CDS ಬಿಪಿನ್ ರಾವತ್ ಸಾವು ಹಾಗು ಹೆಲಿಕಾಪ್ಟರ್ ಕ್ರ್ಯಾಶ್‌‌ನ ಹಿಂದೆ ಪಾಕ್‌ನ ISI ಹಾಗು ಶ್ರೀಲಂಕಾದ LTTE? ಸ್ಪೋಟಕ ಮಾಹಿತಿ ಬಯಲು

in Kannada News/News 404 views

ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಗುರುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಸಿಡಿಎಸ್ ಹೆಲಿಕಾಪ್ಟರ್ ಪತನ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಪತನದ ತನಿಖೆಗೂ ಮುನ್ನ ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್ ಅವರು ಸ್ಟೋ ಟಕ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಸಿಡಿಎಸ್ ಹೆಲಿಕಾಪ್ಟರ್ ಪತನವಾಗಿರುವುದು ಎಲ್‌ಟಿಟಿಇಯ ಕಾರ್ಯತಂತ್ರದ ಭಾಗವಾಗಿರಬಹುದು ಎಂದು ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್ ಹೇಳಿದ್ದಾರೆ. ತಮಿಳು ಈಲಂ ಲಿಬರೇಶನ್ ಟೈಗರ್ಸ್ (ಎಲ್‌ಟಿಟಿಇ) ಕೇಡರ್ ಐಇಡಿ ಬಾಂ ಬ್‌ ಗಳನ್ನು ಹಾಕುವಲ್ಲಿ ನಿಪುಣರಾಗಿದ್ದು, ಈ ಗುಂಪಿನಲ್ಲಿ ಈ ಘಟನೆಯನ್ನು ನಡೆಸುವ ದೊಡ್ಡ ಸಂಖ್ಯೆಯ ಜನರಿದ್ದಾರೆ ಎಂದು ಅವರು ಹೇಳಿದರು.

Advertisement

ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್ ಅವರು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಪತನಗೊಂಡ ಆ ಇಡೀ ಪ್ರದೇಶವು ಎಲ್‌ಟಿಟಿಇಯ ಭದ್ರಕೋಟೆಯಾಗಿದೆ ಎಂದು ಹೇಳಿದ್ದಾರೆ. ಆ ಪ್ರದೇಶದ ಅನೇಕ ಸಾಮಾನ್ಯ ಜನರು ಸಹ ಎಲ್‌ಟಿಟಿಇ ಬೆಂಬಲಿಗರಾಗಿದ್ದಾರೆ. ಕಮಾಂಡೋ ಇನ್ಸಟ್ರಕ್ಟರ್ LTTE ಜೊತೆ ಕಾದಾಡಿದ್ದ ಸುಧೀರ್ ಸಾವಂತ್, ಸಿಡಿಎಸ್ ಹೆಲಿಕಾಪ್ಟರ್ ಅಪಘಾತಕ್ಕೀಡಾದ ರೀತಿ, ಅದು ಎಲ್‌ಟಿಟಿಇ ಶೈಲಿಯನ್ನು ಹೋಲುತ್ತದೆ ಎಂದು ಹೇಳುತ್ತಾರೆ.

ISI ಕೈವಾಡವೂ ಇರಬಹುದು

ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಂ (ಎಲ್‌ಟಿಟಿಇ) ಭಾರತೀಯ ಸೇನೆ ಮತ್ತು ಭಾರತದ ಮೇಲೆ ಬಹಳ ಸಮಯದಿಂದ ಬೇಸರಗೊಂಡಿದೆ ಎಂದು ಅವರು ಹೇಳಿದರು. ಸೇನೆಯು ಎಲ್‌ಟಿಟಿಇ ಜಾಲವನ್ನು ಮುರಿದಿತ್ತು. ಆದ್ದರಿಂದ, ಎಲ್‌ಟಿಟಿಇ ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ವ್ಯಕ್ತಿಗಳು ಈ ಪಿತೂರಿಯಲ್ಲಿ ಕೈಜೋಡಿಸಬಹುದು. ಹೆಲಿಕಾಪ್ಟರ್ ಪತನವನ್ನು ಐಎಸ್‌ಐ ಮತ್ತು ಎಲ್‌ಟಿಟಿಇ ಒಟ್ಟಾಗಿ ನಡೆಸಿರಬಹುದು ಎಂದು ಅವರು ಹೇಳಿದ್ದಾರೆ.

ಇದನ್ನ ನಡೆಸಲು ದೊಡ್ಡ ಕೇಡರ್ ಅವಶ್ಯಕತೆಯಿಲ್ಲ

ಬ್ರಿಗೇಡಿಯರ್ ಸಾವಂತ್ ಮುಂದೆ ಮಾತನಾಡುತ್ತ, “ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಿಸುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ ಅದು ಇನ್‌ಸೈಡ್ ಜಾಬ್‌ನ ಕೆಲಸವಾಗಿರಬಹುದು. ಹೆಲಿಕಾಪ್ಟರ್ ಕ್ರ್ಯಾಶ್ ಆಗಿರುವ ರೀತಿಯನ್ನ ನೋಡಿದರೆ ಎಲ್‌ಟಿಟಿಇಗೆ ಇಂತಹ ದಾ ಳಿ ನಡೆಸಲು ಯಾವುದೇ ದೊಡ್ಡ ಕೇಡರ್ ಅವಶ್ಯಕತೆಯಿಲ್ಲ. ಇದನ್ನು ಮಾಡಲು ಕೇವಲ ಇಬ್ಬರು ವ್ಯಕ್ತಿಗಳು ಸಾಕು” ಎಂದರು

LTTE

ಹ್ಯೂಮನ್ ಬಾಂ ಬ್ ಬಳಕೆ ಶುರುಮಾಡಿದ್ದ LTTE

ಸಂಭಾಷಣೆಯಲ್ಲಿ, ಮತ್ತಷ್ಟು ಮಾತನಾಡಿದ ಬ್ರಿಗೇಡಿಯರ್ ಸಾವಂತ್, “ಎಲ್‌ಟಿಟಿಇ ಎಂತಹ ಭ ಯೋ ತ್ಪಾ ದಕ ಸಂಘಟನೆಯೆಂದರೆ, ಅದು ಮೊದಲ ಬಾರಿಗೆ ಹ್ಯೂಮನ್ ಬಾಂ ಬ್ ತಯಾರಿಸಿತ್ತು. ಈ ಭ ಯೋ ತ್ಪಾ ದಕ ಸಂಘಟನೆಯು ತಮ್ಮ ಯೋಜನೆಗಳನ್ನು ಪೂರೈಸಲು ಮನುಷ್ಯರನ್ನು ಬಳಸಿಕೊಂಡಿತು. ಮಾನವ ದೇಹದ ಮೇ ಲೆ ಬಾಂ ಬ್‌ ಗಳನ್ನು ಇಟ್ಟು ದೊಡ್ಡ ಭ ಯೋ ತ್ಪಾ ದಕ ಘಟನೆಗಳನ್ನು ನಡೆಸಿದರು. ಈಗ ಎಲ್‌ಟಿಟಿಇ ಬಳಿ ಯಾವುದೇ ರೀತಿಯ ತಂತ್ರಜ್ಞಾನ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಲ್ಲ ಎಂದು ಯಾರಾದರೂ ನಂಬಿದರೆ, ಅದು ದೊಡ್ಡ ತಪ್ಪುಗ್ರಹಿಕೆಯೆಂದೇ ಹೇಳಬಹುದು‌. ಈ ಸಮಯದಲ್ಲಿ, ಎಲ್‌ಟಿಟಿಇ ಪ್ರಸ್ತುತ ಸ್ಫೋ ಟ ಕಗಳಿಗೆ ಹೆಚ್ಚಿನ ಪ್ರಮಾಣದ ತಾಂತ್ರಿಕ ಬೆಂಬಲವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ. ಸಿಡಿಎಸ್ ಹೆಲಿಕಾಪ್ಟರ್ ಅಪಘಾತದಲ್ಲಿ ಎಲ್‌ಟಿಟಿಇ ಗುಂಪು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿರಬಹುದು ಎಂಬ ಆತಂಕವನ್ನು ಬ್ರಿಗೇಡಿಯರ್ ಸಾವಂತ್ ವ್ಯಕ್ತಪಡಿಸಿದ್ದಾರೆ.

Advertisement
Share this on...