“Youtube ನಲ್ಲಿ ಅಶ್ಲೀಲ Ad ನೋಡಿ ಮೂಡ್ ಖರಾಬ್ ಆಯ್ತು, 75 ಲಕ್ಷ ಪರಿಹಾರ ಬೇಕು”: ಪರೀಕ್ಷೆಯಲ್ಲಿ ಫೇಲ್ ಆಗಿ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕಿದ ಯುವಕ, ಮುಂದಾಗಿದ್ದೇನು ನೋಡಿ
ಯೂಟ್ಯೂಬ್‌ನಲ್ಲಿ ಅಶ್ಲೀಲ ಜಾಹೀರಾತುಗಳನ್ನು ನೋಡಿದ್ದರಿಂದ ಗಮನ ಬೇರೆಡೆಗೆ ತಿರುಗಿದ್ದು, ಇದರಿಂದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇನೆ ಎಂದು ಯುವಕನೊಬ್ಬ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿದಾರನು ತನ್ನ ಅರ್ಜಿಯಲ್ಲಿ ಯೂಟ್ಯೂಬ್‌ನಿಂದ 75 ಲಕ್ಷ ರೂಪಾಯಿ ಪರಿಹಾರವನ್ನು ಕೋರಿದ್ದನು. ಆದರೆ, ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಯುವಕನಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಅರ್ಜಿದಾರನನ್ನು ಮಧ್ಯಪ್ರದೇಶದ ನಿವಾಸಿ ಆನಂದ್ ಕಿಶೋರ್ ಚೌಧರಿ ಎಂದು ಗುರುತಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್…