ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾ ಬಿಡುಗಡೆಗೂ ಮುನ್ನವೇ ‘ಬೇಷರಂ ರಂಗ್’ ಹಾಡಿನ ಮೂಲಕ ವಿವಾದಕ್ಕೀಡಾಗಿತ್ತು. ಇತ್ತೀಚಿನ ವಿವಾದವನ್ನು ಗಮನದಲ್ಲಿಟ್ಟುಕೊಂಡು ಸೆನ್ಸಾರ್ ಮಂಡಳಿಯು ಚಿತ್ರ ಮತ್ತು ಅದರ ಹಾಡುಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.
ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಧ್ಯಕ್ಷ ಪ್ರಸೂನ್ ಜೋಶಿ ಮಾತನಾಡಿ, ಗುರುವಾರ (ಡಿಸೆಂಬರ್ 29, 2022) ಶಾರುಖ್ ಖಾನ್ ಅವರ ಚಿತ್ರ ಪಠಾಣ್ ಚಿತ್ರದ ಹಾಡುಗಳನ್ನು ಒಳಗೊಂಡಂತೆ ಹಲವಾರು ಬದಲಾವಣೆಗಳನ್ನು ಮಾಡಲು ಮಂಡಳಿಯು ನಿರ್ದೇಶಕರಿಗೆ ನಿರ್ದೇಶನ ನೀಡಿದೆ ಎಂದು ಹೇಳಿದರು. ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಆಕ್ಷನ್ ಥ್ರಿಲ್ಲರ್ ಚಿತ್ರ ಪಠಾಣ್‌ಗೆ ಮಾರ್ಪಾಡು ಮಾಡಲು ಸಿಬಿಎಫ್‌ಸಿ ಪ್ರೊಡಕ್ಷನ್ ಬ್ಯಾನರ್ ಯಶ್ ರಾಜ್ ಫಿಲ್ಮ್ಸ್‌ಗೆ ಸೂಚಿಸಿದೆ ಎಂದು ಜೋಶಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Addressing the controversy raging around #Pathaan, #CBFC chief @prasoonjoshi_ has said, "The film went through a thorough examining process as per the CBFC guidelines, & makers have been asked to implement changes in the film, including the songs" #SRK #BesharamRang #Deepika pic.twitter.com/T0Q47b8xXw
— Delhi Times (@DelhiTimesTweet) December 29, 2022
ವರದಿಗಳ ಪ್ರಕಾರ, ‘ಪಠಾಣ್’ ಚಿತ್ರವು ಇತ್ತೀಚೆಗೆ ಸರ್ಟಿಫಿಕೇಷನ್ ಗಾಗಿ CBFC ಪರೀಕ್ಷಾ ಸಮಿತಿಗೆ ಹೋಗಿತ್ತು. CBFC ಮಾರ್ಗಸೂಚಿಗಳ ಪ್ರಕಾರ ಚಿತ್ರವನ್ನು ವೀಕ್ಷಿಸಲಾಗಿದೆ. ಈ ಸಮಯದಲ್ಲಿ, ಸಮಿತಿಯು ಚಿತ್ರದಲ್ಲಿ ಬದಲಾವಣೆಗಳನ್ನು ಮಾಡುವಂತೆ ನಿರ್ಮಾಪಕರಿಗೆ ಸೂಚಿಸಿತು. ಈ ಬದಲಾವಣೆ ಚಿತ್ರದ ಹಾಡುಗಳ ಬಗ್ಗೆಯೂ ಆಗಿದೆ. ಇದರೊಂದಿಗೆ, ಜನವರಿ 25, 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮೊದಲು ‘ಪಠಾಣ್’ ನ ಪರಿಷ್ಕೃತ ಆವೃತ್ತಿಯನ್ನು CBFC ಗೆ ಪ್ರಸ್ತುತಪಡಿಸಲು ಮಂಡಳಿಯು ಆದೇಶಿಸಿದೆ.
ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಹೇಳಿಕೆಯಲ್ಲಿ, “ಸಿಬಿಎಫ್‌ಸಿ ಸೃಜನಶೀಲತೆ ಮತ್ತು ಪ್ರೇಕ್ಷಕರ ಭಾವನೆಗಳ ನಡುವೆ ಸಮತೋಲನವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು ಅದಕ್ಕೆ ಅನುಗುಣವಾಗಿ ವಿವಾದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತದೆ. ನಮ್ಮ ಸಂಸ್ಕೃತಿ ಮತ್ತು ನಂಬಿಕೆಯು ವೈಭವಯುತ, ಸಂಕೀರ್ಣ ಮತ್ತು ಸೂಕ್ಷ್ಮವಾಗಿದೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ನಾವು ಜಾಗರೂಕರಾಗಿರಬೇಕು. ಸತ್ಯ ಮತ್ತು ವಾಸ್ತವದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಅಂತಹ ಯಾವುದೇ ಕಥೆ-ಕಥೆಯ ಮೂಲಕ ಅದನ್ನು ವ್ಯಾಖ್ಯಾನಿಸಬಾರದು” ಎಂದರು. ಮುಂದೆ ಮಾತನಾಡಿದ ಜೋಶಿ, “ನಾನು ಮೊದಲೇ ಹೇಳಿದಂತೆ, ಕ್ರಿಯೇಟರ್ಸ್ ಮತ್ತು ಪ್ರೇಕ್ಷಕರ ನಡುವೆ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕ್ರಿಯೇಟರ್ಸ್ ಕೆಲಸ ಮಾಡಬೇಕು” ಎಂದರು.
ವಿರೋಧ ವ್ಯಕ್ತಪಡಿಸಿದ್ದ ನರೋತ್ತಮ್ ಮಿಶ್ರಾ, ಹಿಂದೂ ಸಂಘಟನೆಗಳು ಹಾಗು ಉಲೇಮಾ ಬೋರ್ಡ್
ಗಮನಿಸುವ ಸಂಗತಿಯೆಂದರೆ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಹಿಂದೂ ಸಂಘಟನೆಗಳು, ಆ್ಯಕ್ಟಿವಿಸ್ಟ್ ಡ್ಯಾನಿಶ್ ಖಾನ್ ಮತ್ತು ಉಲೇಮಾ ಬೋರ್ಡ್ ಸೇರಿದಂತೆ ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯನ್ನು ಧರಿಸಿರುವುದನ್ನು ಹಲವರು ವಿರೋಧಿಸಿದ್ದಾರೆ. ಈ ಕೃತ್ಯ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಚಿತ್ರದ ಹಾಡುಗಳ ಸೀಕ್ವೆನ್ಸ್‌ನಲ್ಲಿ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದರು. ಶಾರುಖ್ ಸಿಕ್ಕರೆ ಜೀವಂತ ಸು ಟ್ಟು ಹಾಕುತ್ತೇನೆ ಎಂದು ಅಯೋಧ್ಯೆಯ ಮಹಂತ್ ಪರಮಹಂಸ ಆಚಾರ್ಯ ಹೇಳಿದ್ದರು. ಇದರೊಂದಿಗೆ ಸನಾತನ ಧರ್ಮವನ್ನು ಅವಹೇಳನ ಮಾಡುವವರ ಚಿತ್ರವನ್ನು ಯಾವುದೇ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬೇಡಿ ಎಂದು ಮಹಂತ್ ರಾಜು ದಾಸ್ ಮತ್ತು ಪರಮಹಂಸ ಆಚಾರ್ಯ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು.
‘ನಮ್ಮ ಕೈಯಲ್ಲೇ ಈ ಜಿಹಾದಿಗಳ ವಧೆಯಾಗಲಿದೆ’
ಮಹಾಂತ ಪರಮಹಂಸ ಆಚಾರ್ಯರು ಶಾರುಖ್ ಖಾನ್‌ಗೆ ಎಚ್ಚರಿಕೆ ನೀಡುತ್ತ, “ನೀವು ಸನಾತನ ಧರ್ಮವನ್ನು ಅವಮಾನಿಸಿದರೆ, ನಾವು ನಿಮಗೆ ಸಜಾ-ಎ-ಮೌತ್ ನೀಡಲು ಸಿದ್ಧರಿದ್ದೇವೆ. ನಮ್ಮ ಪ್ರಭು ಶ್ರೀರಾಮನು ರಾಕ್ಷಸರನ್ನು ಕೊಂ ದ ನು. ಶ್ರೀಕೃಷ್ಣನು ರಾಕ್ಷಸರನ್ನು ಸಂಹರಿಸಿದನು. ಈಗ ಅದೇ ರೀತಿ ಸನಾತನ ವಿರೋಧಿಗಳಾದ ಜಿಹಾದಿಗಳನ್ನ ನಮ್ಮ ಸಾಧು ಸಂತರು ವಧಿಸಲು ಸಿದ್ಧರಾಗಿದ್ದಾರೆ. ‘ಪಠಾಣ್’ ಚಿತ್ರದ ಬಿಡುಗಡೆಯನ್ನು ನಿಲ್ಲಿಸದಿದ್ದರೆ ಖಂಡಿತಾ ಈ ಜಿಹಾದಿಗಳು ನಮ್ಮ ಕೈಯಿಂದಲೇ ಸಾಯುತ್ತಾರೆ” ಎಂದಿದ್ದರು.