ತಾಪ್ಸಿ ಪನ್ನು ಅಭಿನಯದ ‘ದೋಬಾರಾ’ ಬಿಡುಗಡೆ: “ತಾಕತ್ತಿದ್ರೆ ನಮ್ಮ ಚಿತ್ರ ಬಾಯ್ಕಾಟ್ ಮಾಡ್ರೋ” ಎಂದಿದ್ದ ನಟಿಯ ಚಿತ್ರದ ಸ್ಥಿತಿ ಹೇಗಾಯ್ತು ನೋಡಿ
ಬಾಲಿವುಡ್ ನಟಿ ತಾಪ್ಸಿ ಪನ್ನು ರವರ ಇತ್ತೀಚಿನ ಚಿತ್ರ ‘ದೊಬಾರಾ’ ನೆನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು, ಉತ್ತಮ ರಿವೀವ್ ಪಡೆದಿದೆ. ಆದರೆ ಇದರ ಹೊರತಾಗಿಯೂ, ಥಿಯೇಟರ್ಗಳಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆಯೆಂದರೆ ತಾಪ್ಸಿ ಚಿತ್ರದ ಮೊದಲ ದಿನದ ಕಲೆಕ್ಷನ್ ತೋಪೆದ್ದು ಹೋಗಿದೆ. ಅದೇ ಸಮಯದಲ್ಲಿ ತೆಲುಗು ಚಿತ್ರ ‘ಕಾರ್ತಿಕೇಯ 2’ ಇಂದು ಭರ್ಜರಿ ಗಳಿಕೆ ಮಾಡುತ್ತ ಮುಂದೆ ಸಾಗಿದೆ. ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ 4 ವರ್ಷಗಳ…