ಮುಸ್ಲಿಮನಾಗಿ ಇದ್ದಿದ್ರೆ ಮತ್ತಷ್ಟು ಅವಕಾಶಗಳು ಸಿಗ್ತಿದ್ವು, ಉದ್ಯೋಗ ಸಿಗದಿದ್ದರೂ ಪರವಾಗಿಲ್ಲ, ಧರ್ಮ ಬಿಡಲ್ಲ‌ ಎಂದ ದಾನಿಶ್ ಕನೇರಿಯಾ

in Uncategorized 4,801 views

ನಾನು ಮುಸ್ಲಿಮನಾಗಿ ಇದ್ದಿದ್ರೆ ಪಾಕಿಸ್ತಾನದ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಬಹುದಿತ್ತು. ಅಷ್ಟೇ ಅಲ್ಲದೇ ಕ್ರಿಕೆಟ್ ನಲ್ಲಿ ಮತ್ತಷ್ಟು ಸಾಧನೆ ಮಾಡಲು ಅವಕಾಶ ಸಿಗುತ್ತಿತ್ತು. ನಮ್ಮದೇ ತಂಡದವರ ದಾಖಲೆ ಮುರಿಯಬಹುದಿತ್ತು. ಆದರೆ ನಾನು ನನ್ನ ಸನಾತನ ಧರ್ಮ ಬಿಟ್ಟು ಹೋಗಲು ತಯಾರಿರಲಿಲ್ಲ ಎಂದು ಮಾಜಿ ಪಾಕ್ ಕ್ರಿಕೆಟಿಗ ದಾನೇಶ್ ಕನೇರಿಯಾ ಹೇಳಿದ್ದಾರೆ.

ಆಜ್ ತಕ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ನನಗೆ ನನ್ನ ಸನಾತನ ಧರ್ಮವೇ ಶ್ರೇಷ್ಟ. ಈ ವಿಷಯದಲ್ಲಿ ನಾನು ರಾಜಿಯಾಗಲು ಸಿದ್ಧನಿಲ್ಲ. ನನಗೆ ಮತಾಂತರವಾಗಲು ತುಂಬಾ ಒತ್ತಡ ಹೇರಲಾಯಿತು, ಆಮಿಷವನ್ನೂ ಒಡ್ಡಲಾಯಿತು. ಆದರೆ ನಾನು ಯಾವುದಕ್ಕೂ ಜಗ್ಗಲಿಲ್ಲ ಎಂದು ಕನೇರಿಯಾ ಹೇಳಿದ್ದಾರೆ. ನನಗೆ ಕೆಲಸ ಸಿಗಲಿ, ಬಿಡಲಿ, ಅದರ ಬಗ್ಗೆ ನನಗೆ ಯೋಚನೆ ಇಲ್ಲ. ಧರ್ಮ ಇದ್ದರೆ ಎಲ್ಲವೂ ಇದೆ. ಇಲ್ಲದಿದ್ದರೆ ಏನೂ ಇಲ್ಲ, ಜೈ ಶ್ರೀರಾಮ್ ಎಂದು ದಾನೇಶ್ ಕನೇರಿಯಾ ಹೇಳಿದ್ದಾರೆ.

Advertisement

ಪಾಕಿಸ್ತಾನದ ಅತ್ಯುತ್ತಮ ಗೂಗ್ಲಿ ಸ್ಪಿನರ್ ಎಂದೇ ಖ್ಯಾತರಾಗಿದ್ದ ದಾನೇಶ್ ಪರಬ ಶಂಕರ್ ಕನೇರಿಯಾ ಅವರಿಗೆ ಕೇವಲ 61 ಪಂದ್ಯ ಆಡಲು ಅವಕಾಶ ದೊರಕಿತ್ತು. ಸಿಕ್ಕಿದ ಕೆಲವೇ ಅವಕಾಶಗಳಲ್ಲಿ 261 ವಿಕೆಟ್ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದರು. ಆದರೆ ಅವರ ಕ್ರಿಕೆಟ್ ಪಯಣ ಬೇಗ ಕೊನೆಗೊಂಡಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 14.6% ಇತ್ತು. ಆದರೆ ಪ್ರಸ್ತುತ ಇದು 2.14% ಕ್ಕೆ ಬಂದು ಇಳಿದಿದೆ. ಅದಕ್ಕೆ ಕಾರಣ ಏನು ಎನ್ನುವುದು ದಾನೇಶ್ ಕನೇರಿಯಾ ಅವರ ಮಾತುಗಳಲ್ಲಿಯೇ ಅರ್ಥವಾಗುತ್ತದೆ.

ಇದನ್ನೂ ಓದಿ: “ಮರ್ಯಾದೆಯಿಂದ ಹೇಳ್ತಾ ಇದೀನಿ ಇಸ್ಲಾಂಗೆ ಕನ್ವರ್ಟ್ ಆಗು” ಎಂದಾಗ, “ಆಗಲ್ಲ” ಎಂದ ದಾನಿಶ್ ಕನ್ಹೇರಿಯಾ, “ದನದ ಮೂತ್ರ‌‌ ಕುಡಿದು ಸಾಯಿ” ಎಂದಿದ್ದ ಮುಸ್ಲಿಂ ಮಹಿಳೆ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ಹಿಂದೂ ಧರ್ಮದವರಾಗಿರುವ ಒಂದೇ ಒಂದು ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹಿಂದೂ ಎಂಬ ಕಾರಣಕ್ಕೆ ತನ್ನ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಅವರು ಹೇಳಿದ್ದರು. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಂ ಮಹಿಳೆಯೊಬ್ಬಳು ಇಸ್ಲಾಂಗೆ ಮತಾಂತರಗೊಳ್ಳುವಂತೆ ದಾನಿಶ್ ಕನ್ಹೇರಿಯಾಗೆ ಮನವಿ ಮಾಡಿದ್ದಾರೆ. ಕನೇರಿಯಾ ನಿರಾಕರಿಸಿದಾಗ, ದನದ ಮೂತ್ರ ಕುಡಿಯುವವರಿಗೆ ಯಾರು ವಿವರಿಸಬೇಕು? ಎಂದು ಮಹಿಳೆ ಬೈದಿದ್ದಾಳೆ.

ಕನೇರಿಯಾ ಅವರ ಬೌಲಿಂಗ್‌ನ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುವ ಈ ಮಹಿಳೆಯ ಹೆಸರು ಆಮ್ನಾ ಗುಲ್. ಈಕೆ ಟ್ವೀಟ್ ಮಾಡಿ ಕನೇರಿಯಾಗೆ, “ನೀವು ದಯವಿಟ್ಟು ಇಸ್ಲಾಂ ಅನ್ನು ಸ್ವೀಕರಿಸಿ. ಇಸ್ಲಾಂ ಚಿನ್ನ. ಇಸ್ಲಾಂ ಇಲ್ಲದೆ ಯಾವುದೂ ಇಲ್ಲ. ನಿಮ್ಮ ಜೀವನವು ಸಾವಿನಂತೆ. ನೀವು ಇಸ್ಲಾಂ ಅನ್ನು ಸ್ವೀಕರಿಸಿ” ಎಂದಿದ್ದಳು.

ಇದಕ್ಕೆ ಪ್ರತಿಕ್ರಿಯಿಸಿದ ಕನೇರಿಯಾ, “ನಿಮ್ಮಂತಹ ಅನೇಕರು ನನ್ನನ್ನು ಮತಾಂತರ ಮಾಡಲು ಪ್ರಯತ್ನಿಸಿದರು, ಆದರೆ ಯಾರೂ ಯಶಸ್ವಿಯಾಗಲಿಲ್ಲ” ಎಂದಿದ್ದಾರೆ. ಆದರೆ ಈ ಉತ್ತರದ ನಂತರ, ಮಹಿಳೆ ಕೋಪಗೊಂಡು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತ, “ದನದ ಮೂತ್ರ ಕುಡಿಯುವವರನ್ನು ನಾನು ವಿವರಿಸಲಾರೆ. ನೀವೆ ಗೆದ್ದಿರಿ, ನಾನು ಸೋತೆ” ಎಂದಿದ್ದಾಳೆ.

ದಾನಿಶ್ ಮತ್ತು ಮಹಿಳಾ ಅಭಿಮಾನಿಯ ನಡುವಿನ ಈ ಸಂಭಾಷಣೆಯ ನಂತರ, ಅನೇಕ ಪಾಕಿಸ್ತಾನಿಗಳು ದಾನಿಶ್ ಅವರ ಟ್ವೀಟ್‌ಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಇಸ್ಲಾಂ ಅನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದು ನಿಮ್ಮ ನಿರ್ಧಾರ ಎಂದು ಹೇಳಿದ್ದಾರೆ. ಆದರೆ ಆಕೆ (ಮಹಿಳಾ ಅಭಿಮಾನಿ) ಮಾತ್ರ ನಿಮ್ಮ ಧರ್ಮವನ್ನು ಬದಲಾಯಿಸಿಕೊಳ್ಳಲು ಆಹ್ವಾನಿಸುತ್ತಿದ್ದಾರೆ ಹೊರತು ಮತ್ತೇನಿಲ್ಲ ಆದರೆ ನಿಮ್ಮಿಂದ ಇಂತಹ ಉತ್ತರವನ್ನು ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಗಮನಿಸುವ ಸಂಗತಿಯೆಂದರೆ, #ASKDANISH ಸೆಷನ್ ನಲ್ಲಿ, ಇನ್ನೊಬ್ಬ ಯೂಸರ್ ದಾನಿಶ್‌ಗೆ ಪಾಕಿಸ್ತಾನದಲ್ಲಿ ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಡವಿದೆಯೇ? ಅವರು ಪಾಕಿಸ್ತಾನದಲ್ಲಿ ಸುರಕ್ಷಿತವಾಗಿರುವುದಿಲ್ಲವೇ? ಎಂದು ಕೇಳಿದಾಗ ಅದಕ್ಕೆ ಕನೇರಿಯಾ ಹೀಗೆ ಬರೆದಿದ್ದಾರೆ – “ನಾನು ಸುರಕ್ಷಿತವಾಗಿದ್ದೇನೆ. ನನ್ನನ್ನ ಮತಾಂತರಿಸಲು ಕೆಲವರು ಪ್ರಯತ್ನಿಸಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಶಬ್ದಗಳೊಂದಿಗೆ ಆಟವಾಡಬೇಡಿ” ಎಂದಿದ್ದಾರೆ.

ಈ ಸೆಷನ್ ನಲ್ಲಿ ದಾನಿಶ್ ಅನೇಕ ಜನರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ಅಮಾನಾ ಗುಲ್ ಎಂಬ ಮಹಿಳೆಯ ಮನವಿಯು ನಂತರ ದಾನಿಶ್ ರವರ ಜೊತೆಗೆ ನಡೆಯುತ್ತಿರುವ ಧಾರ್ಮಿಕ ತಾರತಮ್ಯವನ್ನ ಮತ್ತೆ ಬೆಳಕಿಗೆ ತಂದಿತು. ಯೂಸರ್ ಗಳ ಪ್ರಶ್ನೆಗೆ ಉತ್ತರವಾಗಿ, ಅವರು ಧಾರ್ಮಿಕ ತಾರತಮ್ಯಕ್ಕೆ ತಾನು ಹೆಚ್ಚು ಹೆದರುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ:

“ಇಸ್ಲಾಂಗೆ ಕನ್ವರ್ಟ್ ಆಗಿ ಮುಸಲ್ಮಾನನಾಗು ಇಲ್ಲಾಂದ್ರೆ…”: ಎಂದು ಧಮಕಿ ಹಾಕಿದ ಪಾಕ್ ಕ್ರಿಕೆಟಿಗನಿಗೆ ತಿಲಕರತ್ನೆ ದಿಲ್ಶಾನ್ ಉತ್ತರವೇನಿತ್ತು?

“ನೀನು ಮುಸ್ಲಿಮನಲ್ಲದಿದ್ದರೆ ಮುಸಲ್ಮಾನನಾಗು, ನಿನ್ನ ಜೀವನದಲ್ಲಿ ಏನೇ ಮಾಡಿದರೂ ನೇರ ಜನ್ನತ್‌ಗೇ ಹೋಗ್ತೀಯ” ಎಂದು ದಿಲ್ಶಾನ್‌ಗೆ ಶಹಜಾದ್ ಹೇಳಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

70 ಮೀಟರ್ ಫೀಲ್ಡ್ ಮತ್ತು 22 ಯಾರ್ಡ್ ಪಿಚ್‌ನಲ್ಲಿ ಕೇವಲ ಸಿಕ್ಸರ್ ಮತ್ತು ಬೌಂಡರಿಗಳು ಮಾತ್ರ ಇರೋಲ್ಲ. ಗ್ರೌಂಡ್ ನಲ್ಲಿ ವಿಕೆಟ್‌ಗಳನ್ನು ಮಾತ್ರ ಬೀಳಲ್ಲ, ಉತ್ತಮ ಕ್ಯಾಚ್ ಅಷ್ಟೇ ಅಲ್ಲ, ಕ್ರಿಕೆಟ್ ಗ್ರೌಂಡ್ ನಲ್ಲಿ ಜಗಳಗಳೂ ನಡೆಯುತ್ತವೆ ಮತ್ತು ಅಂತಹ ಅನೇಕ ವಿವಾದಾತ್ಮಕ ವಿಷಯಗಳನ್ನು ಆಟಗಾರರು ಸಹ ಹೇಳುತ್ತಾರೆ, ಅದು ಮಾಧ್ಯಮಗಳಲ್ಲಿ ಮುಖ್ಯಾಂಶವಾಗಿಬಿಡುತ್ತದೆ ಮತ್ತು ನಂತರ ಅಭಿಮಾನಿಗಳು ಆ ಆಟಗಾರನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಾರೆ. ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ಕೂಡ ಇದೇ ರೀತಿಯ ಕೃತ್ಯವನ್ನ ಮಾಡಿದ್ದ. ಈ ಪಾಕಿಸ್ತಾನಿ ಬ್ಯಾಟ್ಸ್‌ಮನ್ ತನ್ನ ಪರ್ಫಾರ್ಮೆನ್ಸ್ ಗಿಂತ ಹೆಚ್ಚು ತನ್ನ ಮಾತುಗಳಿಂದಲೇ ಹೆಚ್ಚು ಚರ್ಚೆಯಲ್ಲಿರುತ್ತಾನೆ. 2014ರಲ್ಲೂ ಇದೇ ರೀತಿಯ ಕೃತ್ಯ ಈತ ಮಾಡಿದ್ದ.

ದಿಲ್ಶಾನ್‌ಗೆ ಮುಸಲ್ಮಾನನಾಗು ಎಂದ ಶೆಹಜಾದ್

ಇದು 2014ರ ಘಟನೆ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ದಂಬುಲ್ಲಾ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯ ಮುಗಿದ ನಂತರ ಅಹ್ಮದ್ ಶಹಜಾದ್ ಮಧ್ಯಮ ಮೈದಾನದಲ್ಲಿ ಎಂತಹ ಕೃತ್ಯ ಎಸಗಿದ್ದನೆಂದರೆ ಇದನ್ನ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟಿಗರಿಂದ ನಿರೀಕ್ಷೆ ಮಾಡಿರಲಿಲ್ಲ. ಅಹ್ಮದ್ ಶೆಹಜಾದ್ ಶ್ರೀಲಂಕಾದ ಹಿರಿಯ ಆಟಗಾರ ತಿಲಕರತ್ನೆ ದಿಲ್ಶಾನ್ ಅವರಿಗೆ ಮುಸ್ಲಿಂ ಆಗಲು ಸಲಹೆ ನೀಡಿದ್ದ. ಶಹಜಾದ್ ದಿಲ್ಶಾನ್‌ನನ್ನು ಮುಸಲ್ಮಾನನಾಗುವಂತೆ ಕೇಳಿಕೊಂಡಿದ್ದ.

ಅಹ್ಮದ್ ಶಹಜಾದ್ ದಿಲ್ಶಾನ್ ಹತ್ತಿರ ಹೋಗಿ, “ನೀನು ಮುಸಲ್ಮಾನನಲ್ಲ, ಮುಸಲ್ಮಾನನಾದರೆ ಜೀವನದಲ್ಲಿ ಏನೇ ಮಾಡಿದರೂ ಸ್ವರ್ಗ ಸಿಗುತ್ತದೆ” ಎಂದಿದ್ದ. ಅಹ್ಮದ್ ಶಹಜಾದ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ವೈರಲ್ ಆಗಿತ್ತು. ಈ ವೇಳೆ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಬೋರ್ಡ್) ಕೂಡ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಪಿಸಿಬಿ ಅಹ್ಮದ್ ಶಹಜಾದ್ ಅವರನ್ನು ಕರೆಸಿದಾಗ, ಅವರು ದಿಲ್ಶನ್ ಅವರೊಂದಿಗೆ ಖಾಸಗಿಯಾಗಿ ಮಾತನಾಡುತ್ತಿದ್ದೆ ಎಂದು ಹೇಳಿದ್ದ.

ಇದಕ್ಕೆ ದಿಲ್ಶಾನ್ ಉತ್ತರವೇನಿತ್ತು?

“ಇಸ್ಲಾಂಗೆ ಮತಾಂತರವಾಗು, ನೀನು ಮುಸ್ಲಿಮನಾದರೆ ನೀನೂ ಏನೇ ಮಾಡಿದರೂ ನಿನಗೆ ಜನ್ನತ್ ಸಿಗುತ್ತೆ” ಅಂತ ಶೆಹಜಾದ್ ಹೇಳಿದಾಕ್ಷಣ ಅದಕ್ಕೆ ದಿಲ್ಶಾನ್ ಖಡಕ್ ಉತ್ತರವನ್ನೇ ಕೊಟ್ಟಿದ್ದರು, ಆದರೆ ಅದರ ಆಡಿಯೋ ಅಷ್ಟು ಸ್ಪಷ್ಟವಾಗಿರಲಿಲ್ಲ, ದಿಲ್ಶಾನ್ ಉತ್ತರದಿಂದ ಕೆರಳಿದ ಶೆಹಜಾದ್ ದಿಲ್ಶಾನ್ ಅವರಿಗೆ, “ಹಾಗಾದರೆ ಬೆಂಕಿಗೆ ಸಿದ್ಧನಾಗು” ಎಂದು ಧಮಕಿ ಹಾಕಿದ್ದ.

ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಹ್ಮದ್ ಶೆಹಜಾದ್ ತಮ್ಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವೊಂದರ ನಂತರ ಶ್ರೀಲಂಕಾ ಆಟಗಾರ ತಿಲಕರತ್ನೆ ದಿಲ್ಶನ್‌ಗೆ ಮಾಡಿದ ಧಾರ್ಮಿಕ ಹೇಳಿಕೆಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನಿಖೆ ನಡೆಸಲು ಮುಂದಾಗಿತ್ತು. ಆದರೆ ಬಳಿಕ ಅದರ ಫಲಿತಾಂಶವೂ ಝೀರೋ ಆಗೇ ಇತ್ತು.

ಮುಸಲ್ಮಾನನಿಂದ ಬೌದ್ಧ ಧರ್ಮಕ್ಕೆ ಮತಾತಂತರವಾಗಿದ್ದ ದಿಲ್ಶಾನ್

ತಿಲಕರತ್ನೆ ದಿಲ್ಶಾನ್ ಮೊದಲ ಮುಸ್ಲಿಂರಾಗಿದ್ದರು ಮತ್ತು ಇಸ್ಲಾಂಗೆ ಮತಾಂತರಗೊಂಡಿದ್ದರು. ವಾಸ್ತವವಾಗಿ ಅವರ ತಂದೆ ಮುಸ್ಲಿಂ ಮತ್ತು ತಾಯಿ ಬೌದ್ಧ. ಮೊದಲು ದಿಲ್ಶಾನ್ ಅವರ ಹೆಸರು ಮೊಹಮ್ಮದ್ ದಿಲ್ಶಾನ್ ಆಗಿತ್ತು ಆದರೆ ನಂತರ ಅವರು ಬೌದ್ಧ ಧರ್ಮಕ್ಕೆ ಮತಾಂತರವಾದ ಬಳಿಕ ಅವರು ತಮ್ಮ ಹೆಸರನ್ನು ತಿಲಕರತ್ನೆ ದಿಲ್ಶನ್ ಎಂದು ಬದಲಾಯಿಸಿಕೊಂಡಿದ್ದರು. ಅಹ್ಮದ್ ಶಹಜಾದ್‌ಗೂ ಈ ವಿಷಯ ತಿಳಿದಿತ್ತು ಮತ್ತು ಪಂದ್ಯ ಮುಗಿದ ನಂತರ ಆತ ದಿಲ್ಶಾನ್‌ಗೆ ಇದೇ ಮಾತನ್ನ ಹೇಳಿದ್ದ. ಪಾಕಿಸ್ತಾನದ ಕ್ರಿಕೆಟಿಗರು ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಶಾಹಿದ್ ಅಫ್ರಿದಿಯಿಂದ ಹಿಡಿದು ಜಾವೇದ್ ಮಿಯಾಂದಾದ್ ವರೆಗೆ ಎಲ್ಲರೂ ವಿಚಿತ್ರ ಹೇಳಿಕೆಗಳನ್ನು ನೀಡಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಈ ಪ್ರಕ್ರಿಯೆ ಇಂದಿಗೂ ಮುಂದುವರೆದಿದೆ.

Advertisement
Share this on...