“ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಅದು ಪ್ರೀಪ್ಲ್ಯಾನ್ಡ್ ಮರ್ಡರ್”: ಅಮೀರ್ ಖಾನ್ ಸಹೋದರ ಫೈಸಲ್ ಖಾನ್

in Uncategorized 312 views

Enertainment News: ನನ್ನನ್ನು ಬಂಧಿಸಿಡಲಾಗಿತ್ತು, ಹುಚ್ಚನನ್ನಾಗಿ ಮಾಡಿದರು… ಇಷ್ಟಾದರೂ ಅವರ ಮನಸ್ಸಿಗೆ ತೃಪಿ ಸಿಗದಿದ್ದಾಗ ನನ್ನ ಹಿಂದೆ ಬಾಡಿಗಾರ್ಡ್ ಗಳನ್ನೂ ಬಿಟ್ಟರು. ದಿನದ 24 ಗಂಟೆಗಳ ಕಾಲವೂ ನನ್ನ ಮೇಲೆ ನಿಗಾ ಇರಿಸಲಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಸಹೋದರ ಫೈಸಲ್ ಖಾನ್ ಅವರು ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಫೈಸಲ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು (Film Career) ತಮ್ಮ ಸಹೋದರ ಅಮೀರ್ ಖಾನ್ ಅವರೊಂದಿಗೆ ‘ಮೇಲಾ’ (faisal khan interview) ಚಿತ್ರದ ಮೂಲಕ ಪ್ರಾರಂಭಿಸಿದರು. ಆದರೆ ಈಗ ಫೈಸಲ್ ತನ್ನ ಸಹೋದರ ಅಮೀರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.

Advertisement

ಬೆಚ್ಚಿಬೀಳಿಸುವ ಮಾಹಿತಿಯನ್ನ ಬಹಿರಂಗಪಡಿಸಿದ ಅಮೀರ್ ಖಾನ್ ಸಹೋದರ

ಇಂಟರ್‌ವ್ಯೂ ಒಂದರಲ್ಲಿ ಮಾತನಾಡುತ್ತ ಫೈಸಲ್ ಖಾನ್ ಸುಶಾಂತ್ ಸಿಂಗ್ ರಾಜಪೂತ್ (Sushant Singh Rajput) ಸಾವಿನ ಬಗ್ಗೆಯೂ ಬೆಚ್ಚಿಬೀಳಿಸುವ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರನ್ನು ‘ಕೊಲೆ’ ಮಾಡಲಾಗಿದೆ ಎಂದು ಫೈಸಲ್ ಹೇಳಿದ್ದಾರೆ. ಸುಶಾಂತ್ ಸಾವಿನ ಸತ್ಯ ಯಾವತ್ತಿಗೂ ಹೊರ ಬರುವುದಿಲ್ಲ ಎಂಬುದು ನನಗೆ ಗೊತ್ತಿದೆ. ಈ ಪ್ರಕರಣ ಮತ್ತೆ ಯಾವಾಗ ತೆರೆದುಕೊಳ್ಳುತ್ತದೆ ಎಂಬುದನ್ನು ಕಾಲವೇ ಹೇಳಬೇಕು. ಹಲವು ಏಜೆನ್ಸಿಗಳು ಇದರಲ್ಲಿ ಭಾಗಿಯಾಗಿವೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದರೂ ಅನೇಕ ಬಾರಿ ಸತ್ಯ ಹೊರ ಬೀಳದಿರುವುದೂ ಸತ್ಯ. ಎಲ್ಲವೂ ಬೆಳಕಿಗೆ ಬರುವಂತೆ ಸತ್ಯ ಹೊರಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

‘ಸುಶಾಂತ್ ಸಿಂಗ್ ರಾಜಪೂತ್ ಅವರದ್ದು ಆತ್ಮಹತ್ಯೆಯಲ್ಲ ಅದು ಕೊಲೆ’

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜಗತ್ತಿಗೆ ವಿದಾಯ ಹೇಳಿ 2 ವರ್ಷಗಳು ಕಳೆದರೂ ಅವರ ಸಾವಿನ ರಹಸ್ಯ ಇನ್ನೂ ಬಗೆಹರಿದಿಲ್ಲ. ಅಭಿಮಾನಿಗಳೇ ಆಗಿರಲಿ ಅಥವಾ ಸುಶಾಂತ್ ಕುಟುಂಬದ ಸದಸ್ಯರಿಗಾಗಲಿ ನಟನ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ. ಹೀಗಾಗಿ ಅವರ ಸಾವಿನ ಬಗೆಗಿನ ನಿಗೂಢತೆ ಹಾಗೇ ಉಳಿದಿದೆ. ಏತನ್ಮಧ್ಯೆ, ಅಮೀರ್ ಖಾನ್ ಅವರ ಸಹೋದರ ಫೈಸಲ್ ಖಾನ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಈ ರೀತಿಯ ಮಾತುಗಳನ್ನಾಡಿದ್ದು ಇದೀಗ ಬಾಲಿವುಡ್‌ನಲ್ಲಿ ಹಾಗು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಯಾಗಿದೆ.

ಸುಶಾಂತ್ ಸಿಂಗ್ ರಾಜಪೂರ್ ಬಗ್ಗೆ ಫೈಸಲ್ ಖಾನ್ ಹೇಳಿರುವ ವಿಡಿಯೋ ಇಲ್ಲಿದೆ ನೋಡಿ

“ನನ್ನ ತಮ್ಮ ಅಮೀರ್ ಖಾನ್ ನನ್ನ ಜೊತೆ ನಡೆದುಕೊಂಡಿದ್ದನ್ನ ನೆನೆಸಿಕೊಂಡರೆ ಈಗಲೂ ಥರ ಥರ ನಡುಗುತ್ತೇನೆ”: ಕಾಡಿಗೆ ಅಟ್ಟಿದ ಅಮೀರ್ ಖಾನ್ ಬಗ್ಗೆ ಅಣ್ಣ ಹೇಳಿದ್ದೇನು ಕೇಳಿ

ಬಾಲಿವುಡ್ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಅಮೀರ್ ಮತ್ತು ಕುಟುಂಬದೊಂದಿಗಿನ ತನ್ನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆತನನ್ನು ಮನೆಯಲ್ಲಿ ಹೇಗೆ ಲಾಕ್ ಮಾಡಲಾಯಿತು ಮತ್ತು ಬಲವಂತವಾಗಿ ಹೇಗೆ ಔಷಧಿಗಳನ್ನು ನೀಡಲಾಯಿತು ಎಂದು ಅವರು ಹೇಳಿದ್ದಾರೆ. ನವಭಾರತ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಅವರು ಅಮೀರ್ ಅವರನ್ನು ಕ್ಷಮಿಸಿದ್ದರೂ, ಆ ಘಟನೆಯನ್ನು ಮಾತ್ರ ಇಡೀ ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಫೈಸಲ್ ಮಾತನಾಡುತ್ತ, “ಆ ಸಮಯದಲ್ಲಿ ನಾನು ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತಿರಲಿಲ್ಲ, ಏಕೆಂದರೆ ನಾನು ಭೇಟಿಯಾದರೆ ಜಗಳಗಳು ನಡೆದುಬಿಡುತ್ತವೆ ಎಂದು ನಾನು ಭಾವಿಸಿದ್ದೆ, ಹಾಗಾಗಿ ನಾನು ಕುಟುಂಬದಿಂದ ದೂರವಿದ್ದೆ. ಆದರೆ ಅವರು ನಾನು ಹುಚ್ಚನಾಗಿದ್ದಾನೆ ಎಂದು ಹೇಳಿಬಿಟ್ಟರು. ಅವರು ನನಗೆ ಬಲವಂತವಾಗಿ ಔಷಧಿ ಕೊಡಲು ಆರಂಭಿಸಿದರು. ಅಮೀರ್ ನನ್ನನ್ನು 1 ವರ್ಷ ಗೃಹ ಬಂಧನದಲ್ಲಿರಿಸಿದ್ದ‌. ಬಾಡಿಗಾರ್ಡ್ ನ್ನ ನೇಮಿಸಿದ್ದ, ನನ್ನ ಫೋನ್ ಕಸಿದುಕೊಂಡಿದ್ದ, ನನ್ನನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಲಿಲ್ಲ, ಬಲವಂತವಾಗಿ ಔಷಧಿಗಳನ್ನು ನೀಡುತ್ತಿದ್ದರು. ನಾನು 103 ಕೆಜಿ ತಿರುಗಿದೆ. ನಂತರ ಅವರು ನನಗೆ ಸ್ವಲ್ಪ ಸ್ವಾತಂತ್ರ್ಯವನ್ನು ನೀಡಲು ಪ್ರಾರಂಭಿಸಿದರು, ನಂತರ ಅವರು ಬದಲಾಗಿದ್ದಾರೆ ಎಂದು ನಾನು ಭಾವಿಸಿದೆ, ಆದರೆ ಅದು ಆಗಲಿಲ್ಲ”

ಫೈಸಲ್ ಮುಂದೆ ಮಾತನಾಡುತ್ತ, “ನಾನು 2004 ರಲ್ಲಿ ಬಲವಂತವಾಗಿ ಅವರ ಕೈಗೆ ಸಿಕ್ಕಿಬಿದ್ದೆ. ಅಮೀರ್ ಏನೇನು ಮಾಡಿದ್ದನೋ ಅದೆಲ್ಲವೂ ಕಾನೂನುಬಾಹಿರವಾಗಿತ್ತು. ಅವನು ಪೋಲಿಸರೊಡನೆ ಬಂದು ನೀನು ನಡೆಯಬೇಕು, ನೀನು ನಡೆಯದಿದ್ದರೆ ಇಂಜೆಕ್ಷನ್ ಕೊಡಬೇಕಾಗುತ್ತೆ ಎಂದರು. ಹಾಗಾಗಿ ಇದನ್ನೆಲ್ಲ ಮಾಡುವ ಅಗತ್ಯವಿಲ್ಲ ನಾನೇ ನಾನು ಹೊರಡುತ್ತೇನೆ ಎಂದೆ. ನನ್ನನ್ನ ನರ್ಸಿಂಗ್ ಹೋಂಗೆ ಹೋಗಿ ಪರೀಕ್ಷೆ ಮಾಡಿಸುತ್ತಾರೆ, ನಂತರ ವೈದ್ಯರು ಮನೆಗೆ ಹೋಗುವಂತೆ ಹೇಳ್ತಾರೆ ಅಂದುಕೊಂಡೆ, ಆದರೆ ಅವರು ನನ್ನನ್ನು ಹೌಸ್ ಅರೆಸ್ಟ್ ಮಾಡಿಬಿಟ್ಟರು. ಅವರು ನನಗೆ ನೀರಿನಲ್ಲಿ ಇಂಜೆಕ್ಷನ್ ಹಾಕುವ ಮೂಲಕ ಔಷಧಿ ನೀಡಲು ಆರಂಭಿಸಿದರು. ನಾನು 18-18 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದೆ. ಆಗ ನನ್ನ ಜೀವಕ್ಕೂ ಅಪಾಯವಿತ್ತು”

“1 ವರ್ಷದ ನಂತರ ಅಮೀರ್ ನನ್ನನ್ನ ಬಂಧಮುಕ್ತಗೊಳಿಸಿದ. ಅದರ ನಂತರ ನಾನು ಸಾಮಾನ್ಯ ಜೀವನ ನಡೆಸಲು ಆರಂಭಿಸಿದೆ. ಈಗ ಎಲ್ಲವೂ ಸಾಮಾನ್ಯವಾಗಿದೆ ಎಂದು ನಾನು ಭಾವಿಸಿದ್ದೆ, ಆದರೆ 2007 ರಲ್ಲಿ ಒಂದು ದಿನ ಮತ್ತೊಮ್ಮೆ ಅಮೀರ್ ನನಗೆ ಕರೆ ಮಾಡಿ ನನಗೆ ನಿಮ್ಮ ಸಹಿ ಹಕ್ಕುಗಳು ಬೇಕು ಎಂದು ಹೇಳಿದನು. ನೀವು ನಾಳೆ ನ್ಯಾಯಾಲಯಕ್ಕೆ ಹೋಗಬೇಕು ಮತ್ತು ನಿಮಗೆ ಹುಚ್ಚು ಇದೆ ಎಂದು ಹೇಳಬೇಕು, ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆಗ ನಿಮಗೆ ಮಾತ್ರ ಒಬ್ಬ ಗಾರ್ಡಿಯನ್ (ಗಾರ್ಡಿಯನ್) ಸಿಗುತ್ತದೆ, ಆಗ ನಾನು ನಿಮ್ಮ ಸಹಿಯ ಹಕ್ಕನ್ನು ತೆಗೆದುಕೊಳ್ಳುತ್ತೇನೆ, ನಿಮಗೆ ಸಹಿ ಮಾಡೋಕೆ ಸಾಧ್ಯವಿಲ್ಲ ಅಂತ ಹೇಳಬೇಕು ಎಂದನು. ಏನಾಗುತ್ತಿದೆ ಅಂತ ನನಗೆ ಗೊತ್ತೇ ಆಗದೆ ನಾನು ಶಾಕ್ ಆದೆ. ಆ ಸಮಯದಲ್ಲಿ ನಾನು ಹೌದು ಎಂದು ಹೇಳಿದೆ, ಆದರೆ ನಂತರ ನನ್ನ ಕುಟುಂಬವು ನನ್ನನ್ನು ಕೊಲ್ಲಲು ಬಯಸಿದೆ ಎಂದು ನನಗೆ ಅರ್ಥವಾಯಿತು, ಹಾಗಾಗಿ ನಾನು ಮನೆ ಬಿಟ್ಟು ಹೊರಟು ಹೋದೆ” ಎಂದು ಫೈಸಲ್ ಹೇಳಿದ್ದಾರೆ.

ಫೈಸಲ್ ಮುಂದೆ ಮಾತನಾಡುತ್ತ, “ನಾನು ಅಮೀರ್ ಖಾನ್‌ನ್ನ ಕ್ಷಮಿಸಿದ್ದೇನೆ, ಆದರೆ ನನ್ನ ಜೊತೆ ನಡೆದ ಆ ಭಯಾನಕ ಘಟನೆಯನ್ನ ‌ನಾನು ಜೀವನಪರದೊಡ್ ಮರೆಯಲು ಸಾಧ್ಯವಿಲ್ಲ. ಅಮೀರ್ ಖಾನ್ ನನ್ನ ಜೊತೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾನೆ, ಅದನ್ನ ನೆನೆಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ” ಎಂದಿದ್ದಾರೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಶೀಘ್ರದಲ್ಲೇ ಫೈಸಲ್ ನಟ ಮತ್ತು ನಿರ್ದೇಶಕರಾಗಿ ‘ಫ್ಯಾಕ್ಟರಿ’ ಹೆಸರಿನ ಚಲನಚಿತ್ರದೊಂದಿಗೆ ಮತ್ತೆ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ಗಮನಿಸುವ ಅಂಶವೇನೆಂದರೆ, ಫೈಸಲ್ ಖಾನ್ ಈ ಹಿಂದೆ 2007 ರಲ್ಲೇ ಅಮೀರ್ ಖಾನ್ ಮತ್ತು ಆತನ ಕುಟುಂಬದವರ ಮೇಲೆ ಉದ್ದೇಶಪೂರ್ವಕವಾಗಿ ತನಗೆ ಮಾನಸಿಕ ಖಾಯಿಲೆಗೆ ಸಂಬಂಧಿಸಿದ ಔಷಧಿಗಳನ್ನು ನೀಡಿದರು ಮತ್ತು 1 ವರ್ಷ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದರು. ಇದನ್ನು ನೆನಪಿಸಿಕೊಂಡ ಫೈಸಲ್, ಆತನನ್ನು ಬಲವಂತವಾಗಿ ಹುಚ್ಚ ಎಂದು ಘೋಷಿಸುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು. ತನ್ನ ಸಹೋದರ ಅಮೀರ್ ಖಾನ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಕರಣ್ ಜೋಹರ್ ತನ್ನನ್ನು ಅವಮಾನಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

Advertisement
Share this on...