“ಜಗತ್ತಿನಲ್ಲಿ ಇದುವರೆಗೂ ಜನಿಸಿರೋ ಮನುಷ್ಯರೆಲ್ಲಾ & ಈಗ ಹುಟ್ಟೋ ಮಕ್ಕಳೆಲ್ಲಾ ಮುಸ್ಲಿಮರೇ… ಮಹಿಳೆಯರು ಟೈಟ್ ಡ್ರೆಸ್ ಹಾಕ್ಕೋಬಾರದು, ಹಾಕ್ಕೊಂಡ್ರೆ ಅವರ ಮೈಯಲ್ಲಿ….”: #ಫರೀಕ್_ನಾಯಕ್

in Uncategorized 188 views

ಮಲೇಷ್ಯಾದಲ್ಲಿ ಅಡಗಿ ಕೂತಿರುವ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಕ್ ಬಗ್ಗೆ ಮತ್ತು ಆತನ ಚಿತ್ರ ವಿಚಿತ್ರ ಹೇಳಿಕೆಗಳ ಬಗ್ಗೆ ನಿಮಗೆ ಗೊತ್ತೇ ಇದೆ, ಆತ ತನ್ನ ಹೇಳಿಕೆಗಳನ್ನ ಸಮರ್ಥಿಸಿಕೊಳ್ಳೋಕೆ ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುತ್ತಾನೆ. ಈಗ ನಾವು ನಿಮಗೆ ತನ್ನ ತಂದೆಯ ಯೂಟ್ಯೂಬ್ ಪೇಜ್‌ನಲ್ಲಿ ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಆತನ ಮಗ ಫಾರಿಕ್ ಜಾಕಿರ್ ನಾಯಕ್ ಬಗ್ಗೆ ಹೇಳಲಿದ್ದೇವೆ. ಮೂಲಭೂತವಾದದ ವಿಚಾರದಲ್ಲಿ ಈತ ತಂದೆಗಿಂತ ಎರಡು ಹೆಜ್ಜೆ ಮುಂದೇ ಇದ್ದಾನೆ.

Advertisement

ಜಾಕೀರ್ ನಾಯಕ್ ನ ಮಗ ಫರೀಕ್ ಜಾಕಿರ್ ನಾಯಕ್‌ನ ವಿಡಿಯೋವೊಂದು ವೈರಲ್ ಆಗಿದೆ, ಇದರಲ್ಲಿ ಆತನಿಗೆ ”ಮಹಿಳೆಯರಿಗೆ ಮನೆಯ ಹೊರಗೆ ಕೆಲಸ ಮಾಡುವ ಹಕ್ಕಿದೆಯೇ ಅಥವಾ ಇಲ್ಲವೇ?” ಎಂದು ಕೇಳಲಾಗುತ್ತದೆ, ಇದಕ್ಕೆ ಪ್ರತಿಕ್ರಿಯೆಯಾಗಿ ಆತ ಉತ್ತರಿಸುತ್ತ, ”ಇಸ್ಲಾಂನಲ್ಲಿ ಪುರುಷರನ್ನು ಮಾತ್ರ ಸಂಪಾದಿಸಿ‌ ಮನೆ ನಡೆಸುವವ ಎಂದು ಪರಿಗಣಿಸಲಾಗುತ್ತದೆ. ಮದುವೆಗೂ ಮುನ್ನ ಅಪ್ಪ-ಅಣ್ಣನ ಕೆಲಸ, ಮದುವೆಯ ನಂತರ ಗಂಡ-ಮಕ್ಕಳು ಹೆಣ್ಣನ್ನು ನೋಡಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿದೆ. ಮಹಿಳೆಯರು ಕೆಲಸ ಮಾಡುವ ಅಗತ್ಯವಿಲ್ಲ” ಎಂದು ಆತ ಹೇಳುತ್ತಾನೆ.

ಮಹಿಳೆಯರು ಇಸ್ಲಾಂ ಧರ್ಮದ ಯಾವುದೇ ನಿಯಮವನ್ನು ಉಲ್ಲಂಘಿಸದೆ ಕೆಲಸ ಮಾಡಬೇಕು ಮತ್ತು ಯಾವಾಗಲೂ ಹಿಜಾಬ್ ಧರಿಸಬೇಕು. ಸ್ತ್ರೀಯರು ಸಂಪೂರ್ಣ ದೇಹವನ್ನು ಮುಚ್ಚಬೇಕು ಮತ್ತು ಕೈ ಮತ್ತು ಕಣ್ಣುಗಳನ್ನು ಹೊರತುಪಡಿಸಿ ದೇಹದ ಯಾವ ಭಾಗಗಳೂ ಕಾಣಿಸಬಾರದು, ಹಾಗೆಯೇ ಟೈಟ್ ಡ್ರೆಸ್ ಗಳನ್ನ ಧರಿಸಬಾರದು ಮತ್ತು ಅವು ಪುರುಷರಿಗೆ ಆಕರ್ಷಕವಾಗಿ ಕಾಣುವ ರೀತಿಯಲ್ಲಿ ಇರಬಾರದು. ಮಹಿಳೆಯರು ಪುರುಷರೊಂದಿಗೆ ಕೆಲಸ ಮಾಡಬಾರದು” ಎಂದೂ ಆತ ಹೇಳುತ್ತಾನೆ.

ಆತ ಮುಂದೆ ಮಾತನಾಡುತ್ತ,  “ಮಹಿಳೆಯರು ಮದ್ಯಪಾನ, ಅಥವಾ ನೃತ್ಯ, ಹಾಡುಗಾರಿಕೆ ಅಥವಾ ನಟನೆಯಂತಹ ‘ಹರಾಮ್’ ಕೆಲಸಗಳನ್ನು ಮಾಡಬಾರದು, ಏಕೆಂದರೆ ಈ ಕೆಲಸಗಳಲ್ಲಿ ಅವರು ಹಿಜಾಬ್ ಧರಿಸಲು ಸಾಧ್ಯವಾಗುವುದಿಲ್ಲ. ಒಳ್ಳೆಯ ಹೆಂಡತಿಯಾಗಿ ಅಥವಾ ಮಕ್ಕಳಿಗಾಗಿ ಏನು ಮಾಡಬಹುದು ಎಂಬುದೇ ಮಹಿಳೆಯರ ಮುಖ್ಯ ಗಮನವಾಗಿರಬೇಕು. ಶಿಕ್ಷಕಿ, ಕೌನ್ಸಲಿಂಗ್ ಹಾಗು ಇಸ್ಲಾಮಿಕ್ ಶಿಕ್ಷಣ ನೀಡುವಂತಹ ಕೆಲಸಗಳನ್ನಷ್ಟೇ ಮಾಡಬೇಕು” ಎಂದು ಹೇಳುತ್ತಾನೆ.

ಮತ್ತೊಂದು ವೀಡಿಯೊದಲ್ಲಿ, ಫರೀಕ್ ಜಾಕೀರ್ ನಾಯಕ್ ಮಾತನಾಡುತ್ತ, ಭಾಷೆಯ ಪರಿಭಾಷೆಯಲ್ಲಿ ಕಾಫಿರ್ ಎಂದರೆ ಅಡಗಿಕೊಳ್ಳುವವನು ಎಂದರ್ಥ, ಆದರೆ ಇಸ್ಲಾಂನಲ್ಲಿ ಕಾಫಿರ್ ಎಂದರೆ ಇಸ್ಲಾಂ ಅನ್ನು ಸ್ವೀಕರಿಸದವನು ಎಂದರ್ಥ. ಈ ಮೂಲಕ ಇಸ್ಲಾಮೇತರರೆಲ್ಲ ಅಧರ್ಮಿಗಳಾದರು ಎಂದು ಆತ ಹೇಳುತ್ತಾನೆ. ಫಾರಿಕ್ ಪ್ರಕಾರ, ಇಸ್ಲಾಮಿಕ್ ಅಲ್ಲದವರನ್ನು ಕಾಫಿರ್ ಎಂದು ಕರೆಯಲು ಅನುಮತಿ ಇದೆ. ಯಾವುದೇ ಕಾಫಿರ್‌ರಿಗೆ ತಮ್ಮನ್ನ ಕಾಫಿರ್ ಅಂತ ಕರೆಸಿಕೊಳ್ಳೋಕೆ ಇಷ್ಟವಿಲ್ಲ ಅಂತಾದ್ರೆ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು” ಎಂದು ಆತ ಹೇಳುತ್ತಾನೆ.

ಫಾರಿಕ್ ಝಾಕಿರ್ ನಾಯ್ಕ್ ಇನ್ನೊಂದು ವಿಡಿಯೋದಲ್ಲಿ ಆತ ಝಕಾತ್ ಬಗ್ಗೆಯೂ ಹೇಳಿದ್ದಾನೆ. ಇಸ್ಲಾಮೇತರರಿಗೆ ಎಷ್ಟೇ ಅಗತ್ಯವಿದ್ದರೂ ಅವರಿಗೆ ಝಕಾತ್ ನೀಡಬಾರದು ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಅಥವಾ ಇಸ್ಲಾಂ ಧರ್ಮದ ಕಡೆಗೆ ಒಲವು ತೋರುವವರಿಗೆ ಮಾತ್ರ ಝಕಾತ್ (ದಾನ) ನೀಡಬಹುದು ಎಂದು ಹೇಳಲು ಆತ ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸಿದ್ದಾನೆ. ಅದರ ಅರ್ಥವನ್ನು ವಿವರಿಸಿದ ಆತ, ಇಸ್ಲಾಂಗೆ ಮತಾಂತರಗೊಳ್ಳುವ ನಿರೀಕ್ಷೆಯಿರುವವರಿಗೆ ಮಾತ್ರ ಝಕಾತ್ ನೀಡಬಹುದು ಎಂದು ಹೇಳುತ್ತಾನೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ಅಲ್ಲಾಹನು ಇಸ್ಲಾಮೇತರರಿಗೂ ಅನ್ನ, ಮನೆ ಕರುಣಿಸಿದ್ದಾನೆ. ನೀರು ಅಥವಾ ಗಾಳಿ, ಇದೆಲ್ಲವನ್ನೂ ಇಸ್ಲಾಮಿಯೇತರರಿಗೂ ಕೊಟ್ಟಿದ್ದಾನೆ ಯಾಕಂದ್ರೆ ಅವುಗಳಿರದಿದ್ದರೆ ಇಲ್ಲದೆ ಅವರು ಸಾಯುತ್ತಾರೆ – ಇದು ಅಲ್ಲಾ ಅವರ ಮೇಲೂ ಕರುಣೆಯನ್ನು ಹೊಂದಿದ್ದಾನೆ ಎಂಬುದನ್ನು ತೋರಿಸುತ್ತದೆ. ಹುಟ್ಟುವ ಪ್ರತಿಯೊಂದು ಮಗುವೂ ಇಸ್ಲಾಂ ಧರ್ಮದ ನಂಬುವ ಮಗುವಾಗೇ ಹುಟ್ಟುತ್ತದೆ, ನಂತರ ಆ ಮಕ್ಕಳನ್ನ ಹಿಂದೂ ಅಥವಾ ಕ್ರೈಸ್ತರನ್ನಾಗಿ ಮಾಡಲಾಗುತ್ತದೆ ಎಂಬ ಸಂದೇಶವನ್ನು ಅಲ್ಲಾ ತಾನೇ ಜನರಿಗೆ ತಿಳಿಸುತ್ತಾನೆ” ಎಂದು ಆತ ಹೇಳುತ್ತಾನೆ.

ಯಾರಾದರೂ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದರೆ, ಅವರು ಮತಾಂತರಗೊಳ್ಳುತ್ತಿದ್ದಾರೆ ಅನ್ನೋ ಅರ್ಥವಲ್ಲ, ಬದಲಾಗಿ ಅವರು ಇಸ್ಲಾಂ ಧರ್ಮದಲ್ಲಿ ಜನಿಸಿದ ಕಾರಣ ಅವರು ತಮ್ಮ ಧರ್ಮಕ್ಕೆ ಮರಳುತ್ತಿದ್ದಾರೆ ಎಂದರ್ಥ ಎಂದು ಫಾರೀಕ್ ನಾಯಕ್ ಹೇಳುತ್ತಾನೆ. ಕಾಫಿರರು ಇಸ್ಲಾಂಗೆ ಮತಾಂತರಗೊಂಡರೆ ಅಲ್ಲಾಹನು ಅವರನ್ನು ಕ್ಷಮಿಸುವ ಕಾರಣ ಅವರು ಇಸ್ಲಾಂ ಅನ್ನು ಅಳವಡಿಸಿಕೊಳ್ಳಬೇಕು ಎಂದು ಜನರಿಗೆ ಮನವರಿಕೆ ಮಾಡಲು ಅಲ್ಲಾಹ್ ಒಂದಲ್ಲ ಒಂದು ರೂಪದಲ್ಲಿ ಸಂದೇಶಗಳನ್ನು ಕಳುಹಿಸುತ್ತಾನೆ ಎಂದೂ ಆತ ಹೇಳಿದ್ದಾನೆ.

Advertisement
Share this on...