ಅಪ್ಪಿತಪ್ಪಿಯೂ ಈ ರೀತಿಯ ಗಿಡಗಳನ್ನು ನಿಮ್ಮ ಮನೆಯಲ್ಲಿ ಅಥವ ಹಿತ್ತಲಲ್ಲಿ ಬೆಳೆಸಬೇಡಿ..! ಇದರಿಂದ ತಪ್ಪಿದ್ದಲ್ಲ ಅಪಾಯ

in Helath-Arogya/Kannada News/News 535 views

ಸಾಮಾನ್ಯವಾಗಿ ಜನರು ತುಳಸಿ ಗಿಡವನ್ನು ಮತ್ತು ಹಣದ ಗಿಡ ಮನಿ ಪ್ಲಾಂಟನ್ನು ಮನೆ ಹತ್ತಿರ ಬೆಳೆಸುತ್ತಾರೆ. ಯಾಕೆಂದರೆ ಶಾಸ್ತ್ರದ ಪ್ರಕಾರ ಈ ಗಿಡಗಳು ಸಮೃದ್ಧಿ ಮತ್ತು ಒಳ್ಳೆಯ ಅದೃಷ್ಟವನ್ನು ಜೀವನದಲ್ಲಿ ತರುತ್ತವೆಂದು. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತು. ಕೆಲವು ರೀತಿಯ ಗಿಡಗಳನ್ನು ಮನೆಯ ಹತ್ತಿರ ಬೆಳೆಸಬಾರದು ಅಂತ. ಯಾಕೆ ಅಂದರೆ ವೇದ, ವಿಜ್ಞಾನದ ಪ್ರಕಾರ ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವೇಶ ಮಾಡುತ್ತವೆ ಎಂದು.

Advertisement

ಫೇನ್ ಶೇಯ್ ಪ್ರಕಾರ ಜೀವಂತವಾಗಿರುವ ಸಸ್ಯಗಳು ಮನೆಯ ಹತ್ತಿರ ಬೆಳೆಸುವುದರಿಂದ ಶಕ್ತಿಯನ್ನು ಸಮಾನವಾಗಿ ವಿಸ್ತರಿಸುವಂತೆ ಮಾಡುತ್ತವೆ. ನಿಮ್ಮ ಮನೆಯನ್ನು ವಾಸ್ತು ಸ್ನೇಹಿಯಾಗಿ ಮಾಡಿಕೊಳ್ಳಬಹುದು. ಅದಕ್ಕೆಂದೇ ಇಲ್ಲಿ ಕೆಲವು ಸಲಹೆಗಳಿವೆ. ಅವುಗಳೆಂದರೆ ಕೆಲವು ಗಿಡಗಳನ್ನು ನೀವು ಮನೆಯಲ್ಲಿ ಇಟ್ಟು ಬೆಳೆಸುವುದನ್ನು ತಡೆಗಟ್ಟಬೇಕು ಯಾವುದು ಅಂತ ಗೊತ್ತಾ..?


ಕಳ್ಳಿ ಗಿಡ ಅಥವಾ ಅದರ ರೀತಿಯಲ್ಲಿ ಹೋಲುವ ಮುಳ್ಳಿರುವ ಗಿಡಗಳನ್ನು ಎಂದಿಗೂ ಸಹ ಮನೆಯಲ್ಲಿಟ್ಟು ಬೆಳೆಸಬಾರದು. ಬೋನ್ಸಾಯ್ ಗಿಡ ವಾಸ್ತುವಿನ ಪ್ರಕಾರ ಕೆಂಪು ಹೂಗಳನ್ನು ಬಿಡುವ ಗಿಡಗಳನ್ನು ಮತ್ತು ಬೋನ್ಸಾಯ್ ಅಂತಹ ಗಿಡಗಳನ್ನು ಮನೆಯೊಳಗೆ ಇಟ್ಟು ಬೆಳೆಸಬಾರದು. ಆದರೂ ಸಹ ನೀವು ಅವುಗಳನ್ನು ನಿಮ್ಮ ಮನೆಯ ಹೊರಗೆ ಇರುವ ಸ್ಥಳದಲ್ಲಿ, ಉದ್ಯಾನವನದಲ್ಲಿ ಜಾಗವಿದ್ದರೆ ಬೆಳೆಸಬಹುದು.

ಹುಣಸೇ ಮರದಲ್ಲಿ ದೆವ್ವಗಳು ಅಂದರೆ ಪ್ರೇತಾತ್ಮಗಳು ವಾಸಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಇಂತಹ ಮರಗಳು ಇರುವ ಸ್ಥಳಗಳಲ್ಲಿ ಮನೆ ಮತ್ತು ಕಟ್ಟಡಗಳನ್ನು ನಿರ್ಮಿಸಬಾರದು. ಅವು ವಾಸ ಮಾಡುವುದಕ್ಕೆ ಯೋಗ್ಯವಲ್ಲ. ಅಲ್ಲಿ ಅತಿ ಹೆಚ್ಚಾಗಿ ನಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ.


ಒಣಗಿದ ಮತ್ತು ಬಾಡಿ ಹೋದ ಗಿಡಗಳನ್ನು ಎಂದಿಗೂ ಸಹ ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಾಗೆಯೇ ಒಣಗಿ ಬಾಡಿ ಹೋದ ಹೂವುಗಳು ಸಹ ದುರದೃಷ್ಟ ತರುತ್ತವೆ ಎಂದು ಪರಿಗಣಿಸಲಾಗಿದೆ. ಮುಳ್ಳಿರುವ ಮರದ ಜೊತೆಗೆ ಬಾಬುಲ್ ಗಿಡವನ್ನು ಮನೆಯಲ್ಲಿಟ್ಟು ಬೆಳೆಸಬಾರದು. ಅವು ಮನೆಗಳಲ್ಲಿ ಜಗಳವನ್ನು ಸೃಷ್ಟಿಯಾಗುವಂತೆ ಮಾಡುತ್ತವೆ ಎಂದು ನಂಬಲಾಗಿದೆ. ಹತ್ತಿ ಗಿಡ, ರೇಷ್ಮೆ ಹತ್ತಿ ಗಿಡ ಮತ್ತು ತಾಳೆ ಮರವನ್ನು ಮನೆಯ ಹತ್ತಿರ ಬೆಳೆಸಬಾರದು. ಇವುಗಳನ್ನು ಮನೆಯ ಸುತ್ತ-ಮುತ್ತ ಬೆಳೆಸಿದರೆ ಮಂಗಳಕರವಲ್ಲ ಎಂದು ಪರಿಗಣಿಸಿದ್ದಾರೆ. ಮನೆಯ ಉತ್ತರ-ಪೂರ್ವ ದಿಕ್ಕಿನ ಗೋಡೆಗಳಿಗೆ ಯಾವುದೇ ಗಿಡ ಮತ್ತು ಮರ ಅದು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಮನೆಯ ಪೂರ್ವ, ಉತ್ತರ ದಿಕ್ಕಿನ ಗೋಡೆಗಳಿಗೆ ತಾಗುವಂತೆ ಬೆಳೆಸಬಾರದು.

ಪೂರ್ವ ಮತ್ತು ಉತ್ತರ ದಿಕ್ಕಿನ ದೊಡ್ಡದಾದ ಮತ್ತು ಉದ್ದನೆಯ ಮರಗಳನ್ನು ಬೆಳೆಸಬಾರದು ಅದು ನಕಾರಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ. ನುಗ್ಗೆಕಾಯಿ ಮರವನ್ನು ಮನೆಯ ಬಳಿ ಬೆಳೆಸಬಾರದು ಅದು ಒಳ್ಳೆಯದಲ್ಲ. ಅದರ ಜೊತೆಗೆ ಮುಳ್ಳಿರುವ ಗಿಡಗಳು, ಗುಲಾಬಿ ಗಿಡ ಮತ್ತು ಅಂಟು, ಹಾಲು ಬರುವ ಯಾವುದೇ ಗಿಡ ಮತ್ತು ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು. ಅವು ಕೂಡ ಅಷ್ಟಾಗಿ ಒಳ್ಳೆಯದಲ್ಲ ಅಂತ ಪರಿಗಣಿಸಲಾಗಿದೆ.

ಸುಷ್ಮಿತಾ

Advertisement
Share this on...