ಸೂರ್ಯಾಸ್ತದ ಬಳಿಕ ಅಂದರೆ ಸೂರ್ಯ ಮುಳುಗಿದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ. ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ…