ಜೂಜಿನಲ್ಲಿ ಮಹಿಳೆಯನ್ನ ಸೋತ ಬಗ್ಗೆ ನೀವು ಕೇಳಿರುತ್ತೀರ ಆದರೆ ಈ ಸುದ್ದಿ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ಓದಿದರೂ ನೀವು ನಂಬುವುದಿಲ್ಲ. ಹೌದು, ಇಂತಹ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತನ್ನ ಸ್ನೇಹಿತನಿಗೆ ಇಪ್ಪತ್ತು ದಿನಗಳ ಕಾಲ ಸಾಲವಾಗಿ ನೀಡಿದ್ದು, ಬಳಿಕ ಆ ಸ್ನೇಹಿತ ಪತ್ನಿಯನ್ನು ಹಿಂತಿರುಗಿಸದಿದ್ದಾಗ ಪತ್ನಿಯನ್ನ ಸಾಲ ಕೊಟ್ಟ ಪತಿ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ಈ ವ್ಯಕ್ತಿ ಕಳೆದ ವರ್ಷದಿಂದ ತನ್ನ ಪತ್ನಿಯನ್ನು ಮನೆಗೆ ಕರೆತರುವಂತೆ ಪೊಲೀಸರಿಗೆ ಮನವಿ ಮಾಡುತ್ತಿದ್ದಾನೆ. ಇದರಲ್ಲಿನ ಸಮಸ್ಯೆಯೂ ರಾಜಕೀಯವಾಗಿದೆ, ವಾಸ್ತವವಾಗಿ ಈ ವಿಷಯ ಉತ್ತರಾಖಂಡದ ಉಧಮ್‌ನಗರಕ್ಕೆ ಸಂಬಂಧಿಸಿದೆ, ಅಲ್ಲಿ ಯುವಕನೊಬ್ಬ ತನ್ನ ಹೆಂಡತಿಯನ್ನು ತನ್ನ ಸ್ನೇಹಿತನಿಗೆ ಸಾಲವಾಗಿ ಕೊಟ್ಟಿದ್ದ.
ಜನರು ಹಣವನ್ನು ಅಥವಾ ಯಾವುದೇ ಕಾರು ಅಥವಾ ವಸ್ತುವನ್ನು ಸಾಲವಾಗಿ ನೀಡುವುದನ್ನು ನೀವು ಕೇಳಿರುತ್ತೀರ, ಆದರೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಯಾರಿಗಾದರೂ ಸಾಲ ನೀಡಬಹುದೇ? ಅಂತಹ ಸುದ್ದಿಯನ್ನ ನೀವು ಕೇಳಿದ್ದೀರ? ಈ ವ್ಯಕ್ತಿ ತನ್ನ ಹೆಂಡತಿಯನ್ನು ತನ್ನ ಸ್ನೇಹಿತನಿಗೆ ಸಾಲವಾಗಿ ಯಾಕೆ ನೀಡಿದ ಅನ್ನೋದರ ಹಿಂದಿನ ಕಾರಣವಾದರೂ ಏನು? ಬನ್ನಿ ಇದರ ಬಗ್ಗೆ ನಿಮಗೆ ತಿಳಿಸುತ್ತೇವೆ.
ಮೊರಾದಾಬಾದ್‌ನ ಭೋಜ್‌ಪುರ್ ನಿವಾಸಿಯಾಗಿರುವ ಈತನ ಸ್ನೇಹಿತ ಶಫಿ ಅಹಮದ್ ಚೇರ್ಮನ್ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ, ಆದರೆ ಭೋಜ್‌ಪುರ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು, ಆದ್ದರಿಂದ ಶಫಿ ಅಹಮದ್ ನಸೀಮ್‌ನಿಂದ ಸಾಲ ಕೇಳುವ ಮೂಲಕ ಆತನ ಪತ್ನಿ ರೆಹಮತ್ ಜಹಾನ್ ರನ್ನ ಚುನಾವಣೆಯಲ್ಲಿ ನಿಲ್ಲಿಸಿದ. ಗಮನಿಸುವ ಸಂಗತಿಯೆಂದರೆ ಅಹಮದ್ ಮುಸ್ಲಿಂ ಸಮುದಾಯದ ಹಿಂದುಳಿದ ಜಾತಿಗೆ ಸೇರಿದ್ದ ಗೆಳೆಯನಾಗಿದ್ದ.
ಹೌದು ನೀವು ಸರಿಯಾಗಿ ಓದಿದ್ದೀರಿ, ಸ್ನೇಹಿತನಿಗೆ ಮೊರಾದಾಬಾದ್ ಭೋಜ್‌ಪುರ ಕ್ಷೇತ್ರದಲ್ಲಿ ಚೇರ್ಮನ್ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿತ್ತು. ಅದೃಷ್ಟ ನೋಡಿ ರಹಮತ್ ಜಹಾನ್ ಚುನಾವಣೆಯಲ್ಲಿ ಗೆದ್ದು ಚೇರ್ಮನ್ ಕೂಡ ಆದಳು. ಡೀಲ್ ಪ್ರಕಾರ ಚುನಾವಣೆ ಮುಗಿದ ಮೇಲೆ ಪತ್ನಿಯನ್ನು ವಾಪಸ್ ಕೊಡಬೇಕಿತ್ತು ಆದರೆ ಈಗ ಒಂದು ವರ್ಷ ಕಳೆದರೂ ಇದುವರೆಗೂ ನಸೀಮ್ ಪತ್ನಿಯನ್ನು ಆತನ ಸ್ನೇಹಿತ ವಾಪಸ್ ಕೊಡಲು ನಿರಾಕರಿಸುತ್ತಿದ್ದಾನೆ.
ಆ ಕ್ಷೇತ್ರ ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಸೀಟಾಗಿತ್ತು, ಮುಸ್ಲಿಂ ಸಮುದಾಯದ ಹಿಂದುಳಿದ ಜಾತಿಯ ಸ್ನೇಹಿತ ನಸೀಮ್ ಅಹಮದ್ ಬಳಿ ಸಾಲ ಪಡೆದು ಆತನ ಪತ್ನಿ ರೆಹಮತ್ ಜಹಾನ್ ಳನ್ನ ಚುನಾವಣೆಗೆ ನಿಲ್ಲಿಸಿದ, ಅದೃಷ್ಟ ಯಾವ ರೂಪದಲ್ಲಿ ಬರುತ್ತೆ ನೋಡಿ, ಸಾಲವಾಗಿ ಪಡೆದು ಚುನಾವಣೆಗೆ ತಾನೇ ನಿಲ್ಲಿಸಿದ್ದ ರೆಹಮತ್ ಜಹಾನ್ ಚೇರ್ಮನ್ ಆಗೇ ಬಿಟ್ಟಳು. ಆದರೆ ಈಗ ಶಫಿ ಅಹ್ಮದ್ ತನ್ನ ಸ್ನೇಹಿತನಾದ ನಸೀಮ್‌ಗೆ ಆತನ ಪತ್ನಿಯಾದ ರೆಹಮತ್ ಜಹಾನ್‌ನ್ನ ವಾಪಸ್ ನೀಡಲು ನಿರಾಕರಿಸುತ್ತಿದ್ದು ಈಗ ನಸೀಮ್ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.