ಗುಡ್ ನ್ಯೂಸ್: ಮತ್ತೆ ಶುರುವಾಯ್ತು ಡಾ.ರಾಜು ರವರ ಕ್ಲಿನಿಕ್.! ಡಾ.ರಾಜು ರವರನ್ನ ಸಚಿವ ವಿ.ಸೋಮ ತಕ್ಷಣವೇ ಮನೆಗೆ ಕರೆಸಿಕೊಂಡದ್ದಾದರೂ ಯಾಕೆ?
ಬೆಂಗಳೂರು: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಚ್ಚಿಸಲಾಗಿದ್ದ ಮೂಡಲಪಾಳ್ಯದ ಡಾ. ರಾಜು ಕೃಷ್ಣಮೂರ್ತಿಯವರ ಸಾಗರ್ ಕ್ಲಿನಿಕ್ ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಿತು. ಆಸ್ಪತ್ರೆ ಮುಚ್ಚಿಸಿದ್ದರ ವಿರುದ್ಧ ಸಾರ್ವಜನಿಕರು ಮತ್ತು ರೋಗಿಗಳ ಸಂಬಂಧಿಕರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ’ಮಾಸ್ಕ್ ಹಾಕದೆ, ಸ್ಯಾನಿಟೈಸರ್ ಬಳಸದೆ ಚಿಕಿತ್ಸೆ ನೀಡುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ನೋಟಿಸ್ ನೀಡಿದ್ದರು. ದಿನಕ್ಕೆ ನೂರಾರು ಜನ ಬರುತ್ತಿರುವುದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ವಿವರಣೆ ನೀಡಿದ್ದೆ. ಸರ್ಕಾರದ ಆದೇಶದನ್ವಯ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿ…