ಇಂದು ನಮ್ಮ ದೇಶದಲ್ಲಿ, ಜನರು ವಿವಿಧ ಮದುವೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳು ಮತ್ತು ಬಟ್ಟಲುಗಳನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್‌ನ ಪ್ಲೇಟ್ ಗಳಾಗಲಿ ಅಥವಾ ಬಟ್ಟಲುಗಳ ಬಳಕೆಯು ಪರಿಸರವನ್ನು ಕಲುಷಿತಗೊಳಿಸುವುದಲ್ಲದೆ ಅದು ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಆದರೆ ನಮ್ಮೆಲ್ಲರನ್ನು ಮಧ್ಯೆ ನಮ್ಮ ಆರೋಗ್ಯವನ್ನ ಕಾಪಾಡಲು ಪರಿಸರ ಸ್ನೇಹಿ ಪ್ಲೇಟ್ ಗಳು ಮತ್ತು ವಸ್ತುಗಳನ್ನ ತಯಾರಿಸುವ ಕೆಲವರೂ ನಮ್ಮ ನಡುವೆಯೇ ಇದ್ದಾರೆ. ಪರಿಸರ ಸ್ನೇಹಿ ಪ್ಲೇಟ್ ಗಳಿಂದ ಪರಿಸರವೂ ಕಲುಷಿತವಾಗುವುದಿಲ್ಲ ಮತ್ತು ನಮ್ಮ ಆರೋಗ್ಯಕ್ಕೂ ಅದು ಒಳ್ಳೆಯದು.
ಮಾಧವಿ ಮತ್ತು ವೇಣುಗೋಪಾಲ್ ಹೈದರಾಬಾದ್ ಮೂಲದವರು. ಮಾಧವಿ ಫಾರ್ಮಸಿ ಮತ್ತು ಜೆನೆಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ವೇಣುಗೋಪಾಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಧರರಾಗಿದ್ದಾರೆ. ಈ ಇಬ್ಬರೂ ಮಲೇಷ್ಯಾ, ಬ್ಯಾಂಕಾಕ್, ಸಿಂಗಾಪುರ್ ಮತ್ತು ಅಮೇರಿಕಗಳಲ್ಲಿ 2003 ರಿಂದಲೂ ಅಲ್ಲಿಯೇ ಉದ್ಯೋಗ ಮಾಡುತ್ತಿದ್ದರು. ಆದರೆ ಅವರ ಮಕ್ಕಳು ಬೆಳೆಯಲು ಪ್ರಾರಂಭಿಸಿದಾಗ, ಮಕ್ಕಳನ್ನು ವಿದೇಶದಲ್ಲಿ ಬೆಳೆಸಿದರೆ, ಅವರಿಗೆ ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಭಾವಿಸಿದರು. ಆದ್ದರಿಂದ ಅವರು ಭಾರತಕ್ಕೆ ಮರಳಲು ಮನಸ್ಸು ಮಾಡಿದರು ಮತ್ತು 2003 ರಲ್ಲಿ ಇಬ್ಬರೂ ಹೈದ್ರಾಬಾದ್ ಗೆ ಬಂದರು.
ಇಬ್ಬರೂ ಹೈದರಾಬಾದ್ನಲ್ಲಿ ವಾಸಿಸಲು ಪ್ರಾರಂಭಿಸಿದಾಗ, ಮಾಧವಿ ತಮ್ಮ ಮನೆಯ ಹೊರಗೆ ಪ್ಲಾಸ್ಟಿಕ್ ಪ್ಲೇಟ್ ಮತ್ತು ಬಟ್ಟಲುಗಳ ರಾಶಿಯನ್ನು ಗಮನಿಸಿದರು ಮತ್ತು ಕೆಲವು ಹಸುಗಳು ಈ ರಾಶಿಯಲ್ಲಿ ತಮ್ಮ ಆಹಾರವನ್ನು ಹುಡುಕುತ್ತಿರುವುದನ್ನ ಕಂಡರು. ಆ ರಾಶಿಯಿಂದ ಆಹಾರವನ್ನು ತಿನ್ನುತ್ತಿದ್ದ ಹಸು ಆಹಾರದ ಜೊತೆಗೆ ಪ್ಲಾಸ್ಟಿಕ್ ಪ್ಲೇಟ್ ಗಳನ್ನೂ ತಿನ್ನುತ್ತಿದ್ದು, ಅದರಿಂದಾಗಿ ಹಸು ಸತ್ತುಹೋಯಿತು ಎಂಬ ಸುದ್ದಿ ಮಾಧವಿಗೆ ಕೆಲ ದಿನಗಳ ಬಳಿಕ ಸ್ಥಳೀಯರಿಂದ ತಿಳಿದುಕೊಂಡರು. ಇದನ್ನು ನೋಡಿ ಮಾಧವಿ ತುಂಬಾ ದುಃಖಪಟ್ಟರು. ಇದರ ನಂತರ ಮಾಧವಿ ಜನರನ್ನು ತಲುಪಲು ಪರಿಸರ ಸ್ನೇಹಿ ಪ್ಲೇಟ್ಸ್ ಮತ್ತು ಬಟ್ಟಲುಗಳನ್ನು ತಯಾರಿಸುವುದಾಗಿ ಮನಸ್ಸು ಮಾಡಿದರು.
ಅಮೇರಿಕಾದಿಂದ ಹಿಂದಿರುಗಿದ ನಂತರ ತೆಲಂಗಾಣದ ಸಿದ್ದಿಪೇಟೆಯಲ್ಲಿ 25 ಎಕರೆ ಭೂಮಿಯನ್ನು ತನ್ನ ಸೇವಿಂಗ್ಸ್ ನಿಂದ ಖರೀದಿಸಿದ್ದೇನೆ ಎಂದು ಮಾಧವಿ ಹೇಳುತ್ತಾರೆ. ಈ ಭೂಮಿಯಲ್ಲಿ 30 ಕ್ಕೂ ಹೆಚ್ಚು ಬಗೆಯ ಹಣ್ಣುಗಳ 12 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ ಮತ್ತು ಅವರು ತಮ್ಮ ಹೊಲದಲ್ಲಿ ಪಲಾಶ್ ಮರಗಳನ್ನು ನೆಟ್ಟಿದ್ದಾರೆ. ಪಲಾಶ್‌ನ ಎಲೆಗಳ ಮೂಲಕ ಪ್ಲೇಟ್ ಗಳನ್ನ ತಯಾರಿಸಬಹುದು ಎಂದು ಒಂದು ದಿನ ನನ್ನ ತಾಯಿ ಹೇಳಿದ್ದರು ಎಂದು ಮಾಧವಿ ಹೇಳುತ್ತಾರೆ. ನನ್ನ ತಾಯಿಯ ಮಾತುಗಳನ್ನು ಕೇಳಿದ ನಂತರ, ನಾನು ಮತ್ತು ವೇಣುಗೋಪಾಲ್ ಇಬ್ಬರೂ ಪಲಾಶ್‌ನ ಕೆಲವು ಎಲೆಗಳನ್ನು ಸಂಗ್ರಹಿಸಿ ಅದರಿಂದ ಪ್ಲೇಟ್ ಗಳನ್ನ ತಯಾರಿಸಲು ಪ್ರಾರಂಭಿಸಿದೆವು. ಅದರಲ್ಲಿ ನಾವು ಯಶಸ್ಸನ್ನೂ ಕಂಡಿದ್ದೇವೆ.
ಒಡಿಶಾದ ಬುಡಕಟ್ಟು ಜನರು ಇನ್ನೂ ಸಾಲ್ ಮತ್ತು ಸಿಯಾಲಿ ಎಲೆಗಳಿಂದ ಪ್ಲೇಟ್ ಹಾಗು ಬಟ್ಟಲುಗಳನ್ನ ತಯಾರಿಸುತ್ತಾರೆ ಎಂದು ನಾನು ಫೇಸ್‌ಬುಕ್ ಗ್ರೂಪ್ ನಿಂದ ತಿಳಿದುಕೊಂಡೆ ಎಂದು ವೇಣುಗೋಪಾಲ್ ಹೇಳುತ್ತಾರೆ. ಅವರು ಅದನ್ನು ಖಲೀಪತ್ರ ಎಂದು ಕರೆಯುತ್ತಾರೆ. ಅವರು ಅದರಿಂದ ಪರಿಸರ ಸ್ನೇಹಿ ಪ್ಲೇಟ್ ಗಳನ್ನೂ ಸಹ ತಯಾರಿಸುತ್ತಾರೆಂದು ಅರ್ಥಮಾಡಿಕೊಂಡೆ. ಆದರೆ ಇದರ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಇದರ ನಂತರ ವೇಣುಗೋಪಾಲ್ ಅನೇಕ ಪ್ರಕೃತಿಚಿಕಿತ್ಸಕರೊಂದಿಗೆ ಈ ಬಗ್ಗೆ ಮಾತನಾಡಿದರು, ನಂತರ ಅವರು ಪಲಾಶ್ ಅಥವಾ ಸಾಲ್ ಪಟ್ಟಾಲ್ನಲ್ಲಿ ಆಹಾರವನ್ನು ತಿನ್ನುವುದು ಪರಿಸರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದರು. ಮತ್ತು ಈ ತಟ್ಟೆಯಲ್ಲಿ ಆಹಾರವನ್ನು ಬಡಿಸಿದಾಗ, ಅದು ಆಹಾರದಲ್ಲಿ ನೈಸರ್ಗಿಕ ರುಚಿಯನ್ನು ಸಹ ತುಂಬುತ್ತದೆ. ಇದರಿಂದಾಗಿ ಕೀಟಗಳು ಸಹ ಓಡಿಹೋಗುತ್ತವೆ.
ವೇಣುಗೋಪಾಲ್‌ಗೆ ಈ ಪರಿಸರ ಸ್ನೇಹಿ ತಟ್ಟೆಯ ಬಗ್ಗೆ ತಿಳಿದುಕೊಂಡ ನಂತರ, ಅವರು ಬುಡಕಟ್ಟು ಸಮುದಾಯಕ್ಕಾಗಿ ಕೆಲಸ ಮಾಡುತ್ತಿದ್ದ ಒಡಿಶಾ ಸಪ್ಲೈರ್ಸ್ ಮಾಡುವವರನ್ನ ಸಂಪರ್ಕಿಸಿದರು. ಇದರ ನಂತರ, ವೇಣುಗೋಪಾಲ್ ತೆಲಂಗಾಣದಿಂದ ಒಡಿಶಾದ ಘಟಕಗಳಿಂದ ಸಿಯಾಲಿ, ಸಾಲ್ ಮತ್ತು ಪಲಾಶ್ ಎಲೆಗಳನ್ನ ತರಿಸಿಕೊಂಡು ಬಳಿಕ ಈ ಎಲೆಗಳಿಂದ ಮಾಡುವ ಲೀಫ್ ಪ್ಲೇಟ್ ತಯಾರಿಸುವ ಯೂನಿಟ್ ಸ್ಥಾಪಿಸಿದರು, ಅಲ್ಲಿ ಅವರು ಪ್ಲೇಟ್ಸದ ಮತ್ತು ಬಟ್ಟಲುಗಳನ್ನು ತಯಾರಿಸಲು ಶುರು ಮಾಡಿದರು.
ಮಾಧವಿ ಮತ್ತು ವೇಣುಗೋಪಾಲ್ ತಮ್ಮದೇ ಸೊಸೈಟಿಯಿಂದ ಪರಿಸರ ಸ್ನೇಹಿ ಪ್ಲೇಟ್ಸ್ ಗಳನ್ನ ಮಾರಾಟ ಮಾಡಲು ಪ್ರಾರಂಭಿಸಿದರು. ಅವರ ಸ್ನೇಹಿತರು ಮತ್ತು ಸಂಬಂಧಿಕರು ಅವರು ತಯಾರಿಸಿದ ಪರಿಸರ ಸ್ನೇಹಿ ಪ್ಲೇಟ್ಸ್ ಗಳನ್ನ ಬಳಸಿದರು ಮತ್ತು ಈ ಜನರು ಮಾಧವಿ ದಂಪತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಗು ವಿಡಿಯೋಗಳನ್ನ ಪೋಸ್ಟ್ ಮಾಡಿದರು. ಇದು ಮಾಧವಿ ದಂಪತಿಗಳೆ ಬಹಳ ಉಪಯುಕ್ತವಾಯಿತು. ಈಗ ನಮ್ಮ ಪ್ರಾಡಕ್ಟ್ ಗಳು ಭಾರತವನ್ನು ದಾಟಿ ಅಮೆರಿಕ ಮತ್ತು ಜರ್ಮನಿಗೆ ಹೋಗುತ್ತಿವೆ ಎಂದು ವೇಣುಗೋಪಾಲ್ ವಿವರಿಸುತ್ತಾರೆ. ಭಾರತಕ್ಕಿಂತ ಹೆಚ್ಚಿನ ಜನರು ಈ ಪರಿಸರ ಸ್ನೇಹಿ ಪ್ಲೇಟ್ಸ್ ಗಳನ್ನ ವಿದೇಶದಲ್ಲಿ ಬಳಸುತ್ತಾರೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ತೋರಿಸುತ್ತಾರೆ ಎಂದು ಅವರು ಹೇಳುತ್ತಾರೆ.
ನಾವು ಅದರ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ ಎಂದು ಮಾಧವಿ ಮತ್ತು ವೇಣುಗೋಪಾಲ್ ಹೇಳುತ್ತಾರೆ. ಆದರೆ ವಿಸ್ತೃಕೂ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸಬಹುದೆಂದು ನಮಗೆ ತಿಳಿದಾಗ, ನಾವು ಈ ಕ್ಷೇತ್ರದಲ್ಲಿ ಮುಂದುವರಿಯಲು ನಿರ್ಧರಿಸಿದೆವು. ಆರಂಭದಲ್ಲಿ, ಯುನಿಟ್ ಸೆಟಪ್ ಸಿದ್ಧಪಡಿಸುವಲ್ಲಿ ನಮಗೆ ಸಾಕಷ್ಟು ತೊಂದರೆಗಳಿದ್ದವು ಆದರೆ ನಾವು ಎಂದಿಗೂ ಈ ಕಾರ್ಯವನ್ನ ಕೈಬಿಡಲಿಲ್ಲ ಮತ್ತು ಮುಂದುವರೆದೆವು.
ಮೊದಲ ವರ್ಷದಲ್ಲಿ ನಾವು ಸುಮಾರು 3 ಲಕ್ಷ ರೂ.ಗಳ ಬಿಸಿನೆಸ್ ಪಡೆದೆವು ಎಂದು ವೇಣುಗೋಪಾಲ್ ಹೇಳುತ್ತಾರೆ. ಆದರೆ ಈ ಹಣಕಾಸು ವರ್ಷದಲ್ಲಿ ನಾವು 20 ಲಕ್ಷ ರೂಪಾಯಿಗಳವರೆಗೆ ವ್ಯಾಪಾರ ಮಾಡಿದ್ದೇವೆ. ಪ್ರಸ್ತುತ, ನಾವು 15 ಲಕ್ಷದ ಬಿಸಿನೆಸ್ ಮಾಡಿದ್ದೇವೆ. ಕಳೆದ ತಿಂಗಳು ನಾವು ಯುಎಸ್ ನಿಂದ ದೊಡ್ಡ ಆರ್ಡರ್ ಗಳನ್ನ ಸ್ವೀಕರಿಸಿದ್ದೇವೆ ಮತ್ತು ನಾವು ಯುಎಸ್ಗೆ ಕಂಟೇನರ್ ಸರಕು ಸಾಗಿಸಿದ್ದೇವೆ.
ಮಾಧವಿ ಮತ್ತು ವೇಣುಗೋಪಾಲ್ ಅವರ ಯೂನಿಟ್ ಗ್ರಾಮದ 7 ಬಾಲಕಿಯರನ್ನು ನೇಮಿಸಿಕೊಂಡಿದೆ. ಈ ಯೂನಿಟ್ ನಲ್ಲಿ ಪ್ರತಿದಿನ ಸುಮಾರು 7 ಸಾವಿರ ಎಲೆಯ ಪ್ಲೇಟ್ಸ್ ಗಳನ್ನ ಮತ್ತು ಬಟ್ಟಲುಗಳನ್ನು ತಯಾರಿಸಲಾಗುತ್ತದೆ.