ಕೊರೋನಾದಿಂದ ಚೇತರಿಸಿಕೊಂಡವರು ಹಾಗು ಕೊರೋನಾ ವ್ಯಾಕ್ಸಿನ್ ಫರ್ಸ್ಟ್ ಡೋಸ್ ಪಡೆದವರಿಗೆ ಗುಡ್ ನ್ಯೂಸ್
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ ಎರಡು ಡೋಸ್ ಲಸಿಕೆ ಹಾಕಲಾಗ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ 10 ದಿನಗಳಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಕೊರೊನಾ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಕೊರೊನಾ ಸೋಂಕಿಗೊಳಗಾಗದ ಜನರಿಗೆ ಪ್ರತಿಕಾಯ ಉತ್ಪತ್ತಿಯಾಗಲು 3-4 ವಾರಗಳು ಬೇಕೆಂದು…