ದೇಶದ ಜನತೆಗೆ CDS ಬಿಪಿನ್ ರಾವತ್ ಕೊನೆಯ ಮೆಸೇಜ್ ಕೊಡಲು ಮೊದಲೇ ರೆಕಾರ್ಡ್ ಮಾಡಿಟ್ಟಿದ್ದರು ಈ ವೀಡಿಯೋ: ಕಣ್ಣೀರು ತರಿಸುತ್ತೆ ಅವರ ಮಾತುಗಳು

in Kannada News/News 133 views

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದಿಂದಾಗಿ ಈ ಬಾರಿಯ ‘ಸ್ವರ್ಣಿಮ್ ವಿಜಯ್ ಪರ್ವ್’ ಅನ್ನು ಅತ್ಯಂತ ಸರಳವಾಗಿ ಆಚರಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ತಮಿಳುನಾಡಿನ ಕುನ್ನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಶೋಕದ ವಾತಾವರಣವಿದೆ. ದೆಹಲಿಯಲ್ಲಿ ಅಂತಿಮ ವಿಧಿವಿಧಾನದ ನಂತರ, ರಾವತ್ ದಂಪತಿಗಳ ಚಿತಾಭಸ್ಮವನ್ನು ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅವರು ಹರಿದ್ವಾರದಲ್ಲಿ ಗಂಗಾನದಿಯಲ್ಲಿ ವಿಸರ್ಜನೆ ಮಾಡಿದರು.

Advertisement

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಈಗಾಗಲೇ ‘ಸ್ವರ್ಣಿಮ್ ವಿಜಯ್ ಪರ್ವ್’ ಗಾಗಿ ತಮ್ಮ ಸಂದೇಶವನ್ನು ವೀಡಿಯೊ ಮೂಲಕ ರೆಕಾರ್ಡ್ ಮಾಡಿದ್ದರು ಎಂಬ ಭಾವುಕ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಅವರ ವಿಡಿಯೋ ಸಂದೇಶವನ್ನೂ ಇಲ್ಲಿ ಪ್ಲೇ ಕೂಡ ಮಾಡಲಾಯಿತು. ಇಂಡಿಯಾ ಗೇಟ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು, ಅಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಈ ವೀಡಿಯೊ ಸಂದೇಶವನ್ನು ಪ್ಲೇ ಮಾಡಲಾಗಿದೆ. ಈ ವೇಳೆ ಅಲ್ಲಿದ್ದ ಪ್ರತಿಯೊಬ್ಬರು ಭಾವುಕರಾದರು. ಬನ್ನಿ, ಆ ವಿಡಿಯೋದಲ್ಲಿ ಜನರಲ್ ರಾವತ್ ಏನು ಹೇಳಿದ್ದಾರೆಂದು ನಿಮಗೆ ತಿಳಿಸುತ್ತೇವೆ.

ಈ ವೈರಲ್ ವೀಡಿಯೊ ಸಂದೇಶದಲ್ಲಿ, ಸಿಡಿಎಸ್ ಜನರಲ್ ಬಿಪಿನ್ ರಾವತ್ ಮಾತನಾಡುತ್ತ, “ಸ್ವರ್ಣಿಮ್ ವಿಜಯ್ ಪರ್ವ್ ಸಂದರ್ಭದಲ್ಲಿ, ನಾನು ಭಾರತೀಯ ಸೇನೆಯ ಎಲ್ಲಾ ವೀರ ಸೈನಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾವು 1971 ರ ಯುದ್ಧದಲ್ಲಿ ಭಾರತೀಯ ಸೇನೆಯ ವಿಜಯದ 50 ನೇ ವಾರ್ಷಿಕೋತ್ಸವವನ್ನು ವಿಜಯ್ ಪರ್ವ್ ಎಂದು ಆಚರಿಸುತ್ತಿದ್ದೇವೆ. ಈ ಪವಿತ್ರ ಹಬ್ಬದಂದು ಸಶಸ್ತ್ರ ಪಡೆಗಳ ವೀರ ಯೋಧರನ್ನು ಸ್ಮರಿಸುತ್ತಾ, ಅವರ ತ್ಯಾಗ ಬಲಿದಾನಗಳಿಗೆ ಗೌರವ ಸಲ್ಲಿಸುತ್ತೇನೆ. ಡಿಸೆಂಬರ್ 12 ರಿಂದ 14 ರವರೆಗೆ ಇಂಡಿಯಾ ಗೇಟ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ” ಎಂದಿದ್ದಾರೆ.

ನಮ್ಮ ವೀರ ತ್ಯಾಗ ಬಲಿದಾನಿಗಳ ಸ್ಮರಣಾರ್ಥ ಸ್ಥಾಪಿಸಲಾಗಿರುವ ‘ಅಮರ್ ಜವಾನ್ ಜ್ಯೋತಿ’ಯ ದೀಪದಡಿಯಲ್ಲಿ ‘ವಿಜಯ್ ಪರ್ವ್’ ಆಯೋಜಿಸುತ್ತಿರುವುದು ಅದೃಷ್ಟದ ಸಂಗತಿ ಎಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ವಿಡಿಯೋದಲ್ಲಿ ಬಣ್ಣಿಸಿದ್ದಾರೆ. ಈ ವೀಡಿಯೋದಲ್ಲಿ ಅವರು ಈ ‘ವಿಜಯ್ ಪರ್ವ್’ ಆಚರಣೆಯಲ್ಲಿ ಭಾಗವಹಿಸಲು ದೇಶವಾಸಿಗಳನ್ನು ಆಹ್ವಾನಿಸಿದ್ದಾರೆ ಮತ್ತು ‘ನಮ್ಮ ಸೇನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ, ಒಟ್ಟಿಗೆ ಬನ್ನಿ ಮತ್ತು ವಿಜಯ್ ಪರ್ವ್ ಆಚರಿಸಿ’ ಎಂಬ ಘೋಷಣೆಯನ್ನು ಸಹ ನೀಡಿದ್ದಾರೆ. ಅವರ ನಿರ್ಗಮನದ ನಂತರ ಈಗ ಅದೊಂದು ‘ಆಚರಣೆ’ಯಲ್ಲದೆ ಸರಳ ಕಾರ್ಯಕ್ರಮವಾಗಿಬಿಟ್ಟಿದೆ.

ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಏರ್ ಫೋರ್ಸ್ ಆಫೀಸ್ ಗ್ರೂಪ್ ಕಮಾಂಡರ್ ವರುಣ್ ಸಿಂಗ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ತಾವು ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು. ಈ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವರುಣ್ ಸಿಂಗ್. ಈ ಹಿಂದೆ ಈ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ದೈವಿಕವಾಗಿ ಮಾಡಲು ನಿರ್ಧರಿಸಲಾಗಿತ್ತು ಆದರೆ ಈಗ ಅದು ನಡೆಯುವುದಿಲ್ಲ ಎಂದು ಹೇಳಿದರು. ಬಿಪಿನ್ ರಾವತ್ ಅವರನ್ನು ವೀರ ಸೈನಿಕ, ಉತ್ಸಾಹಿ ಮತ್ತು ಸಲಹೆಗಾರ ಎಂದು ಬಣ್ಣಿಸಿದ ಅವರು, ಈ ಕಾರ್ಯಕ್ರಮದ ಸ್ವರೂಪ ಮತ್ತು ರೂಪುರೇಷೆಯ ಬಗ್ಗೆ ಅನೇಕ ಬಾರಿ ಚರ್ಚಿಸಲಾಗಿದೆ, ಆದ್ದರಿಂದ ಅವರಿಲ್ಲದಿರುವುದು ನಿಜಕ್ಕೂ ಬೇಜಾರಾಗುತ್ತಿದೆ.

Advertisement
Share this on...