ಉತ್ತರಪ್ರದೇಶದ ಗ್ಯಾಂಗ್ಸ್ಟರ್, ಮಾಫಿಯಾ ಡಾನ್ ಅತೀಕ್ ಅಹ್ಮದ್ ಜಾಗಗಳು ಉಡೀಸ್: ಜಿಹಾದಿಯ ಜಾಗದಲ್ಲೇ ಭೂಮಿ ಪೂಜೆ ನಡೆಸಿ ಈ ಘೋಷಣೆ ಮಾಡಿದ ಯೋಗಿ ಆದಿತ್ಯನಾಥ್

in Kannada News/News 290 views

ನವದೆಹಲಿ: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯದ ದೊಡ್ಡ ದೊಡ್ಡ ಮಾಫಿಯಾ ಮತ್ತು ಕ್ರಿಮಿನಲ್‌ಗಳ ವಿರುದ್ಧ ಒಂದರ ಹಿಂದೊಂದರಂತೆ ದಾ ಳಿ ಪ್ರಾರಂಭಿಸಲಾಯಿತು. ಅದರಲ್ಲಿ ಉತ್ತರಪ್ರದೇಶದಲ್ಲಿ ಬಾಹುಬಲಿಯೇಂದೇ ಕುಖ್ಯಾತಿ ಪಡೆದಿದ್ದ ಅತೀಕ್ ಅಹಮದ್ ಹೆಸರು ಕೂಡ ಒಂದು. ಅತೀಕ್ ಅಹ್ಮದ್ ಪೂರ್ವಾಂಚಲ್‌ನಲ್ಲಿ ಕುಖ್ಯಾತ ಮಾಫಿಯಾ ಆಗಿದ್ದ. ಯೋಗಿ ಸರ್ಕಾರ ಬಂದ ನಂತರ ಇಂತಹ ಮಾಫಿಯಾಗಳ ಮೇಲೂ ಕ್ರಮ ಕೈಗೊಳ್ಳಲು ಆರಂಭಿಸಲಾಯಿತು.

Advertisement
ಹಲವೆಡೆ ಅತೀಕ್ ಅಹಮದ್‌ನ ಜಮೀನು, ಮನೆ ಮತ್ತು ಆಸ್ತಿಯನ್ನೂ ಅತಿಕ್ರಮಣ ಮುಕ್ತಗೊಳಿಸಲಾಯಿತು. ಪ್ರಯಾಗ್‌ರಾಜ್‌ನಲ್ಲಿ ಮಾಫಿಯಾ ಅತೀಕ್ ಅಹಮದ್‌ನಿಂದ ತೆರವುಗೊಳಿಸಿದ 1731 ಚದರ ಮೀಟರ್ ಜಾಗದಲ್ಲಿ ಸರ್ಕಾರ ಬಡವರಿಗೆ ಆಶ್ರಯ ಮನೆ ನಿರ್ಮಿಸಲು ಹೊರಟಿದೆ. ಮುಖ್ಯಮಂತ್ರಿ ಸಿಎಂ ಯೋಗಿ ಭಾನುವಾರ ಅತೀಕ್ ಅಹ್ಮದ್ ನಿಂದ ಅತಿಕ್ರಮಣಗೊಳಿಸಿಕೊಂಡಿದ್ದ ಅದೇ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವಾಸ್ತವವಾಗಿ, ಮಾಧ್ಯಮಗಳ ಮಾಹಿತಿಯ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್‌ನಲ್ಲಿ ಮಾಫಿಯಾ ಅತೀಕ್ ಅಹ್ಮದ್ ವಶದಿಂದ ಮುಕ್ತವಾದ ಭೂಮಿಯಲ್ಲಿ ಬಡವರ ವಸತಿಗಾಗಿ ಭೂಮಿಪೂಜೆ ಮಾಡಿದರು. ಈ ವೇಳೆ ಹಲವು ಪುರೋಹಿತರು ಮಂತ್ರ ಪಠಣ ಮಾಡಿದರು. 458.88 ಲಕ್ಷ ವೆಚ್ಚದಲ್ಲಿ 1731 ಚದರ ಮೀಟರ್ ಜಾಗದಲ್ಲಿ 76 ಫ್ಲಾಟ್ ಗಳನ್ನು ನಿರ್ಮಿಸಲಾಗುತ್ತಿದೆ. ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಪಾರ್ಕಿಂಗ್, ಸಮುದಾಯ ಭವನ ಮತ್ತು ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು. ಈ ಕಟ್ಟಡ ಸಂಪೂರ್ಣ ಗ್ರೀನ್ ಬಿಲ್ಡಿಂಗ್ ಆಗಲಿದೆ.

ಸುದ್ದಿ ಮೂಲಗಳ ಮಾಹಿತಿಯ ಪ್ರಕಾರ ಸುಮಾರು ಒಂದು ವರ್ಷದಲ್ಲಿ ಈ ಕಟ್ಟಡ ಸಿದ್ಧಗೊಂಡು ಫಲಾನುಭವಿಗಳಿಗೆ ಹಸ್ತಾಂತರವಾಗಲಿದೆ. ಪ್ರಯಾಗ್‌ರಾಜ್‌ಗೂ ಮುನ್ನ ಕೌಶಾಂಬಿಗೆ ಭೇಟಿ ನೀಡಿದ ಸಿಎಂ ಯೋಗಿ, ಪ್ರಯಾಗ್‌ರಾಜ್‌ನಲ್ಲಿರುವ ಅತೀಕ್ ಅಹ್ಮದ್‌ನ ಜಮೀನಿನಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು. ಹಿಂದಿನ ಸರ್ಕಾರಗಳಲ್ಲಿ ಬಡವರು, ಉದ್ಯಮಿಗಳು, ಸರ್ಕಾರಿ ಆಸ್ತಿ ಕಬಳಿಸಿ ದೊಡ್ಡ ದೊಡ್ಡ ಹವೇಲಿಗಳನ್ನು ನಿರ್ಮಿಸಿದ ವೃತ್ತಿಪರ ಮಾಫಿಯಾ ಎಂದು ಸಿಎಂ ಯೋಗಿ ಹೇಳಿದರು. ರಾಜ್ಯ ಸರ್ಕಾರದ ಬುಲ್ಡೋಜರ್ ಶುರುವಾದಾಗ ಈ ದೊಡ್ಡ ದೊಡ್ಡ ಹವೇಲಿಗಳೆಲ್ಲ ಬಿದ್ದು ಹೋಗುವುದನ್ನು ನೀವು ನೋಡಿರಬೇಕು. ಅಂತಹ ಮಾಫಿಯಾದ ವಶದಿಂದ ಮುಕ್ತವಾದ ಆಸ್ತಿಯಲ್ಲಿ ಇಂದು ನಾವು ಬಡವರಿಗೆ ಹೊಸ ವಸತಿ ಯೋಜನೆಯನ್ನು ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭಿಸಲಿದ್ದೇವೆ ಎಂದರು.

ಇದು ಪ್ರಯಾಗ್‌ರಾಜ್‌ಗೆ ಮಾತ್ರ ಸೀಮಿತವಾಗುವುದಿಲ್ಲ, ರಾಜ್ಯದ 75 ಜಿಲ್ಲೆಗಳಲ್ಲಿ ಯಾವುದೇ ಭೂಮಿ ಇಲ್ಲದ ಬಡವರಿಗೆ ಮಾಫಿಯಾದಿಂದ ಮುಕ್ತವಾದ ಭೂಮಿಯಲ್ಲಿ ಆ ಬಡವರಿಗೆ ಮನೆ ನೀಡುತ್ತೇವೆ ಎಂದು ಸಿಎಂ ಯೋಗಿ ಹೇಳಿದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ನೀವು ಚಿಂತಿಸಬೇಡಿ, ಮೋದಿಜಿ ನಿಮ್ಮ ಬಗ್ಗೆ ಚಿಂತಿಸುತ್ತಿದ್ದಾರೆ, ನೀವು ಅವರ ಯೋಜನೆಗಳ ಲಾಭವನ್ನು ಮಾತ್ರ ಪಡೆದುಕೊಳ್ಳಿ ಎಂದು ಹೇಳಿದರು.

Advertisement
Share this on...