ಹುತಾತ್ಮ ಯೊಧನ ಸಹೋದ್ಯೋಗಿ ಸೈನಿಕರು ಬಂದು ಮಾಡಿದ್ದೇನು ನೋಡಿ: “ಥ್ಯಾಂಕ್ಯೂ ಅಣ್ಣಂದಿರಾ” ಎಂದ ಹುತಾತ್ಮ ಯೋಧನ ತಂಗಿ

in Kannada News/News 130 views

ಇತ್ತೀಚೆಗೆ ಕಾಶ್ಮೀರ ಟೈಗರ್ ಗ್ರೂಪ್‌ನ ಕೆಲ ಉ ಗ್ರ ರು ಭದ್ರತಾ ಸಿಬ್ಬಂದಿಯ ಬಸ್‌ನ ಮೇಲೆ ದಾ ಳಿ ನಡೆಸಿದ್ದರು. ಇದರಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ಈ ಯೋಧರ ಪೈಕಿ ಒಬ್ಬ ಯೋಧನ ತಂಗಿಯ ಮದುವೆ ನೆನ್ನೆ ನಡೆಯಿತ. ಆದರೆ ಸೋದರರ ರೂಪದಲ್ಲಿ ಅನೇಕ ಯೋಧರು ಈ ತಂಗಿಗೆ ಅಣ್ಣನ ಇಲ್ಲದಿರುವಿಕೆಯ ನೋವನ್ನ ಮರೆಯುವಂತೆ ಮಾಡಿದ್ದಾರೆ. ಈ ಸುದ್ದಿಯ ಮೂಲಕ ಹುತಾತ್ಮ ಯೊಧನ ಸಹೋದ್ಯೋಗಿ ಸೈನಿಕರು ಮಾಡಿದ್ದೇನು? ಈ ಬಗ್ಗೆ ದೇಶದ ಜನ ಹಾಡಿ ಹೊಗಳುತ್ತಿರೋದ್ಯಾಕೆ? ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

Advertisement

ಹುತಾತ್ಮ ಯೋಧನ ಜಾಗದಲ್ಲಿ ನಿಂತು ತಂಗಿಯ ಮದುವೆ ಮಾಡಿಕೊಟ್ಟ ಯೋಧನ ಸ್ನೇಹಿತರು

ಕಳೆದ ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದರು. ಆ ಪೈಕಿ ಒಬ್ಬ ಯೋಧನ ಸ್ನೇಹಿತರು ಕೈಗೊಂಡ ನಿರ್ಧಾರಕ್ಕೆ ಇದೀಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಅನೇಕ ಸಿಆರ್‌ಪಿಎಫ್ ಯೋಧರು ಹುತಾತ್ಮ ಯೋಧನ ಮನೆಗೆ ಹೋಗಿ ಮದುವೆಯ ದಿನದಂದು ಹುತಾತ್ಮ ಯೋಧನ ಸಹೋದರಿಯ ಮದುವೆಯನ್ನ ತಾವೇ ಮುಂದೆ ನಿಂತು ಮಾಡಿದ್ದಾರೆ. ಅನೇಕ ಸಿಆರ್‌ಪಿಎಫ್ ಯೋಧರು ಯುವತಿಯನ್ನ ಆಶೀರ್ವದಿಸಿದರು. ಇದನ್ನು ಕಂಡು ಆ ಯುವತಿ ಭಾವುಕಳಾದಳು.

ದಾ ಳಿಯಲ್ಲಿ 3 ಜನ ಭಾಗಿಯಾಗಿದ್ದರು

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರ ಐಜಿಪಿ, ಈ ದಾ ಳಿಯಲ್ಲಿ ಇಬ್ಬರು ವಿದೇಶಿಗರು ಮತ್ತು ಒಬ್ಬ ಸ್ಥಳೀಯ ಭ ಯೋ ತ್ಪಾ ದಕ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮೂವರು ವ್ಯಕ್ತಿಗಳು ನಿನ್ನೆ ಸಂಜೆ ಪೂರ್ವ ಯೋಜನೆ ನಂತರವೇ ಮಾಡಿದ್ದಾರೆ. ಸೋಮವಾರ, ಜಮ್ಮು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ 3 ಜನರು ಬಸ್ ಮೇಲೆ ದಾ ಳಿ ಮಾಡಿದ್ದರು. ಈ ವೇಳೆ ಕೆಲ ಯೊಧರು ಹುತಾತ್ಮರಾದರೆ  ಮತ್ತೊಂದೆಡೆ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾನ್ಸ್‌ಟೇಬಲ್ ಸಮೇತ ಮೂರು ಜನ ಹುತಾತ್ಮರಾಗಿದ್ದಾರೆ

ಈ ದಾ ಳಿ ಯಲ್ಲಿ ಕಾನ್‌ಸ್ಟೆಬಲ್ ಸೇರಿ ಒಟ್ಟು 3 ಜನ ಹುತಾತ್ಮರಾಗಿದ್ದಾರೆ. ಕಾನ್ಸ್ಟೇಬಲ್ ನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಆಸ್ಪತ್ರೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬಂಧಿತ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ಈ ವಿಷಯವನ್ನು ಸರ್ಕಾರವು ಖಾಸಗಿ ಮಟ್ಟದಲ್ಲಿಯೂ ಪರಿಶೀಲಿಸುತ್ತಿದೆ.

Advertisement
Share this on...