ಖಾಲಿಸ್ತಾನಿಗಳ ಬೆಂಬಲಕ್ಕೆ ನಿಂತಿದ್ದ ಹರ್ಭಜನ್ ಸಿಂಗ್ ಈಗ ಕಾಂಗ್ರೆಸ್ ಪಕ್ಷಕ್ಕೆ? ಸಿಧು ಜೊತೆ ಮೊದಲೇ ಆಗಿತ್ತು ಮೀಟಿಂಗ್

in Kannada News/News 160 views

ನವದೆಹಲಿ: ಕಳೆದ ಕೆಲ ಸಮಯದಿಂದ ಹಲವು ಅನುಭವಿ ಆಟಗಾರರು ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಅಂದರೆ ಶುಕ್ರವಾರದಂದು, ಭಾರತೀಯ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ನಂತರ ನಿವೃತ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಅವರ ಹೆಸರೂ ಸೇರ್ಪಡೆಯಾಗಿದೆ. ಆದರೆ, ಹರ್ಭಜನ್ ಸಿಂಗ್ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ರಾಜಕೀಯ ಕ್ಷೇತ್ರದಲ್ಲಿ ಭಜ್ಜಿ ಮುಂದಿನ ಇನ್ನಿಂಗ್ಸ್ ಆಡುತ್ತಾರಾ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಹರ್ಭಜನ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಫೋಟೋ ವೈರಲ್ ಆಗುತ್ತಲೇ ಈ ಪ್ರಶ್ನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಚಿತ್ರ ವೈರಲ್ ಆದಂದಿನಿಂದ, ಹರ್ಭಜನ್ ಸಿಂಗ್ ಶೀಘ್ರದಲ್ಲೇ ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ಗೆ ಸೇರಬಹುದು ಎಂದು ಹೇಳಲಾಗಿತ್ತು. ಆದರೆ, ಇದುವರೆಗೂ ಭಜ್ಜಿ ಕಡೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

Advertisement

ಅದೇ ಸಮಯದಲ್ಲಿ, ಇದೀಗ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ರಾಜಕೀಯ ಸೇರುವ ಸುದ್ದಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಸುದ್ದಿ ಸಂಸ್ಥೆಗಳ ಜೊತೆ ಮಾತನಾಡುವಾಗ, ಹರ್ಭಜನ್ ಸಿಂಗ್, ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ತನಗೆ ಒಂದಲ್ಲ ಹಲವು ಪಕ್ಷಗಳಿಂದ ಆಫರ್‌ಗಳು ಬಂದಿವೆ ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಸೇರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಇನ್ನೂ ಅದರ ಬಗ್ಗೆ ಏನೂ ಯೋಚಿಸಿಲ್ಲ. ನನಗೆ ವಿವಿಧ ಪಕ್ಷಗಳಿಂದ ಸೇರಲು ಆಫರ್‌ಗಳು ಬಂದಿವೆ. ನನಗೆ ಎಲ್ಲ ಪಕ್ಷದ ನಾಯಕರೂ ಗೊತ್ತು. ಯಾವುದೇ ಪಕ್ಷಕ್ಕೆ ಸೇರುವ ಮುನ್ನ ಘೋಷಣೆ ಮಾಡುತ್ತೇನೆ” ಎಂದರು.

ಸಿಧು ಜೊತೆ ಭೇಟಿಯಾಗಿದ್ದ ಕಾರಣ ತಿಳಿಸಿದ ಭಜ್ಜಿ

ಇತ್ತೀಚೆಗೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭಜ್ಜಿ ಅವರನ್ನು ಭೇಟಿಯಾದ ನಂತರ, ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿಕೊಳ್ಳುತ್ತ “ಸಾಧ್ಯತೆಗಳಿಂದ ತುಂಬಿದ ಚಿತ್ರ.. ಮಿನುಗುವ ತಾರೆ ಭಜ್ಜಿ ಅವರೊಂದಿಗೆ” ಎಂದು ಬರೆದಿದುಕೊಂಡಿದ್ದರು. ಈ ಚಿತ್ರ ವೈರಲ್ ಆದಂದಿನಿಂದ ಹರ್ಭಜನ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೇ ವೇಳೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿ ಮಾಡಿದ ಕಾರಣವನ್ನು ವಿವರಿಸಿದ ಹರ್ಭಜನ್ ಸಿಂಗ್, “ನಾನು ನವಜೋತ್ ಸಿಂಗ್ ಸಿಧು ಅವರನ್ನು ಒಬ್ಬ ಕ್ರಿಕೆಟಿಗನಾಗಿ ಭೇಟಿಯಾಗಿದ್ದೇನೆ” ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬರೋದು ಕನ್ಫರ್ಮ್?

ರಾಜಕೀಯಕ್ಕೆ ಬರೋದು ಪಕ್ಕಾನಾ? ಎಂಬ ಪ್ರಶ್ನೆಗೆ ಉತ್ತರಿಸಿದ ಭಜ್ಜಿ, ತಾನು ಪಂಜಾಬ್‌ಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಆದರೆ ಇದಕ್ಕಾಗಿ ತಾನು ಯಾವ ಮಾರ್ಗದಲ್ಲಿ ಹೋಗಬೇಕೆಂದು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು. ಆ ದಾರಿ ರಾಜಕೀಯವೋ ಅಥವಾ ಇನ್ನೇನೋ ಗೊತ್ತಿಲ್ಲ… ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನುತ್ತಾರೆ ಭಜ್ಜಿ.

ಖಾಲಿಸ್ತಾನ್ ಪರವಾದ ಪೋಸ್ಟ್ ಬಗ್ಗೆ sorry ಕೇಳಿದ್ದ ಭಜ್ಜಿ

1984 ರ ‘ಆಪರೇಷನ್ ಬ್ಲೂಸ್ಟಾರ್’ ನಲ್ಲಿ ಸ ತ್ತ ವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಖಲಿಸ್ತಾನಿ ಉ ಗ್ರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಯ ಚಿತ್ರವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಭಾರತದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬೇಷರತ್ ಕ್ಷಮೆಯಾಚಿಸಿದ್ದರು.

40 ವರ್ಷ ವಯಸ್ಸಿನ ಆಫ್ ಸ್ಪಿನ್ನರ್‌ ಭಜ್ಜಿ, ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ 37 ನೇ ವಾರ್ಷಿಕೋತ್ಸವದಂದು ವಾಟ್ಸಾಪ್ ಫಾರ್ವರ್ಡ್ ಒಂದನ್ನ ಅನ್ನು ಪೋಸ್ಟ್ ಮಾಡಿದ್ದು, ಚಿತ್ರದಲ್ಲಿರುವ ವ್ಯಕ್ತಿ ಭಿಂದ್ರನ್‌ವಾಲೆ ಎಂದು ತಿಳಿಯಲಿಲ್ಲ ಎಂದಿದ್ದರು.

“ನಾನು ನಿನ್ನೆ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸ್ಪಷ್ಟಪಡಿಸಲು ಮತ್ತು ಕ್ಷಮೆಯಾಚಿಸಲು ಬಯಸುತ್ತೇನೆ. ಇದು ವಾಟ್ಸಾಪ್ ಫಾರ್ವರ್ಡ್ ಆಗಿದ್ದು, ನಾನು ತರಾತುರಿಯಲ್ಲಿ ಪೋಸ್ಟ್ ಮಾಡಿದ್ದೇನೆ ಮತ್ತು ಬಳಸಿದ ವಿಷಯ ಮತ್ತು ಅದು ಏನು ಸೂಚಿಸುತ್ತದೆ ಮತ್ತು ಅದು ಏನು ಎಂದು ತಿಳಿಯದೆ ಪೋಸ್ಟ್ ಮಾಡಿದ್ದೆ” ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕ್ಷಮೆಯಾಚನೆಯ ಟಿಪ್ಪಣಿಯಲ್ಲಿ ತಿಳಿಸಿದ್ದರು.

“ಅದು ನನ್ನ ತಪ್ಪು ಎಂದು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಯಾವುದೇ ಹಂತದಲ್ಲಿ ನಾನು ಆ ಪೋಸ್ಟ್‌ನಲ್ಲಿನ ವೀಕ್ಷಣೆಗಳಿಗೆ ಚಂದಾದಾರರಾಗುವುದಿಲ್ಲ ಅಥವಾ ಅವರ ಚಿತ್ರವನ್ನು ಹೊಂದಿರುವ ಜನರನ್ನು ಬೆಂಬಲಿಸುವುದಿಲ್ಲ. ನಾನು ಭಾರತಕ್ಕಾಗಿ ಹೋರಾಡುವ ಸಿಖ್ ಆಗಿದ್ದೇನೆ ಹೊರತು ಭಾರತದ ವಿರುದ್ಧ ಅಲ್ಲ”

“ನನ್ನ ರಾಷ್ಟ್ರದ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಇದು ನನ್ನ ಬೇಷರತ್ ಕ್ಷಮೆ. ವಾಸ್ತವವಾಗಿ ನನ್ನ ಜನರ ವಿರುದ್ಧ ಯಾವುದೇ ದೇಶ ವಿರೋಧಿ ಗುಂಪನ್ನು ಈಗಲ್ಲ ಎಂದಿಗೂ ಬೆಂಬಲಿಸುವುದಿಲ್ಲ” ಎಂದು ಅವರು ಹೇಳಿದ್ದರು.

 

Advertisement
Share this on...