ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರಗಳಿಂದ ಹಿಂದೂಯೇತರರು (ಮುಸ್ಲಿಮರು) ದೂರವಿರಬೇಕು ಎಂದು ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
Advertisement
ಮಂಗಳೂರು: ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರಗಳಿಂದ ಹಿಂದೂಯೇತರರು (ಮುಸ್ಲಿಮರು) ದೂರವಿರಬೇಕು ಎಂದು ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಈ ಕುರಿತಾಗಿ ಮಾತನಾಡಿ ಹೇಳಿಕೆ ಬಿಡುಗಡೆ ಮಾಡಿರುವ ಡಾ ಭರತ್ ಶೆಟ್ಟಿಯವರು ಹಿಂದೂ ಸಮಾಜದ ಪಾರಂಪರಿಕ ಪುಣ್ಯ ಕ್ಷೇತ್ರಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಇಲ್ಲಿನ ಜಾತ್ರಾ ಮಹೋತ್ಸವದ ಸಂದರ್ಭ ಮಾಡುತ್ತಿದ್ದ ವ್ಯಾಪಾರ ವಹಿವಾಟುಗಳನ್ನ ಇನ್ನು ಮುಂದೆ ಹಿಂದೂಯೇತರ (ಮುಸ್ಲಿಂ) ವ್ಯಾಪಾರಿಗಳು ಕೈ ಬಿಡಬೇಕು, ಇದು ಹಿಂದೂ ಸಮಾಜದ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಇಲ್ಲೆಲ್ಲಾ ಹಿಂದೂಗಳಿಗೆ ಮಾತ್ರ ಅವಕಾಶವಿರಬೇಕು. ಇತರಡೆ ಮಾಡಿಕೊಂಡು ಹೋಗುವುದಾದರೆ ಅಭ್ಯಂತರವಿಲ್ಲ ಎಂದಿದ್ದಾರೆ.
ಧಾರ್ಮಿಕ ನಂಬಿಕೆಯಿಂದ ಹಿಂದೂ ಸಮಾಜದವರು ದೈವ ದೇವರ ದರ್ಶನಕ್ಕೆ ಬರುತ್ತಾರೆ. ಇಂತಹ ಸಂದರ್ಭ ಮೂರ್ತಿ ಪೂಜೆ ನಂಬದ, ನಿತ್ಯ ಅವಹೇಳನ ಮಾಡುತ್ತಾ ,ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಚಿತ್ರಿಸುವ ಹಿಂದೂಯೇತರ ಜನರಿಂದ ದೇವರಿಗೆ ಹೂ, ಹಣ್ಣು, ಕಾಯಿ ಮತ್ತಿತರ ವಸ್ತುಗಳನ್ನು ಕೊಂಡು ಅರ್ಪಿಸಿದರೆ ದೇವರೂ ಸ್ವೀಕರಿಸಲಾರ. ಇಲ್ಲಿ ಕೇವಲ ದುಡ್ಡು ಮಾಡುವ ಸ್ಥಳವಲ್ಲ. ಬದಲಾಗಿ ನಂಬಿಕೆ, ಶ್ರದ್ಧೆಯೂ ಇರಬೇಕು. ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆ ಅನ್ವಯ ದೇವಸ್ಥಾನ ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರದ ಸುತ್ತ ಹಿಂದೂ ಬಾಂಧವರಿಗೆ ಮಾತ್ರ ಇರುವ ಅವಕಾಶವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಮುಸ್ಲಿಂರ ಕಟ್ಟರ್ ಪದ್ದತಿಯಾದ ಹಲಾಲ್ ನಿಷೇಧ ಹೋರಾಟ ಸಂದರ್ಭ ಮುಸ್ಲಿಂ ಸಮಾಜಕ್ಕೆ ಬೆಂಬಲ ನೀಡಿದವರು, ಇದೀಗ ಹಿಂದೂಗಳಿಗೂ ವ್ಯಾಪಾರಕ್ಕೆ ಬೆಂಬಲ ನೀಡಿ ತಮ್ಮ ಜಾತ್ಯಾತೀತತೆಯನ್ನು ಸಾಬೀತು ಪಡಿಸಬೇಕು. ಇಂದು ಹಿಂದೂ ಧರ್ಮದವರು ಮಾಡುತ್ತಿರುವ ಅಭಿಯಾನದ ವಿರುದ್ದ ದೂರು ದಾಖಲಿಸಿದವರು ಮುಂದೆ ದೇವಸ್ಥಾನ ಸಮಿತಿ, ವ್ಯಾಪಾರದಲ್ಲೂ ಮೀಸಲಾತಿ ತನ್ನಿ ಎಂದರೂ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳವು ಹಿಂದೂ ಆಂಗಡಿಗಳಿಗೆ ಭಗಧ್ವಜ ಕಟ್ಟಿರುವುದು ಅಪರಾಧವಲ್ಲ.
ಸರಕಾರದ ಹಿಂದೂ ವಿರೋಧಿ ನಡೆಯನ್ನು ಸವಾಲಾಗಿ ಸ್ವೀಕರಿಸಿ ನ್ಯಾಯಾಲಯದ ಮುಂದೆ ಪ್ರಶ್ನಿಸಿ ನ್ಯಾಯಾಲಯಕ್ಕೂ ಮನವರಿಕೆ ಮಾಡಿ ತಡೆಯಾಜ್ಞೆ ತಂದಿರುವುದು ಹಿಂದೂ ಸಮಾಜಕ್ಕೆ ಸಿಕ್ಕಿದ ಜಯವಾಗಿದೆ.
ನ್ಯಾಯಲಯವೂ ಇದನ್ನು ಪರಿಗಣಿಸಿ ತಡೆ ನೀಡಿದ್ದು ಹಿಂದೂಗಳ ವಿರುದ್ದ ಹೋದ ಸರಕಾರಕ್ಕೂ ನ್ಯಾಯಾಲಯದ ಅದೇಶದಿಂದ ಮುಖಭಂಗವಾಗಿದೆ ಎಂದು ತಿಳಿಸಿದ್ದಾರೆ.