ಪ್ರವಾದಿ ಮುಹಮ್ಮದ್ ಕುರಿತ ಹೇಳಿಕೆಗಾಗಿ ಇಸ್ಲಾಮಿಕ್ ಮೂಲಭೂತವಾದಿಗಳ ಟಾರ್ಗೆಟ್ ನಲ್ಲಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಆರ್ಮ್ಸ್ ಲೈಸೆನ್ಸ್ ನೀಡಲಾಗಿದೆ. ಪೊಲೀಸರು (ದೆಹಲಿ ಪೊಲೀಸರು) ನೂಪುರ್ ಶರ್ಮಾರವ ಆತ್ಮರಕ್ಷಣೆಗಾಗಿ ಈ ಶಸ್ತ್ರಾಸ್ತ್ರ ಪರವಾನಗಿಯನ್ನು ನೀಡಿದ್ದಾರೆ.
ಕಳೆದ ವರ್ಷ ಪ್ರವಾದಿ ಮುಹಮ್ಮದ್ ಅನ್ನು ಆಧಾರವಾಗಿಟ್ಟುಕೊಂಡು ದೇಶದಾದ್ಯಂತ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ನಡೆಸಲಾಯಿತು. ನೂಪುರ್ ಶರ್ಮಾ ಅವರಿಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಿರಂತರ ಕೊಲೆ ಬೆದರಿಕೆಗಳು ಕೂಡ ಬರುತ್ತಿವೆ. ಇದಕ್ಕೂ ಮುನ್ನ ಇಸ್ಲಾಮಿಕ್ ಮೂಲಭೂತವಾದಿಗಳು ನೂಪುರ್ ಶರ್ಮಾರನ್ನ ಬೆಂಬಲಿಸಿದ್ದಕ್ಕಾಗಿ ಹಲವು ಜನರ ಕೊ ಲೆ ಗಳನ್ನೂ ಮಾಡಿದ್ದಾರೆ.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಇಸ್ಲಾಮಿಕ್ ಮೂಲಭೂತವಾದಿಗಳು ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಕ ತ್ತು ಕ ತ್ತ ರಿಸಿ ಕೊಂ ದಿ ದ್ದರು. ಈ ಇಬ್ಬರು ಮತಾಂಧರು ಗ್ರಾಹಕ ಸೋಗಿನಲ್ಲಿ ಕನ್ಹಯ್ಯಲಾಲ್ ಅಂಗಡಿಗೆ ನುಗ್ಗಿದ್ದರು. ಅದೇ ಸಮಯದಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಉಮೇಶ್ ಕೋಲ್ಹೆ ಅವರನ್ನ ಅವರ ಮುಸ್ಲಿಂ ಸ್ನೇಹಿತನೇ ಸಂಚು ರೂಪಿಸಿ ಅವನನ್ನು ಕೊಂ ದಿ ದ್ದನು ಇಂತಹ ಹಲವು ಪ್ರಕರಣಗಳು ದೇಶಾದ್ಯಂತ ನಡೆದಿವೆ.
ಟಿವಿ ಡಿಬೇಟ್ ಒಂದರಲ್ಲಿ ಹಿಂದೂ ದೇವತೆಗಳ ಬಗ್ಗೆ ಮುಸ್ಲಿಂ ಪ್ಯಾನಲಿಸ್ಟ್ ಅವಮಾನಕರ ಹೇಳಿಕೆ ನೀಡಿದ ಬಳಿಕ ನೂಪುರ್ ಶರ್ಮಾ ಪ್ರವಾದಿ ಮುಹಮದ್ ಬಗ್ಗೆ ಮಾತನಾಡಿದ್ದರು. ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಮತ್ತು ಅವರ ಮೂರನೇ ಪತ್ನಿ ಆಯೇಷಾ ಬಗ್ಗೆ ಕಾಮೆಂಟ್ ಮಾಡಿದ್ದರು.
ನೂಪುರ್ ಶರ್ಮಾ ಅವರು ತಾವು ಇಸ್ಲಾಂ ಧರ್ಮದ ಧಾರ್ಮಿಕ ಪುಸ್ತಕಗಳಲ್ಲಿಯೂ ಇದೆ ಮತ್ತು ಇಸ್ಲಾಮಿಕ್ ಬೋಧಕರು ತಮ್ಮ ಭಾಷಣಗಳಲ್ಲಿ ಹೇಳಿರುವ ವಿಷಯವನ್ನು ಹೇಳುತ್ತಿದ್ದೇನೆ ಎಂದಿದ್ದರು. ಶಿವನನ್ನ ಅವಮಾನಿಸಿದ್ದಕ್ಕೆ ತಾನು ಪ್ರವಾದಿ ಮುಹಮ್ಮದ್ ಬಗ್ಗೆ ಪ್ರತಿಕ್ರಿಯಿಸಿದೆ ಎಂದು ನೂಪುರ್ ಶರ್ಮಾ ಹೇಳಿದ್ದರು. ಇದರ ಹೊರತಾಗಿಯೂ, ಮೂಲಭೂತವಾದಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಹಾಳುಮಾಡಲು ಹಿಂಸಾಚಾರದಲ್ಲಿ ತೊಡಗಿದ್ದರು.
ಆದರೆ, ವಿಷಯ ಉಲ್ಬಣಗೊಂಡ ನಂತರ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ನೂಪುರ್ ಶರ್ಮಾ ಕೂಡ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು. ಇಷ್ಟಾದರೂ ಮೂಲಭೂತವಾದಿಗಳು ನಿರಂತರವಾಗಿ ಕೊ ಲೆ ಬೆದರಿಕೆ ಹಾಕುತ್ತಿದ್ದರು. ಬಿಜೆಪಿಯ ಮಾಜಿ ವಕ್ತಾರರ ವಿರುದ್ಧ ಮುಂಬೈ, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ TLP ಯ ಬೆಂಬಲಿಗರು ಧರ್ಮನಿಂದನೆ ಪ್ರಕರಣದಲ್ಲಿ ನೂಪುರ ಶರ್ಮಾ ಕೊಂ ದವರಿಗೆ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ನಂತರ ಹೈದರಾಬಾದ್ ಮೂಲದ AIMIM (ಇಂಕ್ವಿಲಾಬ್) ಸದಸ್ಯ ಕೂಡ ನೂಪುರ್ ಶರ್ಮಾರನ್ನು ಕೊಂ ದ ವರಿಗೆ ಬಹುಮಾನ ಘೋಷಿಸಿದ್ದ.
ಹೈದರಾಬಾದ್ ಮೂಲದ ಸ್ಥಳೀಯ ಪಕ್ಷವಾದ AIMIM (ಇಂಕ್ವಿಲಾಬ್) ನೂಪುರ್ ಶರ್ಮಾರನ್ನು ಕೊಂದ ವ್ಯಕ್ತಿಗೆ 1,00,00,000 ರೂಪಾಯಿ ಬಹುಮಾನ ಘೋಷಿಸಿತ್ತು. ಸ್ಥಳೀಯ ಪಕ್ಷದ ನಾಯಕ ಕವಿ ಅಬ್ಬಾಸಿ ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿರುವ ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವೀಡಿಯೊ ಕೂಡ ವೈರಲ್ ಆಗಿತ್ತು. ಇದರಲ್ಲಿ ಆತ ಬಿಜೆಪಿ ಮತ್ತು ಶರ್ಮಾರನ್ನು ‘ವೈಟ್ ಕಾಲರ್ ವೇಶ್ಯೆಯರು’ ಎಂದು ಕರೆದಿದ್ದನು.
ನೂಪುರ್ ಶರ್ಮಾರಿಗೆ ಬರುತ್ತಿರುವ ಜೀವ ಬೆದರಿಕೆಯನ್ನು ಗ್ರಹಿಸಿದ ಸುಪ್ರೀಂ ಕೋರ್ಟ್, ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ದಾಖಲಾದ ಪ್ರಕರಣಗಳನ್ನು ಕ್ಲಬ್ ಮಾಡಿ ದೆಹಲಿಯಲ್ಲಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆಯನ್ನೂ ನೀಡಿತ್ತು. ಸದ್ಯ ದೆಹಲಿ ಪೊಲೀಸರು ಅವರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸುತ್ತಿದ್ದಾರೆ.