ಆಂತರಿಕ್ಷದಲ್ಲಿ ಗಗನಯಾತ್ರಿಗಳ ಜೀವನ ಹೇಗಿರುತ್ತೆ ಗೊತ್ತಾ?
ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ. ತಲೆ ಕೆಳಗೆ ಮಾಡಿದರೂ ಸಿಂಪಲ್ ಆಗಿ ಏನೊಂದನ್ನೂ ಮಾಡಲಾಗುವುದಿಲ್ಲ… ಮೇಲೇರಿದಂತೆಲ್ಲ ಸುಲಭ ಎಂಬುದರ ವ್ಯಾಖ್ಯಾನವೇ ಬದಲಾಗಿ ಹೋಗುತ್ತದೆ. ನಿಲುಕುವ ದೂರದಲ್ಲೇ ಬದುಕು ಇಷ್ಟು ಕಷ್ಟವಾದರೆ ಬೇರೆ ಬೇರೆ ಗ್ರಹದಲ್ಲಿ ಹೋಗಿ ವಾಸಿಸುವ…