ನವದೆಹಲಿ: ಪ್ರಧಾನಿ ಮೋದಿ ಅವರು ಇತ್ತೀಚೆಗೆ ಕಾಶಿಗೆ ಆಗಮಿಸಿ ಗಂಗಾನದಿಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದರು. ಅದ್ಧೂರಿ ಕಾರ್ಯಕ್ರಮದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ನ್ನೂ ಉದ್ಘಾಟಿಸಲಾಯಿತು. ಪ್ರತಿಪಕ್ಷಗಳೂ ಈ ಕಾರ್ಯಕ್ರಮವನ್ನ ಕಣ್ಣು ಮಿಟುಕಿಸದೇ ನೋಡಿದ್ದವು. ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರು ಕಾಮೆಂಟ್ ಮಾಡಲು ಆರಂಭಿಸಿದರು. “ಜೀವನದ ಕೊನೆಯ ಕ್ಷಣದಲ್ಲೇ (ಸಾವು ಸಮೀಪಿಸುವ ಸಮಯದಲ್ಲಿ ಕಾಶಿಗೆ ಹೋಗಬೇಕೆನ್ನುವ ಮನುಷ್ಯನ ಕೊನೆಯ ಆಸೆಯಾಗಿರುತ್ತೆ) ವ್ಯಕ್ತಿ ಕಾಶಿಗೆ ಹೋಗುತ್ತಾನೆ” ಎಂದು ಅಖಿಲೇಶ್ ಯಾದವ್ ಹೇಳಿದ್ದರು. ಈ ಹೇಳಿಕೆಗೆ ಜನರಿಂದ ಭಾರೀ ವಿರೋಧ ವ್ಯಕ್ತವಾದ ಬಳಿಕ ಅಖಿಲೇಶ್ ನಂತರ ಕ್ಷಮೆಯಾಚಿಸಿದ್ದರು. ಇದೀಗ ಪ್ರಧಾನಿ ಮೋದಿಯವರ ಗಂಗಾಸ್ನಾನದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯು ಈಗ ಅಯೋಧ್ಯೆಯ ಅನೇಕ ಸಂತರನ್ನು ಕೆರಳಿಸಿದೆ.
ಪ್ರಧಾನಿ ಮೋದಿ ಗಂಗಾಸ್ನಾನದ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತ, “ಪ್ರಧಾನಿ ಗಂಗಾನದಿಯಲ್ಲಿ ಸ್ನಾನ ಮಾಡಿದ್ದನ್ನು ನಾವು ನೋಡಿದ್ದೇವೆ. ಮೊಟ್ಟಮೊದಲ ಬಾರಿಗೆ ಒಬ್ಬ ವ್ಯಕ್ತಿ ಮಾತ್ರ ಸ್ವತಃ ಗಂಗೆಯಲ್ಲಿ ಸ್ನಾನ ಮಾಡುತ್ತಿರುವುದನ್ನು ನಾನು ನೋಡಿದೆ. ಗಂಗಾನದಿಯಲ್ಲಿ ಒಬ್ಬ ಮನುಷ್ಯ ಹೋಗಿ ಸ್ನಾನ ಮಾಡಿದ್ದು ಇತಿಹಾಸದಲ್ಲಿಯೇ ನಡೆದಿಲ್ಲ. ಉಳಿದವರನ್ನೆಲ್ಲ ಮೋದಿ ಕಿತ್ತೆಸೆದಿದ್ದಾರೆ. ಸಿಎಂ ಯೋಗಿಯನ್ನು ಸೈಡ್‌ಗೆ ಹಾಕಿದ್ದಾರೆ, ರಾಜನಾಥ್ ಸಿಂಗ್ ಅವರನ್ನು ಹೊರಹಾಕಿದ್ದಾರೆ. ಒಬ್ಬನೇ ಒಬ್ಬ ಮನುಷ್ಯನು ಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದಾನೆ ಮತ್ತು ಬೇರೆಯವರಿಗೆ ಅವಕಾಶವಿಲ್ಲ ಎಂದು ಇಡೀ ಜಗತ್ತು ನೋಡಿದೆ” ಎಂದು ಹೇಳಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಅಯೋಧ್ಯೆಯ ಸಾಧುಗಳು ಮತ್ತು ಸಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಗಂಗಾನದಿಯಲ್ಲಿ ರಾಹುಲ್ ಗಾಂಧಿ ಯಾವಾಗ ಸ್ನಾನ ಮಾಡಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ, ಅವರು ಮತ್ತು ಅವರ ತಾಯಿ ಸೋನಿಯಾ ಗಾಂಧಿ ಕೂಡ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂದು. ಅದನ್ನೂ ಟಿವಿಯಲ್ಲಿ ತೋರಿಸಲಾಗುತ್ತದೆ” ಎಂದು ಅಯೋಧ್ಯೆಯ ಅಯೋಧ್ಯೆಯ ಪೀಠಾಧೀಶ್ವರ ಸಂತ ಪರಮಹಂಸರು ಹೇಳಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ಗಾಂಧಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು, “60 ವರ್ಷಗಳಿಂದ ಭಾರತೀಯ ಸಂಪ್ರದಾಯವನ್ನು ಹಾಳು ಮಾಡಲು ಕಾಂಗ್ರೆಸ್ ಪಕ್ಷವು ವೇದ, ಪುರಾಣ, ಶಾಸ್ತ್ರ, ಗೀತೆ, ಆಶ್ರಮ, ಮಠ-ಮಂದಿರಗಳನ್ನು ಹಾಳು ಮಾಡಲು ಯತ್ನಿಸಿದೆ” ಎಂದು ವಾಗ್ದಾಳಿ ನಡೆಸಿದರು. ಈಗ ದೇಶಭಕ್ತಮ ಕೈಯಲ್ಲಿ ಅಧಿಕಾರವಿದೆ, ಅವರಿಂದ ಭಾರತೀಯ ಸಂಸ್ಕೃತಿಯನ್ನು ಮರುಸ್ಥಾಪಿಸಲಾಗುತ್ತಿದೆ, ಇದರಿಂದಾಗಿ ಕಾಂಗ್ರೆಸ್ ಪಕ್ಷವು ನರಳುತ್ತಿದೆ. ರಾಹುಲ್ ಗಾಂಧಿಯನ್ನು ಅಜ್ಞಾನಿ ಎಂದು ಕರೆದ ಸಂತ ಪರಮಹಂಸರು, ಕೋಟ್ ಮೇಲೆ ಜನಿವಾರ ಹಾಕಿಕೊಂಡು ಮತ ಕೇಳಲು ಶ್ರೀಗಂಧ ಹಚ್ಚಿದರೂ ಟಿವಿಯಲ್ಲಿ ತೋರಿಸುತ್ತಾರೆ. ರಾಹುಲ್ ಗಾಂಧಿ ಅವರಿಗೆ ಗಂಗಾನದಿಯಲ್ಲಿ ಸ್ನಾನ ಮಾಡಬೇಕಿಲ್ಲ, ಮಠ-ಮಂದಿರಗಳ ಭಾರತೀಯ ಸಂಪ್ರದಾಯಗಳ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಮೊದಲು ಭಾರತೀಯ ಸಂಪ್ರದಾಯದ ಬಗ್ಗೆ ಓದಬೇಕು, ನಂತರ ಪ್ರತಿಕ್ರಿಯಿಸಬೇಕು ಎಂದು ಸಂತ ಪರಮಹಂಸರು ಹೇಳಿದ್ದಾರೆ.
ಇದೇ ವೇಳೆ ಹನುಮಾನಗಢಿಯ ಮಹಂತ್ ರಾಜು ದಾಸ್ ಕೂಡ ರಾಹುಲ್ ಗಾಂಧಿಗೆ ಯುವರಾಜ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಪ್ರತಿಷ್ಠಿತ 3000 ಮಠ-ಮಂದಿರಗಳ ಮಠಾಧೀಶರಾದ ಶಂಕರಾಚಾರ್ಯ, ಜಗದ್ಗುರು ರಮಾನಂದಾಚಾರ್ಯರ ಸಮ್ಮುಖದಲ್ಲಿ ದೇಶದ ಖ್ಯಾತ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದರು ಮತ್ತು ಆ ಸ್ಥಳದಲ್ಲಿ ಪ್ರಧಾನಿ ಮೋದಿ ಗಂಗಾ ಸ್ನಾನ ಮಾಡಿದರು. ಸಾಧು ಸಂತರು ಅವನನ್ನು ಆಶೀರ್ವದಿಸಿದರು. ಇಂತಹ ಪ್ರಧಾನಿಯನ್ನು ರಾಹುಲ್ ಗಾಂಧಿ ಲೇವಡಿ ಮಾಡುತ್ತಾ ಬರೀ ಒಬ್ಬರೇ ಗಂಗಾಸ್ನಾನ ಮಾಡಿದ್ದಾರೆ ಎಂದು ಹೇಳಿದ್ದು ಎಷ್ಟು ಸರಿ? ಈಗ ಅವರು ಕ್ಷಮೆ ಕೇಳಬೇಕು ಎಂದು ಹೇಳುತ್ತಾರೆ ರಾಜುದಾಸ್. ಈ ಮೂಲಕ ಧರ್ಮ ಮತ್ತು ಸಂಸ್ಕೃತಿಯನ್ನು ಅವಮಾನಿಸಲು ಸಾಧ್ಯವಿಲ್ಲ. ನಕಲಿ ಹಿಂದೂಗಳಾಗಬೇಡಿ ಎಂದು ರಾಹುಲ್ ಗಾಂಧಿಗೆ ರಾಜುದಾಸ್ ಸಲಹೆ ನೀಡಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಕ್ಷಮೆ ಯಾಚಿಸದಿದ್ದರೆ ಪರಿಣಾಮ ಸರಿಯಿರಲ್ಲ ಎಂದರು.
ಸದ್ಯ ಚುನಾವಣೆಯಿರುವ ಕಾರಣ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತ ತಿರುಗಾಡುತ್ತಿದಗದಾರೆ, ಮತ್ತೊಂದೆಡೆ ಅಯೋಧ್ಯೆಯ ಸಂತರು ಪ್ರಧಾನಿ ಮೋದಿಯವರ ಗಂಗಾಸ್ನಾನದ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಲು ಆಗ್ರಹಿಸುತ್ತಿದ್ದಾರೆ.