಿನ್ ಸಲ್ಮಾನ್ ತನ್ನ ತಂದೆಯಿಂದ ಸೌದಿ ಅರೇಬಿಯಾದ ಅಧಿಕಾರ ವಹಿಸಿಕೊಂಡ ನಂತರ, ತಮ್ಮ ದೇಶವನ್ನ ಜಗತ್ತಿನಲ್ಲಿ ಸಹಿಷ್ಣು, ಬಹುತ್ವದ ಸಮಾಜವಾಗಿ ಮರುಸ್ಥಾಪಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಇದೆಲ್ಲವೂ ನಡೆಯುತ್ತಿದೆ.

ನೋಟ್: ಮೌಲ್ವಿಗೆ ಮರಣದಂಡನೆ ವಿಧಿಸುವ ಕುರಿತು ನ್ಯಾಯಾಲಯದ ತೀರ್ಪು ಇನ್ನಷ್ಟೇ ಬರಬೇಕಿದೆ ಎಂದು ಅನೇಕ ಮಾಧ್ಯಮ ವರದಿಗಳು ಹೇಳುತ್ತಿವೆ. ಅದೇ ಸಮಯದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ಕೆಲ ಮಾಧ್ಯಮ ವರದಿಗಳು ಹೇಳುತ್ತಿದ್ದವು. ಈ ಲಿಂಕ್‌ನಲ್ಲಿ ನೀವು ದಿ ಗಾರ್ಡಿಯನ್ ವರದಿಯ ಆರ್ಕೈವ್ ಮಾಡಿದ ಲಿಂಕ್ ಅನ್ನು ನೋಡಬಹುದು. 

Advertisement
Share this on...