ಕೋವಿಡ್ ಎರಡನೆಯ ಅಲೆಯಲ್ಲಿ ಪ್ರಧಾನಿ ಮೋದಿ ನಿಷ್ಕ್ರಿಯರಾಗಿದ್ದಾರೆ ಅನ್ನುವವರೇ ಮೋದಿ ಏನು ಮಾಡ್ತಿದ್ದಾರೆ ಅನ್ನೋದನ್ನ ಇದನ್ನ ಓದಿ ಅರ್ಥ ಮಾಡಿಕೊಳ್ಳಿ
ಕಳೆದ ಒಂದೆರಡು ತಿಂಗಳಿಂದ ಮೇಲಿಂದ ಮೇಲೆ ಕೇಳಿಬರುತ್ತಿರುವ ಸುದ್ದಿ: ವೆಂಟಿಲೇಟರ್‍ಗಳು ಸಿಗುತ್ತಿಲ್ಲ. ಈ ಸಮಸ್ಯೆಯ ಪರಿಹಾರಕ್ಕೆ ಮೋದಿ ಸರಕಾರ ಏನೂ ಮಾಡುತ್ತಿಲ್ಲ.. ಎನ್ನುವುದು. ಭಾಗ – 1 ಮೊನ್ನೆ ಮಾರ್ಚ್ 18ರ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವೆಂಟಿಲೇಟರ್‍ಗಳ ಬಗ್ಗೆ ಸುದ್ದಿ ಬಂದಿತ್ತು. ಅದರ ಪ್ರಮುಖಾಂಶಗಳು: ಕೊವಿಡ್ ಸಾಂಕ್ರಾಮಿಕ ಶುರುವಾಗುವ ಮೊದಲು ಭಾರತದಲ್ಲಿ 8 ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳಿದ್ದವು. ಅವು ವರ್ಷಕ್ಕೆ 3,360 ವೆಂಟಿಲೇಟರುಗಳನ್ನು ತಯಾರಿಸುತ್ತಿದ್ದವು (ನೆನಪಿಡಿ: ಆ ಸಮಯದಲ್ಲಿ ದೇಶದಲ್ಲಿ ವೆಂಟಿಲೇಟರ್ ಸಿಗದೆ ಸತ್ತ ಒಂದೇ ಒಂದು ಪ್ರಕರಣ ಇರಲಿಲ್ಲ!…