ತನ್ನ ಶ-ವ ಎಲ್ಲಿದೆ ಅಂತ ಮತ್ತೊಬ್ಬ ಸೈನಿಕನ ಕನಸಿನಲ್ಲಿ ಬಂದು ತಿಳಿಸಿದ ಹುತಾತ್ಮ ಯೋಧ: ಬಳಿಕ ಜಾಡು ಹಿಡಿದು ಹೊರಟ ಆರ್ಮಿ ಟೀಮ್‌ಗೆ ಮರುದಿನ ಕಾದಿತ್ತು ಶಾಕ್

in Uncategorized 990 views

ಭಾರತೀಯ ಸೇನೆಯಲ್ಲಿ ದೇಶವನ್ನ ಕಾಯುವ ಕೆಚ್ಚೆದೆಯ ಯೋಧರ ಸಂಖ್ಯೆಗೇನೂ ಕೊರತೆಯಿಲ್ಲ. ಒಬ್ಬರಿಗಿಂತ ಒಬ್ಬರು ಸಾಹಸಿ, ಶೌರ್ಯ ಹೊಂದಿರುವ ಯೋಧರು ಭಾರತೀಯ ಸೈನ್ಯದಲ್ಲಿದ್ದಾರೆ. ಆದರೆ ಇಂದು ನಾವು ಹೇಳಲು ಹೊರಟಿರುವ ಯೋಧನ ಬಗ್ಗೆ ತಿಳಿದರೆ ನೀವೊಮ್ಮೆ ಅಚ್ಚರಿಪಡುತ್ತೀರ.

Advertisement

ಭಾರತೀಯ ಗಡಿಯನ್ನ ಯೋಧರು ಕಾಯುತ್ತಾರೆ ಅನ್ನೋದು ನಿಮಗೆಲ್ಲಾ ಗೊತ್ತಿರುವ ವಿಷಯವೇ, ಆದರೆ ನಾವು ನಿಮಗೀಗ ಹೇಳಲು ಹೊರಟಿರುವ ಯೋಧ ದಶಕಗಳ ಹಿಂದೆಯೇ ವೀರಮರಣವನ್ನಪ್ಪಿದ್ದ ಆದರೆ ಇಂದಿಗೂ ಆತನ ಆತ್ಮ ಗಡಿ ಕಾಯುತ್ತಿದೆಯೆಂದರೆ ನೀವು ನಂಬುತ್ತೀರ? ಅಚ್ಚರಿಯಾದರೂ ಇದು ನಿಜ.

ಮತ್ತೊಂದು ರೋಚಕ ಸಂಗತಿಯೇನೆಂದರೆ ಈ ಯೋಧ(ಬಾಬಾ ಹರಭಜನ್ ಸಿಂಗ್)ನಿಗೆ ಈಗಲೂ ಭಾರತೀಯ ಸೇನೆಯಿಂದ ಸಂಬಳ ಹಾಗು ಪ್ರೊಮೋಷನ್ ನೀಡಲಾಗುತ್ತಿದೆ. ಆಶ್ಚರ್ಯವಾದರೂ ನೀವು ಕೇಳುತ್ತಿರೋ ಈ ಸುದ್ದಿ ನಿಜ. ಸಿಕ್ಕಿಂ ನ ಗ್ಯಾಂಗಟಾಕ್ ಬಳಿ ಈ ಯೋಧನ ಮಂದಿರವನ್ನೂ ಭಾರತೀಯ ಸೇನೆ ನಿರ್ಮಿಸಿದೆ. ಆ ವೀರ ಯೋಧನ ಹೆಸರು ಬಾಬಾ ಹರಭಜನ್ ಸಿಂಗ್ ಅಂತ.

ಭಾರತೀಯ ಸೇನೆಯಲ್ಲಿ ಯೋಧನಾಗಿದ್ದ ಹರಭಜನ್ ಸಿಂಗ್ ರ ಆತ್ಮ ಈಗಲೂ ಭಾರತದ ಗಡಿ ಕಾಯುತ್ತಿದೆ. ಆ ಯೋಧನನ್ನ ಈಗ ಜನ ಹಾಗು ಸೇನೆ ಪೂಜಿಸಲೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಆ ಯೋಧನನ್ನ ಬಾಬಾ ಹರಭಜನ್ ಸಿಂಗ್ ಅಂತ ಕರೆಯುವುದಲ್ಲದೆ ಆತನ ಮಂದಿರವನ್ನೂ ಭಾರತೀಯ ಸೇನೆ ನಿರ್ಮಿಸಿದೆ. ಜರಭಜನ್ ಸಿಂಗರ ಬಂಕರ್ ನ್ನೇ ಮಂದಿರವೆಂದು ದೇವಸ್ಥಾನದ ರೀತಿಯಲ್ಲಿ ಅಲ್ಲಿ ಪೂಜೆ ಪುನಸ್ಕಾರಗಳನ್ನ ನೆರವೇರಿಸಲಾಗುತ್ತದೆ.

ಹರಭಜನ್ ಸಿಂಗರ ಈ ಮಂದಿರದಕ್ಕೆ ಪ್ರತಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸೇನೆಯ ಯೋಧರಷ್ಟೇ ಅಲ್ಲದೆ ಭಕ್ತರು ಆಗಮಿಸುತ್ತಾರೆ ಹಾಗು ಬಾಬಾ ಹರಭಜನ್ ಸಿಂಗರಿಗೆ ಸೆಲ್ಯೂಟ್ ಮಾಡಿ ಹೋಗುತ್ತಾರೆ. ಬನ್ನಿ ನಾವು ಬಾಬಾ ಹರಭಜನ್ ಸಿಂಗರ ಬಗ್ಗೆ ನಿಮಗೆ ಈ ಕುರಿತಾಗಿ ವಿಸ್ತಾರವಾಗಿ ತಿಳಿಸುತ್ತೇವೆ.

ಹರಭಜನ್ ಸಿಂಗ್ (ಬಾಬಾ ಹರಭಜನ್ ಸಿಂಗ್) 1968 ರ ವರೆಗೆ 24 ಪಂಜಾಬ್ ರೆಜಿಮೆಂಟ್ ನಲ್ಲಿ ಯೋಧನಾಗಿ ಕಾರ್ಯ ನಿರ್ವಹಿಸಿದ್ದರು. ತಾವು ಭಾರತಮಾತೆಯ ಸೇವೆ ಮಾಡುತ್ತಿರುವಾಗಲೇ ದುರ್ಘಟನೆಯೊಂದರಲ್ಲಿ ಅವರು ತಮ್ಮ ಪ್ರಾಣಾರ್ಪಣೆ ಮಾಡಿಬಿಟ್ಟಿದ್ದರು. ಈ ದುರ್ಘಟನೆ ನಡೆದ ಹಲವಾರು ದಿನಗಳ ಬಳಿಕವೂ ಹರಭಜನ್ ಸಿಂಗರ ಮೃತ ದೇಹ ಸಿಕ್ಕೇ ಇರಲಿಲ್ಲ. ಜನರು ಹೇಳುವಂತೆ ಒಂದು ದಿನ ರಾತ್ರಿ ಮತ್ತೊಬ್ಬ ಯೋಧನ ಕನಸಿನಲ್ಲಿ ಬಾಬಾ ಹರಭಜನ್ ಸಿಂಗ್ ಬಂದು ತನ್ನ ಪಾರ್ಥೀವ ಶರೀರವಿರುವ ಬಗ್ಗೆ ತಿಳಿಸಿದನಂತೆ.

ಆಗ ಆ ಯೋಧ ಈ ವಿಷಯವನ್ನ ತನ್ನ ಸೀನಿಯರ್ ಆಫೀಸರ್ ಗಳಿಗೆ ತಿಳಿಸಿದ, ಬಳಿಕ ಮರುದಿನ ಶವಕ್ಕಾಗಿ ಶೋಧ ಕಾರ್ಯ ಶುರುವಾಗೇ ಬಿಟ್ಟಿತು. ಇಂಟರೆಸ್ಟಿಂಗ್ ಸಂಗತಿಯೇನೆಂದರೆ ರಾತ್ರಿ ಕನಸಿನಲ್ಲಿ ಬಂದು ಬಾಬಾ ಹರಭಜನ್ ಸಿಂಗ್ ಯಾವ ಸ್ಥಳದಲ್ಲಿ ತನ್ನ ಶವವಿದೆಯೆಂದು ಹೇಳಿದ್ದನೋ ಅದೇ ಜಾಗದಲ್ಲಿ ಆತನ ಪಾರ್ಥೀವ ಶರೀರ ಸಿಕ್ಕಿತ್ತು. ಅದಾದ ಬಳಿಕ ಹರಭಜನ್ ಸಿಂಗರ ಶವದ ಅಂತಿಮ ಸಂಸ್ಕಾರವನ್ನ ಮಾಡಲಾಯಿತು‌.

ಅದಾದ ಬಳಿಕ ಹರಭಜನ್ ಸಿಂಗರ ಪಾರ್ಥೀವ ಶರೀರ ದೊರೆತ ಸ್ಥಳದಲ್ಲೇ ಆತನ ನೆನಪಿಗಾಗಿ ಸೇನೆ ಬಂಕರ್ ನಿರ್ಮಾಣ ಮಾಡಿಸಿಬಿಟ್ಟಿತು‌. ಬಂಕರ್ ಸೃಷ್ಟಿಯಾದ ಬಳಿಕ ಅಲ್ಲಿ ಪ್ರತಿನಿತ್ಯವೂ ಪೂಜಾ ಪಾಠಗಳು ಶುರುವಾಗಿಬಿಟ್ಟವು. ಅಲ್ಲಿನ ಸೈನಿಕರ ಮಾನ್ಯತೆಯ ಪ್ರಕಾರ ಬಾಬಾ ಹರಭಜನ್ ಸಿಂಗ್ ರ ಆತ್ಮ ಈಗಲೂ ಸೈನಿಕರ ಹಾಗು ಅಲ್ಲಿನ ಗಡಿಯನ್ನ ರಕ್ಷಣೆ ಮಾಡುತ್ತಿದೆಯಂತೆ‌.

ಮತ್ತೊಂದು ರೋಚಕ ವಿಷಯವೇನೆಂದರೆ ಚೀನಾ ತನ್ನ ಕುತಂತ್ರ ಬುದ್ಧಿಯನ್ನ ಉಪಯೋಗಿಸಿ ಭಾರತದ ವಿರುದ್ಧ ಷಡ್ಯಂತ್ರ ನಡೆಸಿದರೂ ಆ ಸುದ್ದಿಯನ್ನ ಬಾಬಾ ಹರಭಜನ್ ಸಿಂಗ್ ರ ಆತ್ಮ ಭಾರತೀಯ ಸೈನಿಕರಿಗೆ ತುರ್ತಾಗಿ ತಿಳಿಸುತ್ತಂತೆ. ಇನ್ನೂ ದಂಗಾಗಿಸುವ ವಿಷಯವೇನೆಂದರೆ ಬಾಬಾ ಹರಭಜನ್ ಸಿಂಗ್ ರವರ ರಿಟೈರ್‌ಮೆಂಟ್ ಸಮಯವಾಗುವವರೆಗೂ ಭಾರತೀಯ ಸೇನೆಯ ವತಿಯಿಂದ ಬಾಬಾ ಹರಭಜನ್ ಸಿಂಗ್ ಗೆ ಪ್ರತಿ ತಿಂಗಳ ಸಂಬಳ ಹಾಗು ಪ್ರಮೋಷನ್ ಸಿಗುತ್ತಿದೆ.

ಭಾರತೀಯ ಸೇನಾ ಮೂಲಗಳು ಹಾಗು ಸೈನಿಕರು ತಿಳಿಸುವಂತೆ ಹರಭಜನ್ ಸಿಂಗ್ ಈಗಲೂ ತಮ್ಮ ಡ್ಯೂಟಿ ಮಾಡುತ್ತಿದ್ದಾರೆ ಹಾಗು ಭಾರತದ ಗಡಿಯನ್ನ ಕಾಯುತ್ತಿದ್ದಾನಂತೆ. ಇದು ಕೇವಲ ಊಹಾಪೋಹವಲ್ಲ ಬದಲಾಗಿ ಭಾರತೀಯ ಸೇನೆಯ ಅಧಿಕಾರಿಗಳೇ ಈ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಸತ್ತ ಮೇಲೂ ಭಾರತಮಾತೆಯ ರಕ್ಷಣೆಗಾಗಿ ತುಡಿಯುವ ಇಂತಹ ರಕ್ಷಕರಿರುವುದರಿಂದಲೇ ಅಲ್ಲವೇ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿರೋದು?

ಭಾರತೀಯ ಸೇನಾ ಮೂಲಗಳು ಹಾಗು ಸೈನಿಕರು ತಿಳಿಸುವಂತೆ ಹರಭಜನ್ ಸಿಂಗ್ ಈಗಲೂ ತಮ್ಮ ಡ್ಯೂಟಿ ಮಾಡುತ್ತಿದ್ದಾರೆ ಹಾಗು ಭಾರತದ ಗಡಿಯನ್ನ ಕಾಯುತ್ತಿದ್ದಾನಂತೆ. ಇದು ಕೇವಲ ಊಹಾಪೋಹವಲ್ಲ ಬದಲಾಗಿ ಭಾರತೀಯ ಸೇನೆಯ ಅಧಿಕಾರಿಗಳೇ ಈ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಸತ್ತ ಮೇಲೂ ಭಾರತಮಾತೆಯ ರಕ್ಷಣೆಗಾಗಿ ತುಡಿಯುವ ಇಂತಹ ರಕ್ಷಕರಿರುವುದರಿಂದಲೇ ಅಲ್ಲವೇ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿರೋದು?

ಜೈ ಬಾಬಾ ಹರಭಜನ್ ಸಿಂಗ್,‌ ಜೈ ಹಿಂದ್

Advertisement
Share this on...