ಇಸ್ಲಾಂನಲ್ಲಿ ‘ಯಾವುದು ಸರಿ ಮತ್ತು ಯಾವುದು ಅಲ್ಲ’ ಎಂಬ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ಮುಸ್ಲಿಮರು ದಾರುಲ್ ಉಲೂಮ್ ದೇವ್ಬಂದ್ ಗೆ ಬರುತ್ತಾರೆ. ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ದಿಯೋಬಂದ್ನಿಂದ ಅವರಿಗೆ ‘ಕ್ಯಾ ಹಲಾಲ್ ಹೈ ಕ್ಯಾ ಹರಾಮ್’ ಆಧಾರದ ಮೇಲೆ ಫತ್ವಾ ಹೊರಡಿಸುವ ಮೂಲಕ ಉತ್ತರಿಸಲಾಗುತ್ತದೆ. ಇವುಗಳಲ್ಲಿ ಹಲವು ಪ್ರಶ್ನೆಗಳು ಮಹಿಳೆಯರಿಗೇ ಸಂಬಂಧಿಸಿದ್ದಾಗಿವೆ. ಕೆಲವು ಪ್ರಶ್ನೆಗಳು ಹಸ್ತಮೈಥುನದ ಬಗ್ಗೆ, ಇನ್ನು ಕೆಲವು ಸೆ-ಕ್ಸ್ ಗೆ ಸಂಬಂಧಿಸಿದ್ದಾರೆ ಇನ್ನು ಕೆಲವು ಧಾರ್ಮಿಕೇತರ (ಇಸ್ಲಾಮೇತರ) ಮಹಿಳೆಯರಿಗೆ ಸಂಬಂಧಿಸಿದ್ದಾಗಿವೆ.
ಇಂದು ಮತ್ತೊಮ್ಮೆ ನಿಮಗೆ ದಿಯೋಬಂದ್ನ ವೆಬ್ಸೈಟ್ ದಾರುಲಿಫ್ತಾದಿಂದ ಆಯ್ದ ಪ್ರಶ್ನೆಗಳ ಪಟ್ಟಿಯನ್ನು ತಂದಿದ್ದೇವೆ. ಈ ಎಲ್ಲಾ ಪ್ರಶ್ನೆಗಳು ಮಹಿಳೆಯರಿಗೇ ಸಂಬಂಧಿಸಿವೆ.
ಇಸ್ಲಾಮೇತರ ಅಥವ ಕುರಾನ್ ಓದಿರದ ಮಹಿಳೆಯ ಜೊತೆ ನಿಕಾಹ್ ಬಗ್ಗೆ
ದಾರುಲಿಫ್ತಾ ಸೈಟ್ನಲ್ಲಿ, ಜೋರ್ಡಾನ್ ವ್ಯಕ್ತಿಯೊಬ್ಬ ತಾನು ಜರ್ಮನ್ ಹುಡುಗಿಯನ್ನು ಮದುವೆಯಾಗಿದ್ದೇನೆ ಎಂದು ದಾರುಲ್ ಉಲೂಮ್ಗೆ ಧಾರ್ಮಿಕ ಸಲಹೆಯನ್ನು ಕೇಳಿದನು. ಆದರೆ ಹುಡುಗಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಮತ ಅಥವಾ ಯಾವುದೇ ಧರ್ಮವನ್ನು ನಂಬುವುದಿಲ್ಲ. ಅವಳು ಸಾವಿನ ನಂತರದ ಜೀವನ ಮತ್ತು ಜನ್ನತ್ ನಲ್ಲಿನ 72 ಹೂರ್ (ಕನ್ಯೆ) ಗಳ ಬಗ್ಗೆಯೂ ನಂಬುವುದಿಲ್ಲ. ಆದರೆ ಮದುವೆಗೂ ಮುನ್ನ ‘ಲಾ ಇಲಾ ಇಲ್ಲಾ’ ಎಂದಿದ್ದಾಳೆ. ಆಕೆಯ ಷರಿಯಾ ಪ್ರಕಾರ ಪರಿಸ್ಥಿತಿ ಏನು ಎಂದು ಆಕೆಯ ಗಂಡ ಕೇಳಿದನು ಹಾಗು ತನ್ನ ಹೆಂಡತಿಯನ್ನು ಬಿಡಲೂ ಬಯಸುವುದಿಲ್ಲ ಎಂದು ಕೇಳಿದ್ದಾನೆ.
ಕಟ್ಟರ್ ಇಸ್ಲಾಮಿಯಾಗಿರುವ ಆ ಗಂಡನ ಪ್ರಶ್ನೆಗೆ ದಾರುಲ್ ಉಲೂಮ್ ಉತ್ತರಿಸುತ್ತ, ಆ ವ್ಯಕ್ತಿಯ ಪತ್ನಿ ಯಾವುದೇ ಧರ್ಮವನ್ನು ನಂಬದಿದ್ದರೆ, ಆಕೆ ನಾಸ್ತಿಕ / ಕಾಫಿರ್ ಎಂದು ಅರ್ಥ ಎಂದು ಹೇಳಿದರು. ಆಕೆ ಅಲ್ಲಾನನ್ನು ನಂಬುವಳೇ ಅಥವಾ ಇಲ್ಲವೇ ಎಂದು ಸ್ಪಷ್ಟವಾಗಿ ಕೇಳಬೇಕು ಮತ್ತು ಅವಳು ನಂಬಲು ನಿರಾಕರಿಸಿದರೆ, ತಕ್ಷಣವೇ ಆಕೆಯಿಂದ ದೂರವಾಗಬೇಕು ಎಂದು ಉತ್ತರಿಸಲಾಗಿದೆ.
ವಲೀಮಾ (ಮದುವೆ) ಕಾರ್ಡ್ ನಲ್ಲಿ ದುಲ್ಹನ್ (ವಧುವಿನ) ಹೆಸರು
ಇಸ್ಲಾಮೇತರ ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನೆಗಳ ಹೊರತಾಗಿ, ಮಜಹಬಿ ಹುಡುಗಿಯರು/ಮಹಿಳೆಯರ ಬಗ್ಗೆಯೂ ಈ ಸೈಟ್ನಲ್ಲಿ ಹಲವು ಪ್ರಶ್ನೆಗಳಿವೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಮದುವೆ ಕಾರ್ಡ್ನಲ್ಲಿ ತನ್ನ ಭಾವಿ ಹೆಂಡತಿಯ ಹೆಸರನ್ನು ಮುದ್ರಿಸಬಹುದೇ ಅಥವಾ ಇಲ್ಲವೇ ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಉತ್ತರವಾಗಿ ದಾರುಲ್ ಉಲೂಮ್ ದೇವ್ಬಂದ್, ದಾವತ್ ಪತ್ರದಲ್ಲಿ ಹೆಂಡತಿಯ ಹೆಸರನ್ನು ಬರೆಯಬಾರದು ಎಂದು ಹೇಳಿದರು.
ಬ್ಯಾಂಕ್ನಲ್ಲಿ ಕೆಲಸ ಮಾಡುವ ವ್ಯಕ್ತಿಯ ಮನೆಯಲ್ಲಿ ನಿಕಾಹ್ (ಮದುವೆ)
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುಡುಗಿಯ ತಂದೆ ಕೆಲಸ ಮಾಡುತ್ತಿದ್ದಾನೆ, ಆ ಕುಟುಂಬದ ಹುಡುಗಿಯನ್ನ ಮದುವೆಯಾಗುವ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕೇ? ಎಂಬುದು ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ, ದಾರುಲ್ ಉಲೂಮ್ ಪರವಾಗಿ, ಹರಾಮ್ ಹಣವನ್ನು ಗಳಿಸುವ ಜನರಿಗೆ ನೈತಿಕತೆಯ ಕೊರತೆಯಿದೆ, ಆದ್ದರಿಂದ ಅಂತಹ ಸಂಬಂಧಗಳಿಂದ ದೂರವೇ ಇರಬೇಕು ಎಂದು ಹೇಳಲಾಗಿದೆ.
ಮುಸ್ಲಿಂ ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳಬಹುದೇ?
ಇಸ್ಲಾಮಿಕ್ ಶಿಕ್ಷಣಕ್ಕೆ ಸಂಬಂಧಿಸಿದ ಸೈಟ್ನಲ್ಲಿ ಹಸ್ತಮೈಥುನದ ಬಗ್ಗೆಯೂ ಪ್ರಶ್ನೆಗಳು ಬಂದಿವೆ. ಷರಿಯಾ ಕಾನೂನಿನ ಪ್ರಕಾರ ಮುಸ್ಲಿಂ ಹುಡುಗಿ ಅಥವ ಮಹಿಳೆ ಹಸ್ತಮೈಥುನ ಮಾಡಿಕೊಳ್ಳಬಹುದೇ ಅಥವಾ ಇಲ್ಲವೇ? ಎಂದು ಕೇಳಲಾಗಿದೆ. ಯಾವುದೇ ಮುಸ್ಲಿಂ ಹುಡುಗಿ ಇಂತಹ ಅಪರಾಧಗಳನ್ನು ಮಾಡುವುದನ್ನು ತಡೆಯಬೇಕು ಎಂದು ದೇವ್ಬಂದ್ ಆ ಪ್ರಶ್ನೆಗೆ ಉತ್ತರಿಸಿದೆ.
ಸಂಭೋಗದ ನಂತರ ಸ್ನಾನ ಮಾಡಬೇಕೇ ಅಥವ ಬೇಡವೇ?
ಈ ಪ್ರಶ್ನೆಯನ್ನು ಮಹಿಳೆಯೊಬ್ಬರು ಕೇಳಿದ್ದಾರೆ. ವಿವಾಹಿತ ಮಹಿಳೆ ಕೇವಲ ತೃಪ್ತಿಗಾಗಿ ತನ್ನ ಬೆರಳನ್ನು ಆ ಜಾಗಕ್ಕೆ ಸ್ಪರ್ಶಿಸಿದರೆ ಮತ್ತು ಯಾವುದೇ ದ್ರವವು (ವೀರ್ಯ) ಹೊರಬರದಿದ್ದರೆ ಸ್ನಾನ ಮಾಡುವುದು ಅಥವಾ ಆ ಭಾಗವನ್ನ ಸ್ವಚ್ಛಗೊಳಿಸುವುದು ಅಗತ್ಯವೇ? ಎಂದು ಆಕೆ ಕೇಳಿದ್ದಾಳೆ. ಪ್ರತಿಕ್ರಿಯೆಯಾಗಿ, ಖಾತೂನ್ ಯಾವುದೇ ಬಯಕೆಯಿಲ್ಲದೆ ಯೋನಿಯೊಳಗೆ ಬೆರಳನ್ನು ಸೇರಿಸಿದರೆ, ಅದರಿಂದ ಏನೂ ಫೀಲ್ ಆಗದಿದ್ದರೆ ಸ್ನಾನ ಮಾಡುವ ಅಗತ್ಯವಿಲ್ಲ ಎಂದು ಉತ್ತರಿಸಲಾಗಿದೆ. ಆದರೆ ಪತಿ ಈ ಕೆಲಸವನ್ನು (ಯೋ ನಿ ಯೊಳಗೆ ಬೆರಳು ಹಾಕಿ ಬಳಿಕ ಸೆ ಕ್ಸ್) ಮಾಡಿದ್ದರೆ, ನಂತರ ಸ್ನಾನ ಮಾಡುವುದು ಅವಶ್ಯಕ ಎಂದು ಉತ್ತರಿಸಲಾಗಿದೆ
ಸಹೋದರಿಯ ಮಾಡರ್ನ್ ಶಿಕ್ಷಣದ ಬಗ್ಗೆ ಪ್ರಶ್ನೆ
ಈ ಸೈಟ್ನಲ್ಲಿ ಒಬ್ಬ ವ್ಯಕ್ತಿ ತನ್ನ 14 ವರ್ಷದ ಸಹೋದರಿಯ ಬಗ್ಗೆ ಪ್ರಶ್ನಿಸುತ್ತ ತನ್ನ ಸಹೋದರಿ ಆಧುನಿಕ ಶಿಕ್ಷಣವನ್ನು ತೆಗೆದುಕೊಳ್ಳುತ್ತಿದ್ದಾಳೆ ಮತ್ತು ಇಸ್ಲಾಂನ ಸೂಚನೆಗಳನ್ನು ಅನುಸರಿಸುತ್ತಿಲ್ಲ ಬಳಿಕ ಆಕೆಯನ್ನ ಇಸ್ಲಾಮಿಕ್ ಇನ್ಸ್ಟಿಟ್ಯೂಟ್ಗೂ ಕಳುಹಿಸಲಾಯಿತು. ಈ ಪ್ರಶ್ನೆಯನ್ನು ಕೇಳಿದ ದಾರುಲ್ ಉಲೂಮ್, ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ಸಹೋದರಿ ಶೀಘ್ರದಲ್ಲೇ ಇಸ್ಲಾಮಿಕ್ ರೂಢಿಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ ಎಂದು ಉತ್ತರಿಸಿದೆ.
ವಿವಾದಿತ ಫತ್ವಾಗಳಿಗೆ ಹೆಸರುವಾಸಿಯಾಗಿದೆ ದಾರುಲ್ ಉಲೂಮ್ ದೇವ್ಬಂದ್
ಇಸ್ಲಾಮಿಕ್ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸ್ಥಾಪಿಸಲಾದ ದಾರುಲ್ ಉಲೂಮ್ ದೇವ್ಬಂದ್ ಮುಸ್ಲಿಮರಲ್ಲಿ ಬಹಳ ಪ್ರಸಿದ್ಧವಾದ ಶಿಕ್ಷಣ ಸಂಸ್ಥೆಯಾಗಿದೆ. ಇದು ಉತ್ತರ ಪ್ರದೇಶದ ಸಹರಾನ್ಪುರದಲ್ಲಿದೆ ಮತ್ತು ವಿವಾದಾತ್ಮಕ ಫತ್ವಾಗಳಿಗೆ ಹೆಸರುವಾಸಿಯಾಗಿದೆ. 2018ರಲ್ಲಿ ಸಿಸಿಟಿವಿ ಅಳವಡಿಸುವುದನ್ನು ಇವರು ವಿರೋಧಿಸಿದ್ದರು. ಅದೇ ರೀತಿ ಮಹಿಳಾ ಫುಟ್ಬಾಲ್ ನೋಡಿಯೂ ಈ ಮಂದಿ ಪ್ರತಿಭಟನೆ ನಡೆಸಿದ್ದರು. ಇಷ್ಟು ಮಾತ್ರವಲ್ಲದೆ, ಅಂಗಡಿಯವನು ಬಳೆಗಳನ್ನು ಮಾರುವಾಗ ಆ ಬಳೆಗಳನ್ನ ಮಹಿಳಯರ ಕೈಗೆ ಹಾಕುವಾಗಲೂ ಮಹಿಳೆಯನ್ನು ಮುಟ್ಟಬಾರದು ಎಂದು ಒಮ್ಮೆ ಈ ಸ್ಥಳದಿಂದ ಫತ್ವಾ ಹೊರಡಿಸಲಾಗಿತ್ತು. ಇತ್ತೀಚೆಗಷ್ಟೇ ‘ದತ್ತು ಪಡೆದ ಮಗು ವಾರಸುದಾರನಾಗುತ್ತೇನೋ ಇಲ್ಲವೋ’ ಎಂಬ ಫತ್ವಾ ಹೊರಡಿಸಿ ವಿವಾದಕ್ಕೀಡಾಗಿತ್ತು.