ನೀರಜ್ ಎಸೆದದ್ದು 87 ಮೀಟರ್ ಆದರೆ ವರ್ಲ್ಡ್ ರೆಕಾರ್ಡ್ ಎಸೆತವಿರೋದು ಈ ವ್ಯಕ್ತಿಯ ಹೆಸರಲ್ಲಿ: ಯಾರಿವರು? ಪ್ರಧಾನಿ ಮೋದಿ ಈ ವ್ಯಕ್ತಿಯನ್ನ ಆರಿಸಿದ್ದು ಹೇಗೆ ಗೊತ್ತಾ?
ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ‘ಟ್ರ್ಯಾಕ್ ಆ್ಯಂಡ್ ಫೀಲ್ಡ್’ನಲ್ಲಿ ಭಾರತಕ್ಕೆ ದೊರಕಿದ ಮೊಟ್ಟ ಮೊದಲ ಚಿನ್ನದ ಪದಕ ಇದಾಗಿದೆ. ನೀರಜ್ ಯಶಸ್ಸಿನಲ್ಲಿ ತರಬೇತುದಾರರ ಪಾತ್ರವೂ ಮಹತ್ತರವಾಗಿದೆ. ಅದರಲ್ಲೂ ಒಲಿಂಪಿಕ್ಸ್‌ಗೂ ಮುನ್ನ ಜರ್ಮನಿಯ ಕೋಚ್ ಯುವೆ ಹಾನ್ ಅವರ ಗರಡಿಯಲ್ಲಿ ಕಠಿಣ ತರಬೇತಿ ಪಡೆದಿದ್ದರು. ನಿಮಗಿದು ಗೊತ್ತೇ? ಇತಿಹಾಸದಲ್ಲೇ 100 ಮೀಟರ್‌ಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆದಿರುವ ವಿಶ್ವದ ಏಕೈಕ ಅಥ್ಲೀಟ್ ಯುವೆ ಹಾನ್ ಅವರಾಗಿದ್ದಾರೆ.…