ಲಕ್ಷಾಂತರ ವರ್ಷಗಳ‌ ಹಿಂದೆ ಕಣ್ಮರೆಯಾದ ಡೈನೋಸಾರಸ್ ಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರಿಗೆ ಗೊತ್ತಿತ್ತು: ಬಯಲಾಯ್ತು ಅಚ್ಚರಿಯ ರಹಸ್ಯ

in Uncategorized 3,642 views

ಡೈನೋಸಾರ್‌‌ಗಳ ಆವಿಷ್ಕಾರಕ್ಕೆ ಸಂಬಂಧಿಸಿದ ಕೆಲವು ಅಚ್ಚರಿಯ ಸಂಗತಿಗಳು ಬಹಿರಂಗಗೊಂಡಿದ್ದು, ಇದು ಸುಮಾರು 800 ವರ್ಷಗಳ ಹಿಂದೆಯೇ ಹಿಂದೂಗಳಿಗೆ ಈ ಜೀವಿಗಳ ಬಗ್ಗೆ ತಿಳಿದಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ಹೌದು, ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯದ ಗೋಡೆಗಳ ಮೇಲೆ ಕೆತ್ತಿದ ಡೈನೋಸಾರ್ ಕೆತ್ತನೆಗಳು ಕಂಡುಬಂದಿವೆ, ಇದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.

Advertisement

ವಾಸ್ತವವಾಗಿ, ಆಧುನಿಕ ವಿಜ್ಞಾನವು 19 ನೇ ಶತಮಾನದಲ್ಲಿ ಡೈನೋಸಾರ್‌ಗಳೆಂಬ ಪ್ರಾಣಿಗಳಿದ್ದವು ಅಂತ ಅವುಗಳ ಅಸ್ತಿತ್ವದ ಬಗ್ಗೆ ಮೊದಲು ಹೇಳಲಾಗಿತ್ತು ಆದರೆ ಅಂಕೋರ್ ವಾಟ್‌ನ ಈ ದೇವಾಲಯದ ಮೇಲೆ 11 ನೇ ಶತಮಾನದಲ್ಲೇ ಡೈನೋಸಾರಸ್ ಕೆತ್ತನೆಗಳನ್ನ ನಿರ್ಮಿಸಲಾಗಿತ್ತು. ದೇವಾಲಯದ ಗೋಡೆಗಳ ಮೇಲೆ ಕೆತ್ತಿದ ಈ ನಿಖರವಾದ ಆಕಾರಗಳನ್ನ ನೋಡಿದರೆ ಆ ಸಮಯದಲ್ಲಿ ಜನರು ಡೈನೋಸಾರ್‌ಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು ಎಂಬುದನ್ನು ಸಾಬೀತುಪಡಿಸುತ್ತದೆ, ಆ ಪ್ರಾಣಿಯ ಬಗ್ಗೆ ಅವರಿಗೆ ಗೊತ್ತಿದ್ದಾಗ ಮಾತ್ರ ಅದನ್ನು ಅವರು ದೇವಾಲಯದ ಗೋಡೆಗಳ ಮೇಲೆ ಚಿತ್ರಿಸಬಹುದಲ್ಲವೇ?

ಈ ದೇವಾಲಯದಲ್ಲಿರುವ ಡೈನೋಸಾರ್ ಗಳ ಚಿತ್ರಗಳನ್ನ ನೋಡಿದರೆ ಆಗಿನ ಕಾಲದಲ್ಲಿ ಅಂದರೆ 11 ನೆಯ ಶತಮಾನದ ರಾಜರುಗಳು ಹಾಗು ಜನರಿಗೆ ಈ ಹಿಂದೆ ಲಕ್ಷಾಂತರ ವರ್ಷಗಳ ಹಿಂದೆ ಈ ಜೀವಿಗಳು ಜೀವಿಸಿದ್ದವು ಹಾಗು ಅವುಗಳ ಆಕಾರ ಹೇಗಿತ್ತು ಎಂಬುದೂ ತಿಳಿದಿತ್ತು‌ ಅನ್ನೋದು ಅರ್ಥವಾಗುತ್ತದೆ. 11 ನೆಯ ಶತಮಾನದಲ್ಲಿ ಡೈನೋಸಾರ್ ಗಳು ಇಲ್ಲಿದಿರಬಹುದು ಆದರೆ ನಮ್ಮ ಪೂರ್ವಜರು ಸೃಷ್ಟಿಯ ಸಮಸ್ತ ಚರಾಚರ ಜೀವಿಗಳ ಬಗ್ಗೆಯೂ ತಿಳಿದಿದ್ದರು ಹಾಗು ಅವುಗಳ ಬಗ್ಗೆ ಮುಂಬರುವ ಪೀಳಿಗೆಗಳಿಗೂ ಮಾಹಿತಿ ನೀಡಿದ್ದರು‌ ಅನ್ನೋದು ಈ ದೇವಾಲಯಗಳ ಕೆತ್ತನೆಗಳಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ.

ಅಂಕೋರ್ ವಾಟ್ ವಿಶ್ವದ ಅತಿ ದೊಡ್ಡ ಹಿಂ-ದೂ ಧಾರ್ಮಿಕ ಸ್ಥಳವಾಗಿದೆ. ಭಗವಾನ್ ವಿಷ್ಣುವಿನ ಈ ದೇವಾಲಯವು ಕಾಂಬೋಡಿಯಾದ ಅಂಕೋರ್ ವಾಟ್ ನಲ್ಲಿದೆ, ಇದನ್ನು ಸಾಮ್ರಾಟ ಸೂರ್ಯವರ್ಮನ್ II ​ ನಿರ್ಮಿಸಿದ್ದ.

ಹಿಂದಿನ ರಾಜರುಗಳು ಸಾಮಾನ್ಯವಾಗಿ ಶಿವ ದೇವಾಲಯಗಳನ್ನು ನಿರ್ಮಿಸುತ್ತಿದ್ದರು, ಆದರೆ ಮೊಟ್ಟಮೊದಲ ಬಾರಿಗೆ ಹಿಂದೂ ರಾಜನೊಬ್ಬ ವಿಷ್ಣುವಿನ ಬೃಹತ್ ದೇವಾಲಯವನ್ನು ನಿರ್ಮಿಸಿದ್ದು ಇದೇ ಮೊದಲು ಎಂದು ಹೇಳಲಾಗುತ್ತದೆ.

ಬೌದ್ಧಧರ್ಮದ ಹೆಚ್ಚುತ್ತಿದ್ದ ಪ್ರಭಾವದ ಮಧ್ಯೆ 14 ನೇ ಶತಮಾನದಲ್ಲಿ ಈ ದೇವಾಲಯ ಸಂಕೀರ್ಣದಲ್ಲಿ ಭಗವಾನ್ ಬುದ್ಧನ ಪ್ರತಿಮೆಗಳನ್ನು ಸ್ಥಾಪಿಸಲಾಯಿತು. ನಂತರದ ಬೌದ್ಧ ಸನ್ಯಾಸಿಗಳು ಇಲ್ಲಿ ವಾಸವಾಗಿದ್ದರು ಎಂದು ನಂಬಲಾಗಿದೆ.

ವಾಸ್ತುಶಾಸ್ತ್ರದ ದೃಷ್ಟಿಯಿಂದ ಈ ವಿಶಾಲ ರಹಸ್ಯಮಯ ದೇವಾಲಯ ಅದ್ವೀತಿಯ ಮಂದಿರವೆಂದೇ ಹೇಳಲಾಗುತ್ತದೆ. ತಜ್ಞರು ಹೇಳುವ ಪ್ರಕಾರ ಈ ಮಂದಿರ ತನ್ನ ಒಡಲಲ್ಲಿರುವ ರಹಸ್ಯಗಳ ಕಾರಣ ಇವುಗಳನ್ನ ಈಜಿಪ್ತಿನ ಪಿರಾಮಿಡ್ ಗಳಿಗೂ ಹೋಲಿಸಲಾಗುತ್ತದೆ.

Advertisement
Share this on...