ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಕ್ಕೆ ಭಾರತ ಖುಷಿ ಪಟ್ಟಿದ್ದಕ್ಕಿಂತ ದುಪ್ಪಟ್ಟು ಸಂಭ್ರಮಾಚರಣೆ ಆಚರಿಸಿದ ಜರ್ಮನಿಯ ಕೇವಲ 130 ಜನಸಂಖ್ಯೆಯ ಈ ಹಳ್ಳಿ
ಟೋಕಿಯೊ ಒಲಿಪಿಂಕ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ತವರಿಗೆ ಮರಳಿದಾಗ ವಿಮಾನ ನಿಲ್ದಾಣದಲ್ಲಿ ಜನಸಮೂಹ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡಿತ್ತು. ಸನ್ಮಾನಗಳು, ಶತಕೋಟಿ ಜನರಿಂದ ‘ಥ್ಯಾಂಕ್ಯೂ’ಗಳನ್ನು ಚೋಪ್ರಾ ಸ್ವೀಕರಿಸುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಅವರ ಇಬ್ಬರು ಜರ್ಮನ್ ಕೋಚ್ ಗಳು ಏಕಾಂತದಲ್ಲಿ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಚೋಪ್ರಾರ ಬಯೊಮೆಕ್ಯಾನಿಕಲ್ ಕೋಚ್ ಡಾ.ಕ್ಲಾವುಸ್ ಬಾರ್ತೊನಿಯೆಝ್ (73) ಒಂದೂವರೆ ವರ್ಷದ ಬಳಿಕ ನೈರುತ್ಯ ಜರ್ಮನಿಯಲ್ಲಿನ ತನ್ನ ಹುಟ್ಟೂರು,ಕೇವಲ 130ರಷ್ಟು ಜನಸಂಖ್ಯೆಯನ್ನು…