ಕೊನೆಗೂ ಬಂತು ಗೋವಾ ಹಾಗು ಪಂಜಾಬ್‌ನ ಓಪಿನಿಯನ್ ಪೋಲ್: ಎರಡೂ ರಾಜ್ಯಗಳಲ್ಲಿ ಯಾವ ಪಕ್ಷ ಗೆಲ್ಲುತ್ತಿದೆ ನೋಡಿ, ಕಂಗಾಲಾದ ಕಾಂಗ್ರೆಸ್

in Kannada News/News 1,041 views

ನವದೆಹಲಿ: ಮುಂದಿನ ವರ್ಷ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತಿದೆ. ವಾಗ್ದಾಳಿ, ಆರೋಪ, ಪ್ರತ್ಯಾರೋಪ, ಲಾಭದಾಯಕ ಭರವಸೆಗಳನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಇದೇ ವೇಳೆ ಮತದಾರರ ಮನಃಸ್ಥಿತಿ ಅರಿಯಲು ಸಮೀಕ್ಷೆಗಳು ನಡೆಯುತ್ತಿವೆ. ಈ ಸುದ್ದಿಯಲ್ಲಿ ನಾವು ಪಂಜಾಬ್ ಮತ್ತು ಗೋವಾಗಳ ಬಗ್ಗೆ ಬಹಿರಂಗಗೊಂಡಿರುವ ಸಮೀಕ್ಷೆಗಳ ಫಲಿತಾಂಶಗಳ ಬಗ್ಗೆ ಹೇಳಲಿದ್ದೇವೆ. ಅಷ್ಟಕ್ಕೂ ಗೋವಾದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಶೇರ್ ಇದೆ? ಬನ್ನಿ ನಿಮಗೆ ವಿಸ್ತೃತವಾಗಿ ತಿಳಿಸುತ್ತೇವೆ.

ನ್ಯೂಸ್ ಎಕ್ಸ್ (News X) ನ ಈ ಸಮೀಕ್ಷೆಯಲ್ಲಿ ಗೋವಾದ 20 ಸಾವಿರ ಜನರನ್ನು ಪ್ರಶ್ನಿಸಲಾಗಿದೆ. ಇದರ ಪ್ರಕಾರ ಗೋವಾದಲ್ಲಿ ಬಿಜೆಪಿ ಅತಿ ಹೆಚ್ಚು ವೋಟ್ ಶೇರ್ ಹೊಂದಿದೆ. AAP ಎರಡನೇ ಸ್ಥಾನದಲ್ಲಿದ್ದರೆ, ಗೋವಾದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಲುಪಿದೆ. ಗೋವಾದಲ್ಲಿ ಭಾರತೀಯ ಜನತಾ ಪಕ್ಷ ಶೇ.32.8ರಷ್ಟು ಮತಗಳನ್ನು ಪಡೆಯುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಶೇ.18.8ರಷ್ಟು ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷ ಶೇ.22.1ರಷ್ಟು ಮತಗಳನ್ನು ಪಡೆಯುತ್ತಿದೆ. 26.30ರಷ್ಟು ವೋಟ್ ಶೇರ್ ಇತರರ ಖಾತೆಗೆ ಸೇರುತ್ತಿದೆ.

Advertisement

ನಾವು ಪಂಜಾಬ್ ಬಗ್ಗೆ ಮಾತನಾಡಿದರೆ, ಇಲ್ಲಿ ನಡೆದ ಸಮೀಕ್ಷೆಯಲ್ಲಿ 45000 ಜನರನ್ನು ಪ್ರಶ್ನಿಸಲಾಗಿದೆ. ಬಳಿಕ ಹೊರಬಿದ್ದಿರುವ ಅಂಕಿ ಅಂಶಗಳು ಹೀಗಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅದರ ವೋಟ್ ಶೇರ್ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.

ಬಹಿರಂಗಪಡಿಸಿದ ಅಂಕಿಅಂಶಗಳ ಪ್ರಕಾರ, AAP 38.83 ಶೇಕಡಾ ಮತಗಳನ್ನು ಪಡೆಯುತ್ತಿದೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು 35.2 ಶೇಕಡಾ ಮತಗಳನ್ನು ಪಡೆಯುತ್ತಿದೆ ಮತ್ತು SAD 21.01 ಮತ ಹಂಚಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಿಜೆಪಿ 2.33 ರಷ್ಟು ವೋಟ್ ಶೇರ್ ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ನಾವು ಸೀಟುಗಳ ಬಗ್ಗೆ ಮಾತನಾಡುವುದಾದರೆ, ಗೋವಾದಲ್ಲಿ ಬಿಜೆಪಿ 20-22 ಸ್ಥಾನಗಳನ್ನು ಪಡೆಯುತ್ತಿದೆ, ಕಾಂಗ್ರೆಸ್ 04-06 ಸ್ಥಾನಗಳನ್ನು ಪಡೆಯುತ್ತಿದೆ, ಎಎಪಿ 05-07 ಸ್ಥಾನಗಳನ್ನು ಪಡೆಯುತ್ತಿದೆ ಮತ್ತು ಇತರರು 08-09 ಸ್ಥಾನಗಳನ್ನು ಪಡೆಯುತ್ತಿದ್ದಾರೆ. ಪಂಜಾಬ್‌ನಲ್ಲಿ ಎಎಪಿ 47-52 ಸ್ಥಾನಗಳನ್ನು, ಕಾಂಗ್ರೆಸ್ 40-45 ಸ್ಥಾನಗಳನ್ನು, ಬಿಜೆಪಿ 01-02 ಸ್ಥಾನಗಳನ್ನು, SAD 22-26 ಸ್ಥಾನಗಳನ್ನು ಮತ್ತು ಇತರರು 00 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಪಂಜಾಬ್ ಒಟ್ಟು 117 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದರೆ ಗೋವಾ ಒಟ್ಟು 40 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ.

 

Advertisement
Share this on...