Mothers day: ತಮ್ಮ ತಾಯಿಗಾಗಿ ಸುರುಪುರ ಶಾಸಕ ರಾಜು ಗೌಡ ಮಾಡಿದ ಈ ಕೆಲಸ ನೋಡಿದರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ.! ಮಕ್ಕಳಿದ್ದರೆ ಹೀಗಿರಬೇಕು ನೋಡಿ
ಯಾದಗಿರಿ: ತಾಯಿ ಭೂಮಿ ಮೇಲಿರುವ ಏಕೈಕ ನಡೆದಾಡುವ ದೈವ. ಜಗತ್ತಿನಲ್ಲಿ ತಾಯಿ ಪ್ರೀತಿ ಮತ್ತು ತ್ಯಾಗಕ್ಕೆ ಯಾರು ಕೂಡ ಸರಿಸಮಾನರಲ್ಲ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಯ ಮುಂದೆ ಅವರು ಮಕ್ಕಳೇ. ರಾಜಕೀಯದವರು ಕುಟುಂಬಕ್ಕೆ ಸಮಯ ಕೊಡುವುದಿಲ್ಲ ಎಂಬ ಮಾತಿದೆ. ಅಲ್ಲದೇ ಎಷ್ಟೋ ರಾಜಕಾರಣಿಗಳು ಅವರ ತಂದೆ-ತಾಯಿಯರನ್ನು ವಯಸ್ಸಾದ ಬಳಿಕ ಕೈಬಿಟ್ಟ ಪ್ರಕರಣ ನಮ್ಮ ಕಣ್ಣ ಮುಂದಿವೆ. ಇವುಗಳ ಮಧ್ಯೆ ಯಾದಗಿರಿ ಸುರಪುರದ ಶಾಸಕ ರಾಜೂಗೌಡ ಮಾತ್ರ ವಿಭಿನ್ನವಾಗಿದ್ದಾರೆ. ಅವರ ತಾಯಿ ಬದುಕಿದ್ದಾಗ ಎಷ್ಟು ಪ್ರೀತಿ ಮಾಡಿದ್ದಾರೋ…