ಕೊರೋನಾದಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ ಕಂಡುಬರುತ್ತಿದೆ MIS ಎಂಬ ಅಪಾಯಕಾರಿ ಕಾಯಿಲೆ: ಏನಿದರ ಲಕ್ಷಣಗಳು?
ಕೊರೊನಾದ 2ನೇ ಅಲೆ ಇನ್ನೂ ಕಡಿಮೆಯಾಗಿಲ್ಲ, ಎರಡನೇ ಅಲೆಯಲ್ಲಿ ಸಮಧಾನಕರ ಸಂಗತಿಯೆಂದರೆ ಮಕ್ಕಳಿಗೆ ಅಷ್ಟೇನು ಸೋಂಕು ತಗುಲಿಲ್ಲ, ಆದರೆ ಇದೀಗ ಮಕ್ಕಳ ವಿಷಯದಲ್ಲಿ ಒಂದು ಆತಂಕ ಎದುರಾಗಿದೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ MIS ಸಮಸ್ಯೆ ಅಂದ್ರೆ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಕೇಸ್‌ಗಳು ಪತ್ತೆಯಾಗಿದ್ದು ಇಂಡಿಯನ್ ಮೆಡಿಕಲ್ ಅಸೋಷಿಯೇಷನ್‌ನ ಮಕ್ಕಳ ತಜ್ಞರಾದ ಡಾ. ಸಂಜೀವ್ ಜೋಶಿ MIS ಸಮಸ್ಯೆ 2-12 ವರ್ಷ ಪ್ರಾಯದ 6 ಮಕ್ಕಳಲ್ಲಿ ಕಂಡು ಬಂದಿರುವುದಾಗಿ ಹೇಳಿದ್ದಾರೆ.…