ಕಾಣಿಕೆ ಅಥವ ದೇಣಿಗೆಗಾಗಿ 21, 51, 101 ಹೀಗೆ ಹಣಣ ಮೇಲೆ 1 ರೂ. ಸೇರಿಸಿ ಯಾಕೆ ಕೊಡುತ್ತಾರೆ ಗೊತ್ತಾ? ಏನಿದರ ಹಿಂದಿನ ಅರ್ಥ?
ನಿಮ್ಮ ಮನೆಗೆ ಯಾವುದೋ ದೇವರ ಕಾರ್ಯಕ್ಕೊ ಅಥವಾ ಇನ್ನೋನೋ ಒಳ್ಳೆಯ ಕೆಲಸಕ್ಕಾಗಿ ದೇಣಿಗೆ ಕೇಳಲು ಬರುತ್ತಾರೆ. ಆಗ ನೀವೆಷ್ಟು ಹಣ ಕೊಡುತ್ತೀರಿ? 11, 21, 51, 101 ಅಥವಾ 501 ರೂಪಾಯಿ. ಒಟ್ಟಿನಲ್ಲಿ ಸಮ ಸಂಖ್ಯೆಯ ರೂಪದಲ್ಲಿ ಹಣವನ್ನು ಕೊಡುವುದಿಲ್ಲ. ಏಕೆ ಹೀಗೆ? ದೇಣಿಗೆ ಕೊಡುವ ವಿಷಯದಲ್ಲಿ ಮಾತ್ರವಲ್ಲ ವಾಹನ ಖರೀದಿ, ದದೇವರಿಗೆ ಕಾಣಿಕೆ ಹಾಕುವುದರಿಂದ ಹಿಡಿದು ಸಾಕು ಪ್ರಾಣಿ ಖರೀದಿಯವರೆಗೂ ಹೀಗೆಯೇ. ಕೊನೆಯಲ್ಲಿ 1 ರೂಪಾಯಿ ಬರುವಂತೆಯೇ ಹಣ ಕೊಡುತ್ತಾರೆ. ತುಂಬಾ ಜನರಿಗೆ ಏಕೆ ಹೀಗೆ…