Fact Check: ಬಾಬ್ರಿ ಮಸೀದಿಗಾಗಿ ಅಯೋಧ್ಯೆಗೆ ತನ್ನ ಸೇನೆಯನ್ನ ಕಳಿಸಿದ ಕಿಮ್ ಜೋಂಗ್? ಕಾಶ್ಮೀರದಲ್ಲಿ 200 ಸೈನಿಕರು ಇಸ್ಲಾಂಗೆ ಮತಾಂತರ?
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿನ್ನೆ (21 ಡಿಸೆಂಬರ್ 2021) ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಭಾರತ ಸರ್ಕಾರವು ಭಾರತ ವಿರೋಧಿ ಪ್ರೊಪೊಗಂಡಾ ಹರಡುತ್ತಿದ್ದ 2 ವೆಬ್‌ಸೈಟ್‌ಗಳು ಮತ್ತು 20 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ ಎಂದು ತಿಳಿಸಿತು. ಮಾಹಿತಿಯ ಪ್ರಕಾರ, ಈ ಸೈಟ್‌ಗಳು ಮತ್ತು ಚಾನಲ್‌ಗಳಲ್ಲಿನ ವಿಷಯವು ವಾಸ್ತವಿಕವಾಗಿ ಫೇಕ್ ಆಗಿದ್ದು ಭಾರತದ ವಿರುದ್ಧ ಪ್ರಚಾರ ಮಾಡುತ್ತಿವೆ, ಆದ್ದರಿಂದ ಸರ್ಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ನಿಯಮ 16 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಚಲಾಯಿಸುವ…